ದೆಹಲಿಯ ಗುರುಗ್ರಾಮ್ನ ಫೋರ್ಟಿಸ್ ಆಸ್ಪತ್ರೆಯಲ್ಲಿ 34 ವಯಸ್ಸಿನ ಯುವಕನಿಗೆ ತುರ್ತಾಗಿ ಹೃದಯ ಕಸಿ ಮಾಡುವ ಅಗತ್ಯವಿತ್ತು. ಹರಿಯಾಣದ ರೋಹ್ಟಕ್ ಪ್ರದೇಶದ ಯುವಕನೊಬ್ಬನು ಹಾರ್ಟ್ ಫೆಲ್ಯೂವರ್ನಿಂದ ಬಳಲುತ್ತಿದ್ದರು ಕೂಡಲೇ ಹೃದಯದ ಕಸಿ ಮಾಡುವ ಅಗತ್ಯವಿತ್ತು. ಅದಕ್ಕೆ ಹೃದಯ ನೀಡಲು ದಾನಿಗಳು ಬೇಕಾಗಿತ್ತು. ಸಮಯ ಬಹಳ ಕಡಿಮೆಯಿತ್ತು. ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿತ್ತು. ಕೊನೆಗೆ ಕೊಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ದಾನ ಮಾಡಲು ಒಂದು ಕುಟುಂಬ ರೆಡಿಯಾಗಿತ್ತು. 54 ವರ್ಷದ ಮಹಿಳೆಯೂ ಮೆದುಳು ನಿಷ್ಕ್ರಿಯಗೊಂಡ ಪೇಷಂಟ್ನ ಕುಟುಂಬಸ್ಥರು ಹೃದಯ ದಾನ ಮಾಡುವುದಾಗಿ ಹೇಳಿದಾಗ ಶುರುವಾಯ್ತು ಆಪರೇಷನ್ ಕೊಲ್ಕತ್ತಾ ಟು ಗುರುಗ್ರಾಮ್.
ಕೋಲ್ಕತ್ತಾದ ಪೊಲೀಸರು ಸರ್ಕಾರಿ ಆಸ್ಪತ್ರೆಯಿಂದ ಏರ್ಪೋರ್ಟ್ವರೆಗೂ ಗ್ರೀನ್ ಕಾರಿಡಾರ್ ನಿರ್ಮಿಸಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೃದಯವನ್ನು ಏರ್ಪೋರ್ಟ್ಗೆ ತಲುಪಿಸುವಲ್ಲಿ ಯಶಸ್ವಿಯಾದ್ರು. ಇಂಡಿಗೋ ಏರ್ಲೈನ್ಸ್ ಮೂಲಕ ದೆಹಲಿ ತಲುಪಿದ ಹೃದಯ ಅಲ್ಲಿಂದ. 18 ಕಿಲೋ ಮೀಟರ್ ಜರ್ನಿಯನ್ನು ಮುಗಿಸಬೇಕಿತ್ತು. ದೆಹಲಿಯ ಇಂದಿರಾಗಾಂಧಿ ಏರ್ಪೋರ್ಟ್ನಿಂದ ಗುರುಗ್ರಾಮ್ವರೆಗೂ ಸಾಗಬೇಕಿತ್ತು. ದೆಹಲಿ ಮತ್ತು ಗುರುಗ್ರಾಮ್ ಪೊಲೀಸರು ಸೇರಿ ಒಟ್ಟು ನೂರು ಆಫೀಸರ್ಗಳು ಗ್ರೀನ್ ಕಾರಿಡಾರ್ ನಿರ್ಮಿಸಿ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟರು. 18 ಕಿಲೋ ಮೀಟರ್ ದೂರವನ್ನು ಕೇವಲ 13 ನಿಮಿಷದಲ್ಲಿ ಕ್ರಮಿಸಿದ ಆ್ಯಂಬುಲೆನ್ಸ್ ಹೃದಯವನ್ನು ಗುರುಗ್ರಾಮ್ ಪೋರ್ಟಿಸ್ ಆಸ್ಪತ್ರೆಗೆ ತಂದು ತಲುಪಿಸಿತು. ಡಾ.ಉದ್ಗೀತ್ ಧೀರ ಅವರ ನೇತೃತ್ವದಲ್ಲಿ ನಡೆದ ಹೃದಯದ ಆಪರೇಷನ್ ಕೂಡ ಯಶಸ್ವಿಯಾಗಿ ನೇರವೇರಿತು. ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಈಗ ರೋಗಿಯ ಆರೋಗ್ಯದಲ್ಲಿ ಸ್ಥಿರತೆ ಇದ್ದು ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದೆ ಎಂದು ಹೇಳಿದ್ದಾರೆ.