ಮೇಷ ರಾಶಿ: ಇಂದು ವೈಕುಂಠ ಏಕಾದಶಿ, ಉಪವಾಸ ಮಾಡಿದರೆ ಈ ರಾಶಿಯವರಿಗೆ ಶುಭ ಫಲ. ಉದ್ಯೋಗದಲ್ಲಿ ಭಾರಿ ಮುನ್ನಡೆ. ನೀವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇರಲಿ. ಮಹಿಳೆಯರಿಗೆ ಗೌರವ ಸ್ಥಾನ ಲಭ್ಯವಾಗುವುದು. ಖಾಸಗಿ ಉದ್ಯೋಗಿಗಳಿಗೆ ಉನ್ನತಿ. ಕೋರ್ಟ್ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 5
ವೃಷಭ ರಾಶಿ: ಇಂದು ನಿಮ್ಮ ಮನಸ್ಸಿಗೆ ನೆಮ್ಮದಿ. ಶ್ರೀನಿವಾಸನ ದರ್ಶನ ಮಾಡಿ, ಒಳಿತಾಗುವುದು. ಮನೆ ನಿರ್ಮಾಣ ಕೆಲಸಗಳಲ್ಲಿ ಅಭಿವೃದ್ಧಿ. ದವಸ ಧಾನ್ಯ ವ್ಯಾಪಾರಸ್ಥರಿಗೆ ಇಂದು ಲಾಭ ಕಾಣಬಹುದು. ಅನಿರೀಕ್ಷಿತ ಖರ್ಚು ಉಂಟಾಗಿ ಬೇಸರ ವಾಗುವುದು. ಶುಭಸಂಖ್ಯೆ: 7
ಮಿಥುನ ರಾಶಿ: ಇಂದು ನೀವು ಅಂದುಕೊಂಡ ಕೆಲಸದಲ್ಲಿ ಜಯ. ನಿಮ್ಮ ಮನೆ ದೇವರ ಆರಾಧನೆ ಮಾಡಿ. ಖರ್ಚು ಕಡಿಮೆ ಮಾಡಿಕೊಂಡರೆ ಲಾಭ. ಹೊಸ ವ್ಯಾಪಾರಕ್ಕೆ ಸರ್ಕಾರದಿಂದ ಸಹಾಯ ಸಿಗಬಹುದು. ಮಹಿಳೆಯರಿಗೆ ವಿದೇಶ ಪ್ರಯಾಣ ಯೋಗ ಕೂಡಿಬರಲಿದೆ. ಮನಸ್ಸಿನಲ್ಲಿ ಹೆದರಿಕೆಯ ಭಾವ ಇರುವುದು. ಶುಭಸಂಖ್ಯೆ: 4
ಕಟಕ ರಾಶಿ: ಇಂದು ಹಲವು ಧಾರ್ಮಿಕ ಕಾರ್ಯಗಳಲ್ಲಿ ಬಾಗಿಯಾಗುವ ಸಾಧ್ಯತೆ ಇದೆ. ಧರ್ಮಕಾರ್ಯಗಳ ಬಗ್ಗೆ ಆಲೋಚನೆ ಮಾಡಿದರೆ ದೇವರ ಕೃಪೆಗೆ ಪಾತ್ರರಾಗುತ್ತೀರಿ. ದಾಂಪತ್ಯದಲ್ಲಿ ವಿರಸ ಮೂಡಬಹುದು. ಕಚೇರಿಯಲ್ಲಿ ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳುವುದು ಆರೋಗ್ಯಕರ ಬೆಳವಣಿಗೆ. ಶುಭಸಂಖ್ಯೆ: 6
ಸಿಂಹ ರಾಶಿ: ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಹೊಟ್ಟೆಯ ಸಮಸ್ಯೆ ಅಜೀರ್ಣದಿಂದ ಆಸ್ಪತ್ರೆಗೆಸೇರಬಹುದು ಎಚ್ಚರಿಗೆ ಇರಲಿ. ದಾಂಪತ್ಯದಲ್ಲಿ ಹೊಂದಾಣಿಕೆ ಕಾಣಬಹುದು. ಇಂದಿನ ಏಕಾದಶಿ ಉಪವಾಸ ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಂದುಕೊಡುತ್ತದೆ. ಶುಭಸಂಖ್ಯೆ: 1
ಕನ್ಯಾ ರಾಶಿ: ಮಕ್ಕಳ ಅಭಿಪ್ರಾಯವನ್ನ ಪರಿಗಣಿಸಿದರೆ ಉಳಿತು. ಅಧಿಕ ಖರ್ಚು ಬೇಡ. ತಾಳ್ಮೆ ಇರಲಿ. ದುಡುಕಿನ ನಿರ್ಧಾರ ಮಾಡಬೇಡಿ. ಹಣಕಾಸಿನ ಸಂಸ್ಥೆಗಳ ಮಾಲೀಕರಿಗೆ ಹೆಚ್ಚಿಗೆ ಆದಾಯ ಬರುವುದು. ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗುವುದು. ಸರ್ಕಾರಿ ಅಧಿಕಾರಿಗಳಿಗೆ ಇಂದು ಕೊಂಚ ಅಸಮಾಧಾನ. ಶುಭಸಂಖ್ಯೆ: 7
