ಕನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಜಾಲಿ ಮೂಡ್ನಲ್ಲಿ ಇದ್ದಾರೆ. ಬಹುಭಾಷಾ ನಟಿ ಅಮಲಾ ಪೌಲ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ವೆಕೇಷನ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪತಿ ಜಗತ್ ದೇಸಾಯಿ ಹಾಗೂ ಮಗುವಿನ ಜೊತೆಗೆ ಅಮಲಾ ಪೌಲ್ ಅವರು ಟ್ರಿಪ್ ಹೋಗಿದ್ದು ಚಂದದ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.
5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿಯ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಪತಿ ಜಗತ್ ದೇಸಾಯಿ ಜೊತೆಗೆ ಇಂಡೋನೇಷ್ಯಾದ ಪೊಟಾಟೋ ಹೆಡ್ ಬೀಚ್ ಕ್ಲಬ್ನಲ್ಲಿ ಎಂಜಾಯ್ ಮಾಡಿದ್ದಾರೆ. ಪತಿ ಹಾಗೂ ಮಗುವಿನ ಜೊತೆ ನಟಿ ಮುದ್ದಾಗಿ ಪೋಸ್ ಕೊಟ್ಟಿದ್ದು ಅವರ ಫೋಟೋಗಳು ವೈರಲ್ ಆಗಿವೆ.
ಇದನ್ನು ಓದಿ: ದಂಗಲ್ ಸಿನಿಮಾ ಬಗ್ಗೆ ಬಬಿತಾ ಫೋಗಟ್ ಅಚ್ಚರಿಯ ಹೇಳಿಕೆ!
ಅಮಲಾ ಪೌಲ್ ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರು. ಗರ್ಭಿಣಿಯಾದ ನಂತರ ಮದುವೆಯಾಗಿದ್ದರು. ಅವರ ಮದುವೆ ಕುಟುಂಬಸ್ಥರು ಹಾಗೂ ಆಪ್ತರ ನಡುವೆ ತುಂಬಾ ಸರಳವಾಗಿ ನಡೆದಿತ್ತು. ಜಗತ್ ದೇಸಾಯಿ ಜೊತೆ ಡೇಟಿಂಗ್ ಮಾಡುತ್ತಿರುವ ನಟಿ ಲಾಂಗ್ ಟೈಮ್ ಬಾಯ್ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿರುವ ಅಮಲಾ ಪೌಲ್ ಅವರ ಮಗ ಹಾಗೂ ಪತಿಯ ಜೊತೆಗೆ ಫ್ಯಾಮಿಲಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.