ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದ್ದು, ಲಿಫ್ಟ್ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಲಿಫ್ಟ್ ನಿರ್ಮಿಸಲು ಅಗೆದಿದ್ದ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಮೃತಪಟ್ಟ ಘಟನೆ ನಗರದ ಕಾಡುಗೋಡಿಯ ಕನ್ನಮಂಗಲದಲ್ಲಿ ನಡೆದಿದೆ. ಮೃತನನ್ನು 7 ವರ್ಷದ ಬಾಲಕ ಸುಹಾಸ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಕಟ್ಟಡ ಕುಸಿತ; ಮೃತರ ಕುಟುಂಬಕ್ಕೆ ಮೋದಿ ಪರಿಹಾರ..!
ನಿರ್ಮಾಣದ ಹಂತದ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು, ಲಿಫ್ಟ್ ನಿರ್ಮಿಸಲು ಗುಂಡಿಯೊಂದನ್ನು ತೆಗೆಯಲಾಗಿತ್ತು ಮಳೆ ಬಂದ ಹಿನ್ನೆಲೆ ಆ ಗುಂಡಿಗೆ ನೀರು ತುಂಬಿತ್ತು. ಆಟವಾಡುತ್ತಾ ಹೋದ ಬಾಲಕ ಈ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಇದನ್ನು ನೋಡಿದ ಸ್ಥಳೀಯರು ರಕ್ಷಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