ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಭಾನುವಾರ ವೀಕೆಂಡ್ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ತಡರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಬೆಳಗ್ಗೆ ದೇವಿ ದರ್ಶನ ಪಡೆದು ಪುನೀತರಾದರು. 1,000 ರೂ., 300 ರೂ. ಶುಲ್ಕವಿರುವ ವಿಶೇಷ ದರ್ಶನದ ಸಾಲುಗಳು ಕೂಡ ಭರ್ತಿಯಾಗಿವೆ. ಹಾಸನಾಂಬೆಯ ದರ್ಶನ ಪಡೆಯಲು ದಿನೇ ದಿನೇ ಭಕ್ತರ ದಂಡೇ ಹರಿದುಬಬರುತ್ತಿದೆ, ಇದರ ಬೆನ್ನಲ್ಲೇ ಹಾಸನಾಂಬ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರ ಸಂಖ್ಯೆ ಮಿತಿಮೀರಿದ್ದು, ನಿಯಂತ್ರಣ ಅಸಾಧ್ಯ ಎನ್ನುವಷ್ಟು ಒತ್ತಡ ಏರ್ಪಟ್ಟ ಹಿನ್ನೆಲೆಯಲ್ಲಿ ವಿಶೇಷ ದರ್ಶನದ ಟಿಕೆಟ್, VVIP ಪಾಸ್ ವ್ಯವಸ್ಥೆ ರದ್ದುಗೊಳಿಸಲಾಗಿದೆ.
ಇದನ್ನು ಓದಿ: ನಟ ದರ್ಶನ್ ಫುಲ್ ರಿಲ್ಯಾಕ್ಸ್..!
ದೇವಾಲಯದ ಎಲ್ಲ ಟಿಕೆಟ್ ಸಾಲುಗಳು, ಧರ್ಮದರ್ಶನ, ಗಣ್ಯರ ಪಾಸುಗಳ ಸಾಲು ಕೂಡ ಕಿಲೋಮೀಟರ್ ಗಟ್ಟಲೆ ಉದ್ದಕ್ಕೆ ಬೆಳೆದಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಮುಖ್ಯದ್ವಾರದ ಎದುರು ಜಮಾಯಿಸಿದ್ದಾರೆ. ಇದರಿಂದ ಬಿಎಂ ರಸ್ತೆಯಲ್ಲಿ ಭಾರಿ ಒತ್ತಡ ಏರ್ಪಟ್ಟಿದ್ದು ಪೊಲೀಸರು ಜನರನ್ನು ನಿಯಂತ್ರಿಸಲು ಬಲಪ್ರಯೋಗಿಸುವ ಹಂತ ತಲುಪುವಂತಾಗಿತ್ತು.
ನೈವೇದ್ಯಕ್ಕಾಗಿ 2 ಗಂಟೆಗೆ ಗರ್ಭಗುಡಿ ಬಾಗಿಲು ಮುಚ್ಚಲಿದ್ದು ಮಧ್ಯಾಹ್ನದ ನಂತರ ಭಕ್ತರ ಒತ್ತಡ ತೀವುಗೊಳ್ಳುವ ಸಾಧ್ಯತೆ ಇದೆ.