ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸೆಲ್ಗೆ ಜೈಲಾಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ದರ್ಶನ್ ಸೆಲ್ಗೆ ಹೊಸ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಹೊರಗಿನವರು ಯಾರಾದರೂ ಭೇಟಿಗೆ ಬಂದರೆ ಜೊತೆಗೆ ಜೈಲಿನ ಸಿಬ್ಬಂದಿ ಇರುತ್ತಾರೆ. ಇಬ್ಬರು ಸಿಬ್ಬಂದಿಯ ಭದ್ರತೆಯಲ್ಲಿ ದರ್ಶನ್ ಕರೆತರಲಾಗುತ್ತದೆ. ಹೊರಗಿನಿಂದ ಬಂದವರ ಭೇಟಿ ಬಳಿಕ ಮತ್ತೆ ಭದ್ರತೆಯಲ್ಲೇ ವಾಪಸ್ಸಾಗುತ್ತಾನೆ.
ಈ ಹಿಂದೆ ಸಿದ್ದಾರೂಢ ಎಂಬ ಕೈದಿ ಹೊರ ಬಂದ ಬಳಿಕ ಒಂದಷ್ಟು ಜೈಲು ವಿಚಾರಗಳನ್ನು ಹಂಚಿಕೊಂಡಿದ್ದ. ತಾನು ದರ್ಶನ್ ಭೇಟಿ ಮಾಡಿದ್ದೆ ಎಂದು ಹೇಳಿಕೊಂಡಿದ್ದ. ಹೀಗಾಗಿ ಇಂಥ ಘಟನೆ ಮರುಕಳಿಸದಂತೆ ದರ್ಶನ್ ಕೊಠಡಿಯ ಹೊರ ಭಾಗದಲ್ಲಿ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. ಇದೀಗ ಬೇರೆ ಯಾವ ಕೈದಿಯೂ ಭೇಟಿ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ದರ್ಶನ್ ಸೆಲ್ಗೆ ಹೊಸ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಹೊರಗಿನವರು ಯಾರಾದರೂ ಭೇಟಿಗೆ ಬಂದರೆ ಜೊತೆಗೆ ಜೈಲಿನ ಸಿಬ್ಬಂದಿ ಇರುತ್ತಾರೆ.
ಇಬ್ಬರು ಸಿಬ್ಬಂದಿಯ ಭದ್ರತೆಯಲ್ಲಿ ದರ್ಶನ್ ಕರೆತರಲಾಗುತ್ತದೆ. ಹೊರಗಿನಿಂದ ಬಂದವರ ಭೇಟಿ ಬಳಿಕ ಮತ್ತೆ ಭದ್ರತೆಯಲ್ಲೇ ವಾಪಸ್ಸಾಗುತ್ತಾನೆ. ಈ ನಡುವೆ. ಮನೆಯೂಟಕ್ಕಾಗಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನೂ ವಾಪಸ್ ಪಡೆಯಲಾಗಿದೆ. ಮನೆಯೂಟ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ದರ್ಶನ್ ಪರ ವಕೀಲರು ವಾಪಸ್ ಪಡೆದಿದ್ದಾರೆ. ತಾಂತ್ರಿಕ ಕಾರಣದಿಂದ ನಟ ದರ್ಶನ್ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.