ಹೈದರಾಬಾದ್: ಪುಷ್ಪ-2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಚಿಕ್ಕಡಪಲ್ಲಿ ಪೊಲೀಸರಿಂದು ಇಂದು ಬೆಳಗ್ಗೆ ಪೊಲೀಸರು ಮನೆಯ ಬಳಿ ಹೋಗಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಅಲ್ಲು ಅರ್ಜುನ್ನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಈ ಬೆನ್ನಲ್ಲೇ ವಿಡಿಯೋವೊಂದು ವೈರಲ್ ಆಗಿದೆ. ಈ ವೀಡಿಯೋನಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ ರೀತಿಗೆ ನಟ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಹೌದು. ಪೊಲೀಸರಿಗೆ ಸಹಕರಿಸಲು ಸಿದ್ಧನಿರುವಾಗ ಬೆಡ್ರೂಮ್ಗೆ ನುಗ್ಗುವ ಅವಶ್ಯಕತೆ ಏನಿತ್ತು? ನಾನು ಬೆಡ್ರೂಮ್ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದೆ. ಹೊರಗಡೆ ಬಂದು ಕರೆದಿದ್ರೆ ಬರ್ತಿದ್ದೆ. ನೀವು ಬಂದಿದ್ದು, ಕರ್ಕೋಂಡು ಹೋಗಿದ್ದು ತಪ್ಪಲ್ಲ, ಆದ್ರೆ ಬೆಡ್ ರೂಮ್ ಹತ್ರ ಬಂದಿರೋದು ತಪ್ಪು. ದಿಸ್ ಈಸ್ ಟೂ ಮಚ್, ಇದು ಒಳ್ಳೇದು ಅಲ್ಲ ಸರ್ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ನಟ ಕಾಫಿ ಕುಡಿದ ಬಳಿಕ ಚಿಕ್ಕಡಪಲ್ಲಿ ಪೊಲೀಸರು ತಮ್ಮ ಕಾರಿನಲ್ಲಿ ನಟನನ್ನು ಕರೆದೊಯ್ದಿದ್ದನ್ನು ವೀಡಿಯೋದಲ್ಲಿ ತೋರಿಸಲಾಗಿದೆ.
ಸದ್ಯ ಅಲ್ಲು ಅರ್ಜುನ್ನನ್ನು ಬಂಧಿಸಿರುವ ಪೊಲೀಸರು ಮೆಡಿಕಲ್ ಟೆಸ್ಟ್ಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ನಾಂಪಲ್ಲಿ ಕೋರ್ಟ್ಗೆ ಹಾಜರು ಪಡಿಸಲು ಪೊಲೀಸರ ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.