ತಂದೆಯ ಕ್ರಿಕೆಟ್ ಸಾಧನೆಯನ್ನು ನೋಡಿ ಮಕ್ಕಳು ಅದೇ ದಾರಿ ಹಿಡಿದ ಅನೇಕ ಉದಾಹರಣೆಗಳು ಭಾರತದಲ್ಲಿವೆ. ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮಗ ಸಮಿತ್ ದ್ರಾವಿಡ್, ಅತ್ತ ವಿರೇಂದ್ರ ಸೆಹ್ವಾಗ್ ಮಗ ಕೂಡ ಕ್ರಿಕೆಟ್ ಆಡುತ್ತಿದ್ದು, ಇವರೆಲ್ಲರು ಉದಾಹರಣೆಯಾಗಿ ಕಾಣುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಅನುಭವಿ ಸ್ಪಿನ್ನರ್ ಅನಿಲ್ ಕುಂಬ್ಳೆ ವಿಚಾರದಲ್ಲಿ ಮಾತ್ರ ಹಾಗಲ್ಲ. ಕುಂಬ್ಳೆ ಪುತ್ರ ಕ್ರಿಕೆಟಿಗನಾಗದಿದ್ದರೂ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾನೆ.
ಅನಿಲ್ ಕುಂಬ್ಳೆ ಮಗ ಮಯಾಸ್ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕ. ತಂದೆಯಂತೆಯೇ ಆತನಿಗೂ ಫೋಟೋಗ್ರಫಿ ಎಂದರೆ ಬಲು ಇಷ್ಟ. ಅನಿಲ್ ಕುಂಬ್ಳೆ ಪಂದ್ಯದ ಸಮಯದಲ್ಲಿ ಕ್ಯಾಮೆರಾ ಕೊಂಡೊಯ್ಯುತ್ತಿದ್ದರು. ಬಿಡುಬಿದ್ದಾಗ ಫೋಟೋ ಕ್ಲಿಕ್ಕಿಸುತ್ತಿದ್ದರು. ಇದೀಗ ಮಗ ಕೂಡ ಅದೇ ದಾರಿಯಲ್ಲಿದ್ದಾನೆ.
ಅನಿಲ್ ಕುಂಬ್ಳೆ ಕ್ರಿಕೆಟ್ ಪಂದ್ಯದ ಸಮಯದಲ್ಲಿ ತಮ್ಮ ಮಗನನ್ನು ಕೊಂಡೊಯ್ಯುತ್ತಿದ್ದರು. ಆದರೆ ತಂದೆ ಕ್ರಿಕೆಟಗನಾದರು ಮಗನ ಒಲವು ಮಾತ್ರ ಬೇರೆಡೆ ಸೆಳೆಯಿತು. ಸದ್ಯ ಆತನ ಕನಸಿಗೆ ಕುಂಬ್ಳೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಂದಹಾಗೆಯೇ ಕುಂಬ್ಳೆಗೆ ಬಾಲ್ಯದಿಂದಲೂ ಛಾಯಾಗ್ರಹಣದ ಮೇಲೆ ಒಲವು ಇದ್ದಂತೆ. ಕೊನೆಗೂ ಮಗನಿಗೂ ಆ ಕಲೆ ಇಷ್ಟವಾಯಿತು. ಸದ್ಯ ಮಯಾಸ್ ಪೂರ್ಣ ಸಮಯದ ಫೋಟೋಗ್ರಾಫರ್ ಆಗಿದ್ದಾರೆ. ಜೊತೆಗೆ ಲೇಖನಗಳನ್ನು ಬರೆಯುತ್ತಿದ್ದಾರಂತೆ. ‘ಸಫಾರಿ ಸಾಗಾ; ವೈಲ್ಡ್ ಎನ್ಕೌಂಟರ್ಸ್ ಆಫ್ ಎ ಯಂಗ್ ಫೋಟೋಗ್ರಾಫರ್’ ಎಂಬ ಪುಸ್ತಕವನ್ನು ಅವರು ಬರೆದಿದ್ದಾರೆ. 2022ರಲ್ಲಿ ಪುಸ್ತಕವನ್ನು ರಿಲೀಸ್ ಮಾಡಿದ್ದರು.