ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಮೂರನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಸೀಸನ್ಗಿಂತ ಈ ಬಾರಿ ವಿಭಿನ್ನವಾಗಿ ಮೂಡಿ ಬರ್ತಿದೆ ಬಿಗ್ಬಾಸ್ 11. ಬಿಗ್ಬಾಸ್ಗೆ ಬಂದ ಮೂರೇ ವಾರಕ್ಕೆ ಮನೆಯಲ್ಲಿ ಸ್ಪರ್ಧಿಗಳ ಮನಸ್ಥಿತಿ ಬದಲಾಗಿ ಬಿಟ್ಟಿದೆ. ಮೊನ್ನೆಯ ಸಂಚಿಕೆಯಲ್ಲಿ ಸ್ವರ್ಗ, ನರಕದ ಬೇಲಿಯನ್ನು ಇದ್ದಕ್ಕಿದ್ದಂತೆ ತೆಗೆದು ಹಾಕಲಾಗಿತ್ತು. ಎಲ್ಲಾ ಸ್ಪರ್ಧಿಗಳು ಒಂದೇ ಮನೆಯಲ್ಲಿ ಇದ್ದಾರೆ.
ಆದರೆ 2 ವಾರ ಮುಗಿದು ಮೂರನೇ ವಾರಕ್ಕೆ ನಾಮಿನೇಷನ್ ವಿಚಾರಕ್ಕೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮತ್ತೆ ಕಿಚ್ಚು ಹೆಚ್ಚಾಗಿದೆ. ಹೌದು, ಸದ್ಯ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕ್ಯಾಪ್ಟನ್ ಶಿಶಿರ್ ಅನುಷಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಅದಕ್ಕಾಗಿ ಅನುಷಾ ನಮಗೆ ಅವರ ತರ ಬಕೆಟ್ ಹಿಡಿಯೋದಕ್ಕೆ ಬರಲ್ಲ, ನಾವು ಇರೋದೇ ಹಿಂಗೆ ಅಂತ ಹೇಳಿದ್ದಾರೆ.
ಬಳಿಕ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡ್ತಾ ಇದ್ದಾರೆ ಇಲ್ಲಿ. ನೇರವಾಗಿ ಐಶ್ವರ್ಯಗೆ ಬಕೆಟ್ ಹಿಡಿಯೋದನ್ನು ಬಿಡ್ರಿ ಅಂತ ಅನುಷಾ ಹೇಳಿದ್ದಾರೆ. ಅದಕ್ಕೆ ಸಿಡಿದೆದ್ದ ಐಶ್ವರ್ಯ ನನಗೆ ಬಕೆಟ್ ಹಿಡಿಯೋ ಅವಶ್ಯಕತೆನೆ ಇಲ್ಲ ಅಂತ ಸಿಟ್ಟು ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 16 ಮಂದಿ ಉಳಿದುಕೊಂಡಿದ್ದಾರೆ. ಮುಂದಿನ ವಾರ ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಬಹುದು ಎಂದು ಕಾದು ನೋಡಬೇಕಿದೆ.