ಅನನ್ಯಾ ಪಾಂಡೆ, ಬಾಲಿವುಡ್ನ ಭರವಸೆಯ ನಟಿ. ನಟನೆ, ಬ್ಯೂಟಿ ಒಂದು ತೂಕವಾದರೆ, ಈಕೆಯ ಸ್ಟೈಲ್ ಮತ್ತೊಂದು ಲೆವೆಲ್. ಫ್ಯಾಶನ್ ವೀಕ್ಗಳಲ್ಲಿ ಹೆಜ್ಜೆ ಹಾಕುವ ಈಕೆ, ಸ್ಟೈಲ್, ಕಸ್ಟೂಮ್ ಜೊತೆ ರಾಜಿ ಮಾಡಿಕೊಳ್ಳಲ್ಲ. ಡಿಸೈನರ್ ಬಟ್ಟೆ ಧರಿಸಿ ಮಸ್ತ್ ಮಸ್ತ್ ಫೋಟೋಶೂಟ್ ಮಾಡಿಸ್ತಾ ಇರ್ತಾರೆ. ಮತ್ತೆ ಬಾಲಿವುಡ್ ಮಂದಿ ಒಮ್ಮೆ ಹಾಕಿಕೊಂಡ ಡ್ರೆಸ್ ಅನ್ನು ಮತ್ತೆ ಹಾಕಲ್ಲ ಅನ್ನೋ ಮಾತಿದೆ. ಆದರೆ ಈಗಿನ ನಾಯಕಿಯರು ಅದನ್ನು ಗಾಳಿಗೆ ತೂರಿದ್ದಾರೆ. ಒಮ್ಮೆ ಧರಿಸಿದ ಬಟ್ಟೆಯನ್ನೇ ಬೇರೆ ರೀತಿಯ ಸ್ಟೈಲಿಂಗ್ ಮಾಡಿ ಹಾಕುವ ಟ್ರೆಂಡ್ ಹುಟ್ಟು ಹಾಕ್ತಿದ್ದಾರೆ.
ಅನನ್ಯಾ ಪಾಂಡೆ ಕೂಡ ಈ ಟ್ರೆಂಡ್ ಫಾಲೋ ಮಾಡ್ತಿದ್ದಾರೆ. ಇತ್ತೀಚೆಗೆ ಅವರ ತಂಗಿಯ ಮದುವೆಯಲ್ಲಿ ಹಾಕಿಕೊಂಡ ಡ್ರೆಸ್ ಮೂಲಕ ಸುದ್ದಿಯಲ್ಲಿದ್ದಾರೆ. ಅಮ್ಮನ 21ವರ್ಷದ ಹಳೆಯ ಡ್ರೆಸ್ನಲ್ಲಿ ಅನನ್ಯಾ ಸ್ಟೈಲಿಂಗ್ ಮಾಡಿದ್ದಾರೆ. ಅನನ್ಯಾ ಪಾಂಡೆ ತನ್ನ ಸೋದರಸಂಬಂಧಿಯ ನಿಶ್ಚಿತಾರ್ಥದಲ್ಲಿ ತನ್ನ ತಾಯಿ ಭಾವನಾ ಪಾಂಡೆಯ 21 ವರ್ಷದ ಹಳೆಯ ಡ್ರೆಸ್ ಧರಿಸಿ ಮದುವೆಗೆ ಹೋಗಿದ್ದಾರೆ. ಅನನ್ಯಾ ಪಾಂಡೆ ತಮ್ಮ ಕಸಿನ್ ದೀಯಾ ಶ್ರಾಫ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಫ್ಯಾಶನ್ ಜಗತ್ತಿನಲ್ಲಿ ಹೊಸ ಟ್ರೆಂಡ್ ಸೃಷ್ಠಿ ಮಾಡುವಂತಹ ಎಥ್ನಿಕ್ ಲುಕ್ನಲ್ಲಿ ಮಿಂಚಿದ್ದಾರೆ.
ಆಕ್ವಾ-ಬ್ಲೂ ಬಣ್ಣದ ಈ ಸೂಟ್ ಅನ್ನು 21 ವರ್ಷಗಳ ಹಿಂದೆ ರೋಹಿತ್ ಬಾಲ್ ಭಾವನಾ ಪಾಂಡೆಗೋಸ್ಕರ ವಿನ್ಯಾಸ ಮಾಡಿದ್ದರು. ಈ ಹಳೆಯ ಅಮ್ಮನ ಡ್ರೆಸ್ ಅನ್ನು ಅದಕ್ಕೊಪ್ಪುವ ಹಾಗೆ ಸ್ಟೈಲಿಂಗ್ ಮಾಡಿ ಧರಿಸಿ ಸಿಕ್ಕಾಪಟ್ಟೆ ಮುದ್ದಾಗಿ ಕಾಣ್ತಿದ್ದಾರೆ ಅನನ್ಯಾ ಪಾಂಡೆ.