ಖಾಸಗಿ ಟೆಲಿಕಾಂ ಕಂಪನಿಯಾದ ಏರ್ಟೆಲ್ ಇದೀಗ 26 ರೂಪಾಯಿಯ ಪ್ರಿಪೇಯ್ಡ್ ಡೇಟಾ ಯೋಜನೆಯೊಂದನ್ನು ಪರಿಚಯಿಸಿದೆ. ನೂತನ ರೀಚಾರ್ಜ್ ಪ್ಲಾನ್ ಇಂಟರ್ನೆಟ್ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತಿದೆ.
ಏರ್ಟೆಲ್ ಕಂಪನಿಗಳು ಜುಲೈನಲ್ಲಿ ಬೆಲೆ ಏರಿಕೆಯ ನಂತರ ಹಲವು ಹಳೆಯ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಜೊತೆಗೆ ಕೆಲವು ಯೋಜನೆಗಳ ಬೆಲೆಯನ್ನು ಏರಿಸಿದೆ. ಇದೀಗ 26 ರೂಪಾಯಿಯ ಯೋಜನೆಯು ಡೇಟಾ ಪ್ರಯೋಜನವನ್ನು ಒದಗಿಸುತ್ತಿದೆ.
22 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ 1GB ಡೇಟಾ ಒದಗಿಸಿದರೆ 26 ರೂಪಾಯಿ ಪ್ಲಾನ್ ಮೂಲಕ 1.5GB ಡೇಟಾ ಉಚಿತವಾಗಿ ನೀಡುತ್ತಿದೆ. ತುರ್ತು ಡೇಟಾ ಅಗತ್ಯವಿರುವ ಬಳಕೆದಾರರಿಗೆ ಏರ್ಟೆಲ್ ಈ ವಿಶೇಷ ಯೋಜನೆಗಳ ಮೂಲಕ ಪ್ರಯೋಜನ ನೀಡುತ್ತಿದೆ.