- ಕನ್ನಡ ಚಿತ್ರರಂಗ ಉಳಿಸಲು ಸ್ಟಾರ್ಸ್ ಪಣ
- ಡೆವಿಲ್, ಮಾರ್ಟಿನ್ ರಿಲೀಸ್ ಡೇಟ್ ಅನೌನ್ಸ್ !
- ಮ್ಯಾಕ್ಸ್ , ಭೀಮ, ಭೈರತಿ ರಣಗಲ್ ಚಿತ್ರಕ್ಕೆ ಫಿಕ್ಸಾಗ್ಬೇಕಿದೆ ಮುಹೂರ್ತ
- ಈ ವರ್ಷ ಯಶ್, ರಿಷಬ್ ದರ್ಶನ ಆಗೋದು ಕಷ್ಟ ಕಷ್ಟ !
ಎಲೆಕ್ಷನ್ ಭರಾಟೆ, ಐಪಿಎಲ್ ಫೀವರ್ ನಡುವೆ ಮಾಯಲೋಕ ಮಂಕಾಗಿದ್ದು, ಬಣ್ಣದ ಲೋಕ ಬಂದ್ ಮಾಡುವ ಪರಿಸ್ಥಿತಿ ಬಂದಿದ್ದು ನಿಮಗೆಲ್ಲ ಗೊತ್ತೆಯಿದೆ. ಬಿಗ್ ಸ್ಟಾರ್ಸ್ಗಳ ಸಿನಿಮಾಗಳ ಅಬ್ಬರ ಆರ್ಭಟವಿಲ್ಲದ ಕಾರಣಕ್ಕೆ ತೆಲಂಗಾಣದಲ್ಲಿ ಸರಿಸುಮಾರು 400 ಚಿತ್ರಮಂದಿರಗಳನ್ನ ಎರಡು ವಾರಗಳ ಕಾಲ ತಾತ್ಕಾಲಿಕವಾಗಿ ಕ್ಲೋಸ್ ಮಾಡಲಾಗಿದೆ. ಇದೇ ಪರಿಸ್ಥಿತಿ ಸ್ಯಾಂಡಲ್ವುಡ್ನಲ್ಲೂ ಇದ್ದಿದ್ದರಿಂದ ಕನ್ನಡ ಚಿತ್ರೋದ್ಯಮವನ್ನ ಒಂದು ತಿಂಗಳುಗಳ ಕಾಲ ಬಂದ್ ಮಾಡಲಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದ್ವು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಭೆ ಕರೆದು ಕನ್ನಡ ಚಿತ್ರೋದ್ಯಮದ ಸಮಸ್ಯೆಗಳನ್ನ ಆಲಿಸಿ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲು ಮುಂದಾಗಿದೆ. ಈ ನಡುವೆ ಸ್ಯಾಂಡಲ್ವುಡ್ ಸ್ಟಾರ್ಸ್ ನಟರುಗಳೆಲ್ಲಾ ಚಿತ್ರೋದ್ಯಮ ಉಳಿಸಲು ಮೈ ಕೊಡವಿಕೊಂಡು ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆನ್ನಲ್ಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫೀಲ್ಡಿಗಿಳಿಯೋಕೆ ಡೇಟ್ ಫಿಕ್ಸ್ ಮಾಡಿದ್ದಾರೆ
ಯಸ್, ಮೊನ್ನೆಯಷ್ಟೇ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತಮ್ಮ ಬಹುನಿರೀಕ್ಷಿತ ಚಿತ್ರ ಡೆವಿಲ್ ರಿಲೀಸ್ ಡೇಟ್ನ ಅಫಿಷಿಯಲ್ಲಾಗಿ ಅನೌನ್ಸ್ ಮಾಡಿದರು. ಡಿಸೆಂಬರ್ ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸ್ಪೆಷಲ್ಲಾಗಿ ಡೆವಿಲ್ ಬಿಡುಗಡೆಯಾಗೋದಾಗಿ ಘೋಷಿಸಿದರು. ನಿಮಗೆಲ್ಲ ಗೊತ್ತಿರೋ ಹಾಗೇ ಡೆವಿಲ್ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನ್ಮಾ. ತಾರಕ್ ಡೈರೆಕ್ಟರ್ ಪ್ರಕಾಶ್ ವೀರ್ ಈ ಸಿನ್ಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಫಿಲ್ಮ್ ಟೀಮ್ ಸಿದ್ದವಾಗಿದೆ. ಕೋಸ್ಟಲ್ವುಡ್ ಬ್ಯೂಟಿ ರಚನಾ ರೈ ದಚ್ಚುಗೆ ನಾಯಕಿಯಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ಸೇರಿಕೊಳ್ತಿದ್ದಾರೆ. ರಿಲೀಸ್ ಡೇಟ್ ಫೈನಲ್ ಆಗಿರೋದ್ರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸೋ ಜವಬ್ದಾರಿ ಡೆವಿಲ್ ಫಿಲ್ಮ್ ಟೀಮ್ ಮೇಲಿದೆ.
