ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ವಿವಾಹ ಅದ್ಧೂರಿಯಾಗಿ ನಡೆದಿದೆ. ಇದೇ ವೇಳೆ ಮದುವೆಯಲ್ಲಿ ರಾಧಿಕಾ ಮರ್ಚಂಟ್ ಧರಿಸಿರುವ ಉಡುಗೆ-ಆಭರಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ರಾಧಿಕಾ ಮರ್ಚಂಟ್ ತನ್ನ ಮದುವೆ ವೇಳೆ ಸುಂದರವಾದ ಅಬು ಜಾನಿ ಸಂದೀಪ್ ಖೋಸ್ಲಾ ಲೇಹಾಂಗವನ್ನು ಧರಿಸಿದ್ದರು.
ದಂತದ ಜರ್ದೋಜಿ ಕಟ್-ವರ್ಕ್, ಐದು ಮೀಟರ್ ಹೆಡ್ವೆಲ್ ಮತ್ತು ಟಿಶ್ಯೂ ದುಪ್ಪಟದೊಂದಿಗೆ ಈ ಘಾಗ್ರಾವನ್ನು ಡಿಸೈನ್ ಮಾಡಲಾಗಿತ್ತು. ಆದರೆ ರಾಧಿಕಾ ಮರ್ಚಂಟ್ ಧರಿಸಿದ್ದ ನೆಕ್ಲೇಸ್ ಆಕೆಯ ಉಡುಗೆಗೆ ಮ್ಯಾಚ್ ಆಗುತ್ತಿಲ್ಲ.
ಇದು ಅಂಬಾನಿಯ ವೈಭೋಗಕ್ಕೆ ಬಹಳ ಸಿಂಪಲ್ ಆಯಿತು ಎಂಬ ಚರ್ಚೆ ಎಲ್ಲೆಡೆ ಕೇಳಿ ಬರುತ್ತಿದೆ.
ಆದರೆ ಅಸಲಿ ವಿಷಯವೆಂದರೆ ರಾಧಿಕಾ ಮರ್ಚಂಟ್ ಧರಿಸಿರುವ ನೆಕ್ಲೇಸ್, ಅವರಿಗೆ ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬಂದಿರುವ ಪೂರ್ವಜರ ಆಭರಣವಾಗಿದೆ. ಇದೇ ನೆಕ್ಲೇಸ್ ಅನ್ನು ರಾಧಿಕಾ ಅವರ ಅಕ್ಕ ಅಂಜಲಿ ಕೂಡ ಅವರ ಮದುವೆಯಲ್ಲಿ ಧರಿಸಿದ್ದರು. ಅದೇ ನೆಕ್ಲೇಸ್ ಅನ್ನು ರಾಧಿಕಾ ತಮ್ಮ ಮದುವೆಯಲ್ಲಿ ಧರಿಸಿದ್ದಾರೆ. ಹಾಗೇ ರಾಧಿಕಾ ಮರ್ಚಂಟ್ ಅಮ್ಮ ಮತ್ತು ಅಜ್ಜಿ ಕೂಡ ತಮ್ಮ ಮದುವೆ ಸಮಾರಂಭದಲ್ಲಿ ಧರಿಸಿದ್ದರು ಎನ್ನಲಾಗಿದೆ.