ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜಾಮೀನು ಭವಿಷ್ಯ ಇವತ್ತು ನಿರ್ಧಾರವಾಗಲಿದೆ. ಹೈಕೋರ್ಟ್ನಲ್ಲಿ ದರ್ಶನ್ಗೆ ಎದುರಾಗಿದ್ದ ಬಿಗ್ ಡೇನಲ್ಲಿ ಸೋಮವಾರ ಕೊಂಚ ರಿಲೀಫ್ ಸಿಕ್ಕಿತ್ತು. ಬೆನ್ನುನೋವು ನಿವಾರಣೆಗೆ ಮಧ್ಯಂತರ ಜಾಮೀನು ವಿಸ್ತರಣೆ ಆಗಿತ್ತು.. ಈಗ ರೆಗ್ಯೂಲರ್ ಬೇಲ್ನ ಆದೇಶ ಇವತ್ತು ಪ್ರಕಟ ಆಗಲಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಇವತ್ತು ಶುಕ್ರವಾರ.. ದರ್ಶನ್ ಪಾಲಿಗೆ ಶುಭವಾಗುತ್ತೋ? ಬ್ಲ್ಯಾಕ್ಫ್ರೈಡೇ ಆಗುತ್ತೋ ಅಂತಾ ಅಭಿಮಾನಿಗಳು ನಿರೀಕ್ಷೆ ಇಟ್ಟಿದ್ದರು. ರೇಣುಕಾಸ್ವಾಮಿ ಕೇಸ್ನಲ್ಲಿ ಅಂದರ್ ಆಗಿದ್ದ ಆರೋಪಿಗಳು ಜೈಲ್ಲಿನಲ್ಲಿದ್ದಾರೆ. ಬೆನ್ನುನೋವಿನ ಕಾರಣಕ್ಕೆ ದರ್ಶನ್ ಬಿಜಿಎಸ್ ಆಸ್ಪತ್ರೆ ಬೆಡ್ ಸೇರಿದ್ದಾರೆ. ಕಳೆದ ತಿಂಗಳು ಮಧ್ಯಂತರ ಜಾಮೀನು ಕೊಟ್ಟು ಮೊನ್ನೆಯಷ್ಟೆ ಅವಧಿಯನ್ನ ವಿಸ್ತರಣೆ ಮಾಡಿದ್ದ ಕೋರ್ಟ್, ಈಗ ರೆಗ್ಯೂಲರ್ ಬೇಲ್ ಆದೇಶ ನೀಡಲು ಸಜ್ಜಾಗಿತ್ತು.
ಇದೀಗ ಕೊನೆಗೂ ನಟ ದರ್ಶ್ನಗೆ ಹೈಕೋರ್ಟ್ ಶುಭ ಶುಕ್ರವಾರದ ಇಂದು ಜಾಮೀನು ಮಂಜೂರಾಗಿದೆ. ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳಿಗೂ ಜಾಮೀನು ನೀಡಿದೆ. ಲಕ್ಷ್ಮಣ್, ನಾಗರಾಜು, ಅನುಕುಮಾರ್, ಜಗದೀಶ್,ಪ್ರದೂಷ್ ಗೆ ಷರತ್ತುಬದ್ಧ ಜಾಮೀನು ಮಂಜೂರು ನೀಡಲಾಗಿದೆ.ಜಾಮೀನು ನೀಡಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಪವಿತ್ರಾ ಗೌಡ ಬಹಳ ಸಮಯದಿಂದ ಬೇಲ್ಗೆ ಪ್ರಯತ್ನಿಸುತ್ತಲೇ ಇದ್ದರು. ಆದರೆ ಅವರಿಗೆ ಜಾಮೀನು ನಿರಾಕರಣೆಯಾಗಿತ್ತು. ಇದೀಗ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಪರಪ್ಪನ ಅಗ್ರಹಾರದ ಮುಂದೆ ಅವರು ಕಣ್ಣೀರಿಟ್ಟಿದ್ದಾರೆ.
ನಟ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದರು. ಆದರೆ ಅದು ನಿಗದಿತ ಸಮಯದ ಅವಧಿ. ಆರು ವಾರಗಳ ಮಧ್ಯಂತರ ಜಾಮೀನು ನಂತರ ವಿಸ್ತರಣೆ ಮಾಡಲಾಗಿತ್ತು. ಆದರೆ ಈಗ ನಟನಿಗೆ ಜಾಮೀನು ಸಿಕ್ಕಿದ್ದು ರಿಲ್ಯಾಕ್ಸ್ ಆಗಿದ್ದಾರೆ.