ಡೆವಿಲ್ ಅನೌನ್ಸ್ ಆದ ಬೆನ್ನಲ್ಲೇ ಮಾರ್ಟಿನ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸ್ಯಾಂಡಲ್ವುಡ್ ಬೆಂಕಿಚೆಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿಸಿದ್ದಾರೆ. ಇದೇ ಅಕ್ಟೋಬರ್ 11ರಂದು ದಸರಾ ಹಬ್ಬಕ್ಕೆ ವಿಶೇಷವಾಗಿ ಮಾರ್ಟಿನ್ ತೆರೆಗೆ ಬರುತ್ತಿದೆ. ಅದ್ದೂರಿ ಜೋಡಿಯಲ್ಲಿ ಬರ್ತಿರೋ ಮಾರ್ಟಿನ್ ಮೇಲೆ ನಿರೀಕ್ಷೆ ಮುಗಿಲಿನಷ್ಟಿದೆ. ಟೀಸರ್ನಿಂದಲೇ ಹೊಸ ದಾಖಲೆ ಸೃಷ್ಟಿಸಿರೋ ಮಾರ್ಟಿನ್ ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದು, ಮೊದಲ 20 ನಿಮಿಷದಲ್ಲೇ ಮಾರ್ಟಿನ್ ಪೈಸಾ ವಸೂಲ್ ಮಾಡುತ್ತೆ ಅಂತೇಳಿದ್ದಾರೆ ಸಂಗೀತ ನಿರ್ದೇಶಕ ರವಿ ಬಸ್ರೂರ್. ಇನ್ನೂ ಮಾರ್ಟಿನ್ ಪಂಚ ಭಾಷೆಯಲ್ಲಿ ತಯಾರಾಗಿದ್ದು, ಸುಮಾರು 250 ದಿನ ಶೂಟಿಂಗ್ ಮಾಡಲಾಗಿದೆ. ಸದ್ಯ ಕನ್ನಡ ವರ್ಷನ್ ರಿರೇಕಾರ್ಡಿಂಗ್ ನಡೀತಿದ್ದು, ಬೇರೆ ಭಾಷೆಯಲ್ಲಿ ಮಾರ್ಟಿನ್ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗ್ತಿದೆ.
