ಸೌತ್ ಆಫ್ರಿಕಾ ವಿರುದ್ಧ ಮೊದಲ ಟಿ20ಯಲ್ಲಿ ಆರ್ಭಟಿಸಿದ್ದ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು 2ನೇ ಟಿ20ಯಲ್ಲಿ ಸೈಲೆಂಟ್ ಶೂರರಾಗಿಬಿಟ್ರು. ನಿನ್ನೆ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕನ್ ಬ್ಯಾಟ್ಸ್ಮನ್ಗಳು ಮರೆದಾಡಿದ್ರೆ, ಇಂಡಿಯನ್ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ರನ್ಗಳಿಕೆ ತಿಣುಕಾಟ ನಡೆಸಿಬಿಟ್ರು.
ಇದನ್ನು ಓದಿ: ಹುಡುಗನಿಂದ ಹುಡುಗಿಯಾಗಿ ಬದಲಾದ ಸ್ಟಾರ್ ಕ್ರಿಕೆಟರ್ ಮಗ!
ಡರ್ಬನ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೆರೆದಾಡಿದ್ದ ಟೀಮ್ ಇಂಡಿಯಾ ಬ್ಯಾಟರ್ಗಳು, 2ನೇ ಟಿ20ಯಲ್ಲಿ ಮಕಾಡೆ ಮಲಗಿದ್ರು. ಟಾಪ್ ಆರ್ಡರ್ ಬ್ಯಾಟರ್ಗಳಂತೂ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದರು. ಆರಂಭಿಕನಾಗಿ ಕಣಕ್ಕಿಳಿದ ಕಳೆದ ಪಂದ್ಯದ ಶತಕವೀರ ಸಂಜು ಸ್ಯಾಮ್ಸನ್, ಗೆಬೆರ್ಹಾದಲ್ಲಿ ಕಕ್ಕಾಬಿಕ್ಕಿಯಾದ್ರು. ಎದುರಿಸಿದ 3ನೇ ಎಸೆತದಲ್ಲೇ ಕ್ಲೀನ್ಬೋಲ್ಡ್ ಆದ ಸಂಜು ಡಕೌಟ್ ಆಗಿ ನಿರ್ಗಮಿಸಿದರು.
ಮತ್ತೊರ್ವ ಬ್ಯಾಟರ್ ಅಭಿಷೇಕ್ ಶರ್ಮಾದು ಅದೇ ರಾಗ. ಅದೇ ಹಾಡು. ವೈಫಲ್ಯದ ಸುಳಿಗೆ ಸಿಲುಕಿರೋ ಯುವ ಬ್ಯಾಟರ್ ಹಣೆಬರಹ ನಿನ್ನೆಯೂ ಬದಲಾಗಲಿಲ್ಲ. 4 ರನ್ಗಳಿಸಿ ಪೆವಿಲಿಯನ್ ಸೇರಿದರು. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಸಿಮಿಲಾನೆ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸೂರ್ಯ ಬಿದ್ರು. 15 ರನ್ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ತಿಲಕ್ ವರ್ಮಾ ಬೆನ್ನಲ್ಲೇ 4 ಬೌಂಡರಿ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಅಕ್ಷರ್ ಪಟೇಲ್ ಕೂಡ ಪೆವಿಲಿಯನ್ ಸೇರಿದ್ರು. ದುರಾದೃಷ್ಟಕರ ರೀತಿಯಲ್ಲಿ ನಾನ್ ಸ್ಟ್ರೈಕರ್ ಎಂಡ್ನಲ್ಲಿ ರನೌಟ್ಗೆ ಬಲಿಯಾದ್ರು. ಬಳಿಕ ಕಣಕ್ಕಿಳಿದ ರಿಂಕು ಸಿಂಗ್ ಆಟ ಬಂದಷ್ಟೇ ವೇಗವಾಗಿ ಫಿನಿಶ್ ಆಯ್ತು. 9 ರನ್ಗಳಿಸಿ ಡಗೌಟ್ ಸೇರಿದ್ರು.
ಇದನ್ನು ಓದಿ:ಪಿಡಿಒ ಪರೀಕ್ಷೆಗೆ ಹಾಲ್ ಟಿಕೆಟ್ ಪ್ರಕಟ! ಡೌನ್ಲೋಡ್ ಹೇಗೆ?
ಸೌತ್ ಆಫ್ರಿಕಾ ಬೌಲರ್ಗಳ ಎದುರು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಿಣುಕಾಟ ನಡೆಸಿದ್ರು. ಕೇವಲ 86.67ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಪಾಂಡ್ಯ, 45 ಎಸೆತಗಳಲ್ಲಿ 39 ರನ್ಗಳಿಸಿದ್ರು. ಸಾಲಿಡ್ ಬೌಲಿಂಗ್ ದಾಳಿ ನಡೆಸಿದ ಸೌತ್ ಆಫ್ರಿಕಾ, ಟೀಮ್ ಇಂಡಿಯಾವನ್ನ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು. 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 124 ರನ್ಗಳಿಸಿದ ಟೀಮ್ ಇಂಡಿಯಾ 125 ರನ್ಗಳ ಸಾಧಾರಣ ಟಾರ್ಗೆಟ್ ನೀಡ್ತು.