ಮುಂಬೈನಲ್ಲಿ ನಡೆದ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಮಹೋತ್ಸವದಲ್ಲಿ ಇಡೀ ದೇಶದ ಗಣ್ಯರೇ ಭಾಗಿಯಾಗಿದ್ದಾರೆ. ಇದರಲ್ಲಿ ಸಿನಿಮಾ ಸ್ಟಾರ್ಸ್, ಕ್ರಿಕೆಟರ್ಸ್, ಉದ್ಯಮಿಗಳು ಸೇರಿದಂತೆ ಹಾಲಿವುಡ್ ಸ್ಟಾರ್ಸ್ ಕೂಡ ಭಾಗಿಯಾಗಿದ್ದರು. ಈ ಸಂಭ್ರಮದ ಮದುವೆಯಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಫ್ಯಾಮಿಲಿಯ ಅದೊಂದು ವಿಷ್ಯ ಎಲ್ಲರನ್ನ ಅಚ್ಚರಿ ಮೂಡಿಸಿದೆ. ಅದು ನಿಜನೋ ಅಥವಾ ಸುಳ್ಳೋ ಎಂಬುದು ಯಾರಿಗೂ ತಿಳಿದಿಲ್ಲ.
ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಪತ್ನಿ ಐಶ್ವರ್ಯ ರೈ ನಡುವಿನ ದಾಂಪತ್ಯ ಬಿರುಕು ಮೂಡಿದೆಯಾ, ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರಾ, ಇಲ್ಲವಾದರೆ ಡಿವೋರ್ಸ್ ಪಡೆದುಕೊಂಡಿದ್ದಾರಾ, ಅಮಿತಾಬ್ ಬಚ್ಚನ್ ಅವರ ಮುದ್ದಿನ ಮೊಮ್ಮಗಳು ಆರಾಧ್ಯ ಸದ್ಯಕ್ಕೆ ಯಾರ ಜೊತೆ ಇದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಭಾರೀ ಸಂಶಗಳನ್ನು ಮೂಡಿಸಿದೆ. ಈ ಎಲ್ಲ ಅನುಮಾನಗಳು ಬರುವುದಕ್ಕೆ ಮುಖ್ಯ ಕಾರಣ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಆಗಿದೆ.
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಸಂಭ್ರಮಕ್ಕೆ ಇಡೀ ಬಾಲಿವುಡ್ ಸ್ಟಾರ್ಸ್ ಕುಟುಂಬ ಸಮೇತ ಭಾಗಿಯಾಗಿದ್ದರು. ಇದರಲ್ಲಿ ಅಮಿತಾಬ್ ಬಚ್ಚನ್ ಫ್ಯಾಮಿಲಿ ಕೂಡ ಆಗಮಿಸಿತ್ತು. ಆದರೆ ಈ ತುಂಬು ಫ್ಯಾಮಿಲಿಯಿಂದ ಅಭಿಷೇಕ್ ಬಚ್ಚನ್ ಅವರ ಪತ್ನಿ ಐಶ್ವರ್ಯ ರೈ, ಮಗಳು ಆರಾಧ್ಯ ಪ್ರತ್ಯೇಕವಾಗಿ ಮದುವೆಗೆ ಬಂದಿದ್ದರು. ಮದುವೆಯಲ್ಲಿ ಎಲ್ಲರನ್ನು ಮಾತನಾಡಿಸಿದ ಅಮಿತಾಬ್ ಬಚ್ಚನ್ ದೀಪಿಕಾ ಪಡುಕೋಣೆಯನ್ನು ಖುಷಿಯಿಂದ ಮಾತಾಡಿಸಿದರು. ಆದರೆ ಮೊಮ್ಮಗಳನ್ನು, ಸೊಸೆಯನ್ನು ಮಾತಾಡಿಸಿದ್ದು ಏನು ಕಾಣಲಿಲ್ಲ. ಇದರಿಂದ ಬಚ್ಚನ್ ಫ್ಯಾಮಿಲಿಯಿಂದ ಸೊಸೆ ಐಶ್ವರ್ಯ, ಮಗಳನ್ನು ಕರೆದುಕೊಂಡು ಹೊರ ಬಂದಿದ್ದಾರಾ, ಇದು ಡಿವೋರ್ಸ್ ಸೂಚನೆನಾ ಎನ್ನುವ ಅನುಮಾನ ವ್ಯಕ್ತವಾಗಿದೆ ಎನ್ನಲಾಗಿದೆ
ಅನಂತ್ ಅಂಬಾನಿ ಮದುವೆಗೆ ಮಗಳು ಶ್ವೇತಾನಂದ, ಅಳಿಯ ಹಾಗೂ ಅವರ ಮಕ್ಕಳು ಜೊತೆ ಅಮಿತಾಬ್ ಬಚ್ಚನ್- ಜಯಾ ದಂಪತಿ ಆಗಮಿಸಿದ್ದರು. ಇವರ ಜೊತೆ ಅಭಿಷೇಕ್ ಬಚ್ಚನ್ ಕೂಡ ಇದ್ದರು. ಫ್ಯಾಮಿಲಿ ಫೋಟೋದಲ್ಲಿ ಅಭಿಷೇಕ್ ಜೊತೆ ಐಶ್ವರ್ಯ ರೈ, ಮಗಳು ಇರಲಿಲ್ಲ. ಹಲವು ದಿನಗಳಿಂದ ಅಭಿ- ಐಶ್ ನಡುವೆ ಡಿವೋರ್ಸ್ ಗುಮಾನಿ ಇದೆ. ಹೀಗಾಗಿ ಇಬ್ಬರು ಬೇರೆ ಬೇರೆ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಗಳ ಶಾಲಾ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದಂಪತಿ ಆಗ ಬೇರೆ ಬೇರೆ ಕಾರಿನಲ್ಲಿ ಆಗಮಿಸಿದ್ದರು. ಇದರಿಂದ ಬಚ್ಚನ್ ಫ್ಯಾಮಿಲಿಯಲ್ಲಿ ಡಿವೋರ್ಸ್ ಮಾತುಗಳು ಏನಾದರು ನಡೆಯುತ್ತಿವೆಯಾ ಎನ್ನುವುದು ಫ್ಯಾನ್ಸ್ ಮಾತಾಗಿದೆ.