ತುಲಾ ರಾಶಿ: ಏಕಾದಶಿಯ ಉಪವಾಸ ಮಾಡಿ. ಇಂದಿನ ನಿಮ್ಮ ಎಲ್ಲಾ ಕಷ್ಟಗಳನ್ನ ಶ್ರೀನಿವಾಸನಲ್ಲಿ ಹೇಳಿಕೊಳ್ಳಿ. ಶುಭ ಫಲ ನಿರೀಕ್ಷಿಸಬಹುದು. ವಿದೇಶಿ ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಇರಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ ಮಾಡುವ ಲಕ್ಷಣ ದಟ್ಟವಾಗಿದೆ. ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳಿಂದ ತೊಂದರೆ ಆಗಬಹುದು. ಶುಭಸಂಖ್ಯೆ: 9
ವೃಶ್ಚಿಕ ರಾಶಿ: ಕಷ್ಟದಲ್ಲಿ ಇದ್ದವರ ಕೈ ಬಿಡಬೇಡಿ. ಒಳ್ಳೆಯ ಸಮಯ ಬಂದೇ ಬರುತ್ತದೆ. ತಾಳ್ಮೆ ಇರಲಿ. ಇಂದು ಮನೆದೇವರ ಆರಾಧನೆ ಮಾಡಿ. ಶುಭ ಫಲ ನಿರೀಕ್ಷಿಸಬಹುದು. ಮರಳು ವ್ಯಾಪಾರದಲ್ಲಿ ಅಧಿಕ ಲಾಭ ವಾಗದು. ಸಹೋದರನಿಗೆ ಅನಾರೋಗ್ಯ ಕಾಣಿಸಬಹುದು. ಕುಟುಂಬದಲ್ಲಿ ಜಮೀನಿಗಾಗಿ ಕಲಹ ನಡೆಯಬಹುದು. ಶುಭಸಂಖ್ಯೆ:4
ಧನುಸ್ಸು ರಾಶಿ: ಇಂದು ನಿಮ್ಮ ಅನೇಕ ಕೆಲಸಗಳು ನಡೆಯುವಲ್ಲಿ ವಿಫಲವಾಗುವುದು. ಲಾಭದ ಕೆಲಸಗಳಲ್ಲಿ ವಿಘ್ನ. ಉಪವಾಸ ಮಾಡಿದರೆ ಆರೋಗ್ಯ ವೃದ್ದಿ. ಕೃಷಿ ಕೆಲಸಗಳಲ್ಲಿ ತೊಂದರೆ ಉಂಟಾಗಿ ಬೇಸರ ವಾಗಬಹುದು. ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ . ಅನವಶ್ಯಕ ವಸ್ತುಗಳ ಖರೀದಿಗೆ ಹಣವ್ಯಯ ಮಾಡದಿರಿ. ಶುಭಸಂಖ್ಯೆ:3
ಮಕರ ರಾಶಿ: ತಾಳಕ್ಕೆ ತಕ್ಕಂತೆ ಕುಣಿಯಬೇಡಿ. ಆದಷ್ಟು ಕಡಿಮೆ ಸುತ್ತಾಡಿ. ನಿಮ್ಮ ಮನೆಯಲ್ಲಿ ನೀವಿರಿ. ಅನ್ಯರ ಸಹವಾಸದಿಂದ ನಷ್ಟವೇ ಜಾಸ್ತಿ. ಕಬ್ಬಿಣ ವ್ಯಾಪಾರದಲ್ಲಿಬಹಳ ನಷ್ಟ ಕಾಣಬಹುದು. ಅಡುಗೆ ಅನಿಲ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು. ಶುಭಸಂಖ್ಯೆ: 5
ಕುಂಭ ರಾಶಿ: ಇಂದು ಉಪವಾಸ ಮಾಡಿದರೆ ದೇವರು ನಿಮಗೆ ಹತ್ತಿರ ವಾಗುತ್ತಾನೆ. ಆದಷ್ಟು ತಾಳ್ಮೆ ಇರಲಿ. ಶ್ರೀನಿವಾಸನ ದರ್ಶನ ಮಾಡಿ. ಅಧ್ಯಾಪಕರಿಗೆ ಹಾಗೂ ಶಿಕ್ಷಕರಿಗೆ ಗೌರವಾದಿಗಳು ದೊರೆಯುತ್ತವೆ. ಸಾಂಪ್ರದಾಯಿಕ ವಸ್ತುಗಳ ರಫ್ತುದಾರರಿಗೆ ಲಾಭದ ನಿರೀಕ್ಷೆ ಮಾಡಬಹುದು. ಕೃಷಿ ಕೆಲಸಗಳಿಗಾಗಿ ಖರ್ಚು ಅಧಿಕವಾಗಿ ಬೇಸರವಾಗುತ್ತದೆ. ಶುಭಸಂಖ್ಯೆ:1
ಮೀನ ರಾಶಿ: ಇಂದು ವೈಕುಂಠ ಏಕಾದಶಿ, ಪ್ರತಿ ವರ್ಷದಂತೆ ಈ ವರ್ಷವು ನಿಮ್ಮ ನೆಚ್ಚಿನ ದೇವರ ಆರಾಧನೆ ಮಾಡಿ. ಇಷ್ಟ ಪಟ್ಟ ಹುಡುಗನನ್ನು ಕಳೆದುಕೊಂಡು ದುಃಖ ಪಡಬೇಡಿ. ನಿಮ್ಮ ಕಷ್ಟದ ಸಮಯದಲ್ಲಿ ಜೊತೆಗಿದ್ದ ಹಳೆಯ ಸ್ನೇಹಿತರನ್ನ ಮರೆಯಬೇಡಿ. ಜೋಳ, ರಾಗಿ ಬೇಸಾಯಗಾರರಿಗೆ ಗಾಯವಾಗುವ ಸಂಭವ ಇದೆ. ಕುಟುಂಬದಲ್ಲಿ ಮನಸ್ತಾಪವಾಗುತ್ತದೆ. ವಿದೇಶದಲ್ಲಿರುವ ಮಕ್ಕಳಿಗೆ ಅಭಿವೃದ್ಧಿ. ಶುಭಸಂಖ್ಯೆ:6