ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಲೇ ಇದೆ. ಬಿಗ್ಬಾಸ್ ಕೊಟ್ಟ ಟಾಸ್ಕ್ನಿಂದ ಈಗ ಮನೆ ರಣರಂಗವಾಗಿದೆ. ಪೋಸ್ಟರ್ ರಣರಂಗ ಟಾಸ್ಕ್ನಲ್ಲಿ ಮೊದಲ ಸುತ್ತಿನಲ್ಲಿ ಯಾರು ಗೆದ್ದಿಲ್ಲ. ಹೀಗಾಗಿ ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳು ಮತ್ತಷ್ಟು ಅಗ್ರೆಸಿವ್ ಆಗಿ ಆಡಿದ್ದಾರೆ.
ಅದೇ ಟಾಸ್ಕ್ನಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಜೋರಾದ ಗಲಾಟೆ ನಡೆದಿದೆ. ಎಷ್ಟರ ಮಟ್ಟಿಗೆ ಎಂದರೆ ಟಾಸ್ಕ್ಅನ್ನು ಅರ್ಧಕ್ಕೆ ನಿಲ್ಲಿಸಿ ಎಂದು ಬಿಗ್ಬಾಸ್ ಆದೇಶಿಸುವರೆಗೂ. ಅಲ್ಲದೇ ಆ ಗಲಾಟೆಯಲ್ಲಿ ಮಂಜು ಅವರ ಬಾಯಿಗೆ ಪೆಟ್ಟಾಗಿ ರಕ್ತ ಬಂದಿದೆ. ತ್ರಿವಿಕ್ರಮ್ ಆಡಿದ ಬಗೆ ನೋಡಿ ಉಗ್ರಂ ಮಂಜು ಅವರು ಮೋಕ್ಷಿತಾ, ಗೌತಮಿ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.
ಇದನ್ನು ಓದಿ: BBk11: ಮಂಜುಗೆ ಕರ್ಮ ರಿಟರ್ನ್ಸ್!
ಇನ್ನೂ ಮತ್ತೊಂದು ಕಡೆ ಕ್ಯಾಪ್ಟನ್ ಐಶ್ವರ್ಯಾ, ತ್ರಿವಿಕ್ರಮ್ ಬಳಿ ಹೋಗಿ ಹಾಗೇ ಎತ್ತಿ ಬಿಸಾಡಬಾರದಿತ್ತು. ಇದು ಕುಸ್ತಿ ಆಟ ಅಲ್ಲ ಎಂದು ಹೇಳಿದ್ದಾರೆ. ಆದರೆ ತ್ರಿವಿಕ್ರಮ್ ಮಾತ್ರ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ಟಾಸ್ಕ್ ಆಡುವ ವೇಳೆ ಬಿಗ್ ಬಾಸ್ ಸ್ಪರ್ಧಿಗಳ ಮಧ್ಯೆ ಕಾದಾಟ ಜೋರಾಗಿದೆ. ಪೋಸ್ಟರ್ನ್ನು ರಕ್ಷಿಸಿಕೊಳ್ಳುವ ವೇಳೆ ಒಬ್ಬರನೊಬ್ಬರ ಮೈಮೇಲೆ ಬಿದ್ದು ಹೊರಳಾಡಿದ್ದಾರೆ.