ಥಾಯ್ಲೆಂಡ್: ಕುಡುಕನೊಬ್ಬ ದೇವರ ವಿಗ್ರಹ ಕೆಡವಲು ಬಂದು ಏಕಾಏಕಿ ವಿಗ್ರಹದ ಮುಂದೆ ಬಿದ್ದು, ಸಾವನ್ನಪ್ಪಿರುವ ಘಟನೆ ಥಾಯ್ಲೆಂಡ್ನ ಚೋನ್ಬುರಿ ಪ್ರಾಂತ್ಯದ ಬಾನ್ಬಂಗ್ ಜಿಲ್ಲೆಯಲ್ಲಿ ನಡೆದಿದೆ.
ಥಾಯ್ (49) ಸಾವನ್ನಪ್ಪಿದ ವ್ಯಕ್ತಿ. ಕಂಠ ಪೂರ್ತಿ ಕುಡಿದ ವ್ಯಕ್ತಿಯೊರ್ವ ಕುಡಿದ ಅಮಲಿನಲ್ಲಿ ಬೌದ್ಧ ಮಂದಿರಕ್ಕೆ ನುಗ್ಗಿ ಬುದ್ಧನ ಪ್ರತಿಮೆಯನ್ನು ಏರಿ ವಿಗ್ರಹ ಕೆಡವಲು ಯತ್ನಿಸಿದ್ದಾನೆ. ಈ ವೇಳೆ ಪ್ರತಿಮೆಯ ಚೂಪಾದ ಭಾಗವೊಂದು ಆತನ ಎದೆಗೆ ಚುಚ್ಚಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಅಲ್ಲೇ ಬಿದ್ದು ಸಾವನ್ನಪ್ಪಿದ್ದಾನೆ. ದೇವಾಲಯದ ಒಳಗೆ ಏಕಾಏಕಿ ನುಗ್ಗಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದಂತೆ ಅಲ್ಲಿದ್ದ ಬೌದ್ಧ ಸನ್ಯಾಸಿಗಳು ಆತನನ್ನು ತಡೆಯಲು ಪ್ರಯತ್ನಿಸಿದ್ದರು.
ಆದರೆ ಬೌದ್ಧ ಸನ್ಯಾಸಿಗಳ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ವಿಗ್ರಹವನ್ನು ಕೆಡವಲು ಮುಂದಾದ ವೇಳೆ ಏಕಾಏಕಿ ನೆಲದ ಮೇಲೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಮಾಡಿದ್ದು ಉಣ್ಣೋ ಮಹಾರಾಯ ಎಂದು ಕಾಮೆಂಟ್ ಮಾಡಿದ್ದಾರೆ.