ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ UI ಸಿನಿಮಾದ ಬಿಗ್ ಅನೌನ್ಸ್ಮೆಂಟ್ ಬಂದಿದೆ. ಆಗಸ್ಟ್-12 ರಂದು ಬೆಳಗ್ಗೆ 11.03 ಗಂಟೆಗೆ ಬದಲು ಆಗಸ್ಟ್-14 ಕ್ಕೆ ಮುಂದೆ ಹೋಗಿದೆ. ಇದಕ್ಕೆ ಕಾರಣ ಏನು ಅನ್ನೋದು ಕುತೂಹಲ ಮೂಡಿಸಿದೆ. ಆದರೆ, ಈ ಬಗ್ಗೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಏನು ಹೇಳಿಕೊಂಡಿಲ್ಲ. ಬದಲಾಗಿ, ತಮ್ಮ UI ಸಿನಿಮಾ ಬಿಗ್ ಅನೌನ್ಸ್ಮೆಂಟ್ ಆಗುತ್ತದೆ. ಆದರೆ, ಅದು ಈ ಸೋಮವಾರ ಅಲ್ಲ, ಬದಲಾಗಿ 14 ರಂದು 11.03ಕ್ಕೆ ಅನೌನ್ಸ್ ಆಗುತ್ತದೆ ಅಂತಲೇ ಹೇಳಿಕೊಂಡಿದ್ದಾರೆ. ಆ ಪ್ರಕಾರ ಆಗಸ್ಟ್-12 ರಂದು ಬೆಳಗ್ಗೆ 11.03ಕ್ಕೆ ಚಿತ್ರದ ಬಿಗ್ ಅನೌನ್ಸ್ಮೆಂಟ್ ಅಂತಲೂ ಸಿನಿಮಾ ತಂಡ ಹೇಳಿಕೊಂಡಿತ್ತು. ಆದರೆ, ಇದೀಗ ಈ ಬಿಗ್ ಅನೌನ್ಸ್ಮೆಂಟ್ ಮುಂದಕ್ಕೆ ಹೋಗಿದೆ. ಹಾಗಂತ ಸಿನಿಮಾದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹೇಳಿಕೊಂಡಿದ್ದಾರೆ. ತಮ್ಮ ಟ್ವಿಟರ್ ಪೇಜ್ನಲ್ಲೂ ಈ ಬಿಗ್ ಅನೌನ್ಸ್ಮೆಂಟ್ನ ಹೊಸ ಡೇಟ್ ಮತ್ತು ಟೈಮ್ ಬರೆದುಕೊಂಡಿದ್ದಾರೆ.
UI ಸಿನಿಮಾದ ಬಿಗ್ ಅನೌನ್ಸ್ಮೆಂಟ್ ಇದೇ ತಿಂಗಳು ಬುಧವಾರ ಆಗಸ್ಟ್-14 ರಂದು ಮಾಡುತ್ತಿದ್ದೇವೆ. ಬೆಳಗ್ಗೆ 11 ಗಂಟೆ 03 ನಿಮಿಷಕ್ಕೆ ಈ ಅನೌನ್ಸ್ಮೆಂಟ್ ಇರುತ್ತದೆ ಅಂತಲೇ ಕೆ.ಪಿ.ಶ್ರೀಕಾಂತ್ ಹೇಳಿದ್ದಾರೆ. ಆದರೆ, ಯಾಕೆ ಈ ಬದಲಾವಣೆ ಅನ್ನೋ ಪ್ರಶ್ನೆಗೆ ಉತ್ತರ ಏನು ಕೊಟ್ಟಿಲ್ಲ. ಆದರೆ, ಈ ಬುಧವಾರ ಬಿಗ್ ಅನೌನ್ಸ್ಮೆಂಟ್ ಗ್ಯಾರಂಟಿ ಅನ್ನೋ ಅರ್ಥದಲ್ಲಿಯೇ ಹೊಸ ಡೇಟ್ ಅನ್ನ ಕೆ.ಪಿ.ಶ್ರೀಕಾಂತ್ ಈಗ ಹೇಳಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ತಮ್ಮ UI ಸಿನಿಮಾ ಚಿತ್ರದ ರಿಲೀಸ್ ಬಗ್ಗೆ ಮಾತನಾಡಿದ್ದಾರೆ. ಗೌರಿ ಸಿನಿಮಾದ ಇವೆಂಟ್ ಬಗ್ಗೆ ಗೆಸ್ಟ್ ಆಗಿಯೇ ಉಪ್ಪಿ ಬಂದಿದ್ದರು. ಆದರೆ, ಇಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಒಂದು ಮಾತು ಹೇಳಿದ್ರು. ಹೌದು, ಉಪ್ಪಿ ತಮ್ಮ ಸಿನಿಮಾದ ರಿಲೀಸ್ ಬಗ್ಗೇನೆ ಹೇಳಿಕೊಂಡಿದ್ದಾರೆ.
ಅಭಿಮಾನಿಗಳು UI ಸಿನಿಮಾ ಬಗ್ಗೆ ಕೂಗಿ ಕೇಳಿದಾಗ, ಉಪ್ಪಿ ಒಂದು ಮಾತು ಹೇಳಿದ್ರು. ನಮ್ಮ UI ಸಿನಿಮಾ ಅತಿ ಶೀಘ್ರದಲ್ಲಿಯೇ ರಿಲೀಸ್ ಆಗುತ್ತದೆ. UI ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ದೂರದ ಹಂಗೇರಿಯಾದಲ್ಲಿಯೇ ಚಿತ್ರಕ್ಕೆ ವಿಶೇಷ ಸಂಗೀತದ ಸ್ಪರ್ಶ ಕೊಡಿಸಿದ್ದಾರೆ. ಆರ್.ಆರ್. ಕೂಡ ಇಲ್ಲಿಯೇ ಆಗಿದೆ. ಒಂದು ರೀತಿ ಉಪ್ಪಿಯ ಈ ಚಿತ್ರಕ್ಕೆ ರಿಯಲ್ ಸಂಗೀತ ಸಾಧನ ಹಾಗೂ ವಿಶೇಷ ಸಂಗೀತದ ಸ್ಪರ್ಶವನ್ನೂ ಕೊಡಿಸಿದ್ದಾರೆ. ಒಟ್ಟಾರೆ, UI ಸಿನಿಮಾ ಕನ್ನಡದ ಬಹು ನಿರೀಕ್ಷಿತ ಚಿತ್ರವೇ ಆಗಿದೆ.