ಸಂಡೂರು ವಿಧಾನಸಭಾ ಚುನಾವಣೆ ಹಿನ್ನೆಲೆ, ಕುಟುಂಬ ಸಮೇತರಾಗಿ ಬಂದು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಮತ ಚಲಾಯಿಸಿದ್ದಾರೆ. ಸಂಸದ ತುಕಾರಾಂ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು, ಮತಗಟ್ಟೆ ಸಂಖ್ಯೆ 67ರಲ್ಲಿ ಮತದಾನ ಮಾಡಿದ್ದಾರೆ.
ಇದನ್ನು ಓದಿ:ಅನುಷಾ, ಗೋಲ್ಡ್ ಸುರೇಶ್ ಪ್ರಶ್ನೆಗೆ ಸ್ಪರ್ಧಿಗಳು ಗಪ್ಚುಪ್!
ಬಳಿಕ ಮಾತನಾಡಿದ ಅವರು, ಜನರು, ನಿರ್ಭೀತಿಯಿಂದ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವ ಕೊಟ್ಟಿರುವ ನಮ್ಮ ಹಕ್ಕು ಬಳಸಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು. ಕ್ಷೇತ್ರದಲ್ಲಿ ಜನರು ನನ್ನ ಕೈ ಹಿಡಿಯುವ ವಿಶ್ವಾಸ ಇದೆ. ಇದುವರೆಗೂ ಪತಿಯ ಪರವಾಗಿ ಚುನಾವಣೆ ಕೆಲಸ ಮಾಡ್ತಿದ್ದೆ. ಈ ಬಾರಿ ನೇರ ಚುನಾವಣೆಯಲ್ಲಿ ನಿಂತಿರೋದು ಖುಷಿ ಇದೆ. ಗೆದ್ದೇ ಗೆಲ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಹೇಳಿದ್ದಾರೆ