ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 52 ವರ್ಷದ ಕನಕಪುರ ಮೂಲದ ಗುರುಪ್ರಸಾದ್ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್ ಚಿತ್ರದ ಮೂಲಕ ಮನೆಮಾತಾಗಿದ್ದರು.
ಇದನ್ನು ಓದಿ: ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ದೇಹ ಪತ್ತೆ..!
ಆದರೆ ಮಠ ಗುರುಪ್ರಸಾದ್ ಇತ್ತೀಚೆಗೆ ಮೈತುಂಬಾ ಸಾಲ ಮಾಡಿಕೊಂಡಿದ್ದರು . ಸಾಲಗಾರರ ಕೈಗೆ ಸಿಗದೇ ಪದೇ ಪದೇ ವಾಸ ಸ್ಥಳ ಬದಲಾವಣೆ ಮಾಡುತ್ತಿದ್ದರು. ಕಳೆದ 8 ತಿಂಗಳಿಂದ ಸಾಲಗಾರರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಸದಾಶಿವನಗರದ ಹೈಡ್ ಪಾರ್ಕ್ ಹೋಟೆಲ್ನಲ್ಲಿ ನಡೆದಿದ್ದ ರಂಗನಾಯಕ ಸಿನಿಮಾದ ಪ್ರಿ ರಿಲೀಸ್ ಇವೆಂಟ್ನಲ್ಲಿ ಸ್ವತಃ ಗುರುಪ್ರಸಾದ್ ಅವರೇ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು ಆದರೆ ಅಂದಿನ ಬಳಿಕ ಗುರುಪ್ರಸಾದ್ ಮತ್ತೆ ಹೊರಗೆ ಕಾಣಿಸಿಕೊಳ್ಳಲೇ ಇಲ್ಲ . ಕಳೆದ 8 ತಿಂಗಳಿನಿಂದ ಯಾರ ಕೈಗೂ ಸಿಗದೇ ಗುರುಪ್ರಸಾದ್ ಓಡಾಡುತ್ತಾಇದ್ದರು. ಸಾಲಗಾರರ ಕೈಗೆ ಸಿಗದೇ ಪದೇ ಪದೇ ವಾಸಸ್ಥಳ ಬದಲಿಸುತ್ತಿದ್ದರು. ದರೆ ಈಗ ಸಾಲದ ಬಾದೆ ತಾಳಲಾರದೆ ಅವರ ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಣಾಗಿದ್ದಾರೆ.