ಇಂಟ್ರೆಸ್ಟಿಂಗ್ ಅಂದರೆ ಕೆಡಿ ಸಿನ್ಮಾ ಟೀಮ್ ಕೂಡ ಸುದ್ದಿಗೋಷ್ಟಿ ಕರೆದಿದೆ. ಕೆಡಿ ಶೋ ಮ್ಯಾನ್ ಪ್ರೇಮ್ ಹಾಗೂ ಬಹದ್ದೂರ್ ಗಂಡು ಧ್ರುವ ಕಾಂಬಿನೇಷನ್ನಲ್ಲಿ ಬರ್ತಿರೋ ಸಿನಿಮಾ. ಇದೇ ಮೊದಲ ಭಾರಿಗೆ ಈ ಕಾಂಬೋ ಜೊತೆಯಾಗಿದ್ದು, ಸಂಜಯ್ ದತ್ತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಬಿಗ್ಸ್ಟಾರ್ಸ್ಗಳ ಸಮಾಗಮ ಇಲ್ಲಾಗಿದೆ. ಕೆಡಿ ಕೂಡ ಟೈಟಲ್ ಟೀಸರ್ನಿಂದಲೇ ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿದೆ. ಕೆಜಿಎಫ್ ನಂತರ ಅಧೀರನ ಆಗಮನ ಆಗಿರೋದ್ರಿಂದ ಬಾಲಿವುಡ್ ಬಾಬಾ ವರ್ಸಸ್ ಬೆಂಕಿ ಚೆಂಡು ಧ್ರುವ ಜುಗಲ್ ಬಂಧಿ ನೋಡೋದಕ್ಕೆ ಕಲಾಭಿಮಾನಿಗಳು ಕಣ್ಣರಳಿಸಿದ್ದಾರೆ. ಇನ್ನೊಂದು ಸ್ಪೆಷಲ್ ಅಂದರೆ ನಾಚ್ ಮೇರಿ ರಾಣಿ ನೋರಾ ಫತ್ಹೇಹಿ ಕೆಡಿ ಕಣದಲ್ಲಿ ಸೊಂಟ ಕುಣಿಸಿರೋದ್ರಿಂದ ಪಡ್ಡೆಹೈಕ್ಳು ಒಂಟಿಕಾಲಲ್ಲಿ ಕೆಡಿನಾ ಬರಮಾಡಿಕೊಳ್ಳೋದಕ್ಕೆ ಕಾಯ್ತಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಯೊಳಗೆ ಕೆಡಿ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗಲಿದೆ
ಇನ್ನೂ ಬಿಗ್ ಸಿನಿಮಾಗಳಿಲ್ಲದೇ ಬಣಗುಡ್ತಿರೋ ಚಿತ್ರಮಂದಿರಗಳಿಗೆ ಮೆರುಗು ತುಂಬೋಕೆ , ರಿಯಲ್ ಸ್ಟಾರ್ ಉಪ್ಪಿ ನಿರ್ದೇಶಿಸಿ, ನಟಿಸಿರೋ ಯುಐ ಸಿನಿಮಾ ಕೂಡ ಸಿದ್ದವಿದೆ.
ಸುಮಾರು ಒಂಭತ್ತು ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟಿರೋ ಉಪ್ಪಿ, ಯುಐ ಅನ್ನೋ ಹೊಸ ಲೋಕವನ್ನೇ ಕ್ರಿಯೇಟ್ ಮಾಡಿದ್ದಾರೆ. ಬರೋಬ್ಬರಿ 100 ಕೋಟಿ ವೆಚ್ಚದಲ್ಲಿ ತಯಾರಾಗಿರೋ ಯುಐ ಸಿನಿಮಾಗೆ ಇಂಟರ್ನ್ಯಾಷನಲ್ ಟಚ್ ಸಿಗ್ತಿದೆ. ಹೌದು, ಯುಐ ಚಿತ್ರದ ಹಾಡಿನ ಲೈವ್ ರೆಕಾರ್ಡ್ ಮಾಡೋಕೆ ಉಪ್ಪಿ ಅಂಡ್ ಟೀಮ್ ಹಂಗೇರಿಗೆ ತೆರಳಿದ್ದು, ಇದರ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಬುದ್ದಿವಂತನ ಬರ್ತ್ಡೇ ಸೆಪ್ಟೆಂಬರ್ 18ಕ್ಕೆ ಯುಐ ಸಿನಿಮಾ ವರ್ಲ್ಡ್ವೈಡ್ ರಿಲೀಸ್ ಆಗಲಿದೆಯಂತೆ.
ಇದೇ ವರ್ಷ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಕಣಕ್ಕಿಳಿಯುತ್ತಿದ್ದಾರೆ. ವಿಕ್ರಾಂತ್ ರೋಣ ನಂತರ ಕ್ರಿಕೆಟ್, ಬಿಗ್ ಬಾಸ್ನಲ್ಲಿ ತೊಡಗಿಸಿಕೊಂಡಿದ್ದರಿಂದ ಮ್ಯಾಕ್ಸ್ ಕೊಂಚ ತಡವಾಯ್ತು. ಆದ್ರೀಗ ಮ್ಯಾಕ್ಸ್ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಸ್ಟೇಜ್ನಲ್ಲಿದೆ. ಕಬಾಲಿ ಸಿನಿಮಾ ನಿರ್ಮಾಪಕ ಕಲೈಪುಲಿ ಎಸ್ ಥಾನು ಮ್ಯಾಕ್ಸ್ಗೆ ಬಂಡವಾಳ ಹೂಡಿದ್ದು, ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ ಡೈರೆಕ್ಟ್ ಮಾಡಿದ್ದಾರೆ. ತಮಿಳು ನಿರ್ಮಾಣ ಸಂಸ್ಥೆಯಾದ್ರೂ ಮ್ಯಾಕ್ಸ್ ಚಿತ್ರ ಕನ್ನಡಿಗರಿಂದ ತುಂಬಿದೆ. ಇತ್ತೀಚೆಗೆ ಮ್ಯಾಕ್ಸ್ ಸಿನ್ಮಾ ಸೆಟ್ಗೆ ಭೇಟಿಕೊಟ್ಟಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ಹುಚ್ಚ ಹಾಗೂ ಕೆಂಪೇಗೌಡ ಸಿನಿಮಾದಂತೆ ಮ್ಯಾಕ್ಸ್ ಅದ್ಭುತವಾಗಿ ತಯಾರಾಗಿದೆ ಎಂದಿದ್ದರು. ಹೀಗಾಗಿ,ಮಾಣಿಕ್ಯ ನಟನೆಯ ಮ್ಯಾಕ್ಸ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.
ಇನ್ನೂ ವರ್ಷಕ್ಕೆ ಎರಡ್ಮೂರು ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಲಗ್ಗೆ ಇಟ್ಟು ಪ್ರೇಕ್ಷಕರನ್ನು ರಂಜಿಸುತ್ತಾ, ಸಿನಿಮಾವನ್ನೇ ನಂಬಿಕೊಂಡಿರೋ ನಿರ್ಮಾಪಕರನ್ನ, ವಿತರಕರನ್ನ, ಪ್ರದರ್ಶಕರನ್ನ, ಕಾರ್ಮಿಕರನ್ನ ಉಳಿಸೋ ಪ್ರಯತ್ನ ಮಾಡುವ ಶಿವಣ್ಣ, ಈ ವರ್ಷ ಕರಟಕ ದಮನಕ ಚಿತ್ರದ ಮೂಲಕ ಅಖಾಡಕ್ಕೆ ಇಳಿದಿದ್ದರು. ಆ ಸಿನಿಮಾ ಅಷ್ಟೇನು ದೊಡ್ಡ ಮಟ್ಟದ ಲಾಭ ತಂದುಕೊಡಲಿಲ್ಲ. ಹೀಗಾಗಿ ಎಲ್ಲರ ಚಿತ್ತ ಭೈರತಿ ರಣಗಲ್ ಕಡೆ ನೆಟ್ಟಿದೆ. ಮಫ್ತಿ ಸಿನಿಮಾದ ಸೀಕ್ವೆಲ್ ರೂಪದಲ್ಲಿ ಬರ್ತಿರೋ ನರ್ತನ್ ಹಾಗೂ ಶಿವಣ್ಣ ಕಾಂಬೋದ ಭೈರತಿ ರಣಗಲ್ ಮೇಲೆ ನಿರೀಕ್ಷೆಯೂ ಇದೆ. ಈ ಚಿತ್ರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದು ಆಗಸ್ಟ್ 15ಕ್ಕೆ ರಿಲೀಸ್ ಘೋಷಿಸಲಾಗಿದೆ.
ಲಾಸ್ಟ್ ಬಟ್ ನಾಟ್ ದಿ ಲಿಸ್ಟ್ ಅನ್ನೋ ಹಾಗೇ ಸ್ಯಾಂಡಲ್ವುಡ್ ಸಲಗ ಮೇಲೂ ಸಾಗರದಷ್ಟು ನಿರೀಕ್ಷೆಯಿದೆ. ಸಲಗ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ಕರೋನಾ ಕಾಲದಲ್ಲಿ ಕಣಕ್ಕಿಳಿದಿದ್ದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು, ಥಿಯೇಟರ್ಗೆ ಜನರನ್ನ ಕರ್ಕೊಂಡು ಬರೋದ್ರಲ್ಲಿ ಯಶಸ್ವಿಯಾಗಿದ್ದರು. ಇದೀಗ ಅದೇ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಬಿಗ್ ಸ್ಟಾರ್ಸ್ಗಳ ಸಿನಿಮಾ ಇಲ್ಲ ಅನ್ನೋದು ಒಂದಾದರೆ, ಓಟಿಟಿಯಿಂದ ಜನ ಥಿಯೇಟರ್ಗೆ ಬರ್ತಿಲ್ಲ. ಈ ಸಂದರ್ಭದಲ್ಲಿ ದುನಿಯಾ ವಿಜಯ್ ಡೈರೆಕ್ಟ್ ಮಾಡಿ, ಆಕ್ಟ್ ಮಾಡಿರೋ ಭೀಮ ಸಿನಿಮಾವನ್ನ ತೆರೆಗೆ ತರಬೇಕಿದೆ. ಈಗಾಗಲೇ ಭೀಮ ಚಿತ್ರದ ಟೀಸರ್, ಹಾಡುಗಳಿಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದೆ.
ಇನ್ನೇನಿದ್ರು ಭೀಮ ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಖಾಡಕ್ಕಿಳಿಯಬೇಕಿದೆ. ಒಟ್ನಲ್ಲಿ 2024 ಆರಂಭದಲ್ಲಿ ದೊಡ್ಡ ದೊಡ್ಡ ಸ್ಟಾರ್ಸ್ಗಳ ಸಿನಿಮಾಗಳು ನಿರ್ಮಾಣ ಹಂತದಲ್ಲಿದ್ದಿದ್ದರಿಂದ ಬಿಡುಗಡೆ ಭಾಗ್ಯವಿರಲಿಲ್ಲ. ಇದೀಗ, ಸೆಕೆಂಡ್ ಹಾಫ್ನಲ್ಲಿ ಒಬ್ಬರಾದ್ಮೇಲೆ ಒಬ್ಬರು ತಮ್ಮ ಸಿನಿಮಾ ರಿಲೀಸ್ ಮಾಡಿ ಕನ್ನಡ ಚಿತ್ರೋದ್ಯಮ ಉಳಿಸಲು ಹೊರಟಿದ್ದಾರೆ. ಇದ್ರಿಂದ ಬಿಗ್ ಸ್ಕ್ರೀನ್ ನಿಟ್ಟುಸಿರು ಬಿಟ್ಟಿದೆ. ಸ್ಟಾರ್ಸ್ ಸಿನಿಮಾಗಳ ಆಗಮನ ಸುದ್ದಿ ಕೇಳಿ ಬಾಕ್ಸ್ ಆಫೀಸ್ ದಿಲ್ ಖುಷ್ ಆಗಿದೆ. ನೋಡೋಣ ಈ ವರ್ಷ ಬಾಕ್ಸ್ ಆಫೀಸ್ ಸುಲ್ತಾನ್ ಯಾರಾಗ್ತಾರೆ? ಯಾವ ಸ್ಟಾರ್ ಸಿನಿಮಾಗಳನ್ನ ಜನ ಅಪ್ಪಿ-ಒಪ್ಪಿಕೊಳ್ತಾರೆ ಅಂತ