ಕನ್ನಡದ ಬಿಗ್ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಬಿಗ್ಬಾಸ್ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ರಕ್ಷಕರು ತಮ್ಮ ತಂಡದ ಡ್ರಮ್ನಿಂದ ನೀರು ಹೊರಗಡೆ ಹರಿಯದಂತೆ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಮಹಿಳಾ ಸ್ಪರ್ಧಿಗಳು ಬೇರೆ ತಂಡಕ್ಕೆ ಹೋಗಿ ತೊಂದರೆ ಕೊಟ್ಟು ನೀರು ಡ್ರಮ್ನಿಂದ ಹೋಗುವಂತೆ ಮಾಡುತ್ತಿದ್ದರು.
ಇದನ್ನು ಓದಿ:ಧನರಾಜ್ಗೆ ಮಾತಲ್ಲೇ ಹಿಗ್ಗಾಮುಗ್ಗಾ ಜಾಡಿಸಿದ ಮೋಕ್ಷಿತಾ..ಅನುಷಾ!
ಆಗ ಗೋಲ್ಡ್ ಸುರೇಶ್ ತಮ್ಮ ಡ್ರಮ್ ಬಳಿ ಬಂದ ಸ್ಪರ್ಧಿಗಳಿಗೆ ಗುದ್ದಿ ತಳ್ಳಿದ್ದಾರೆ. ಅದೇ ಜಾಗದಲ್ಲಿದ್ದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್ಸೆನ್ಸ್ ಇಲ್ಲೂ ಹೇಗೆ ವರ್ತನೆ ಮಾಡಬೇಕು ಅಂತ, ಹೀಗೆಂನಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಇದಾದ ಬಳಿಕ ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನನ್ನನ್ನೂ ಅವರ ಅಪ್ಪ ಸಾಕ್ತಾನಾ ಅಂತ ಕೂಗಾಡಿದ್ದಾರೆ. ಇನ್ನು ಇದೇ ವಿಚಾರಕ್ಕೆ ಅನುಷಾ ನನಗೆ ಕಾಲಿನಲ್ಲಿ ಒದ್ದಿದ್ದಿರಾ ಅಲ್ವಾ ಕರ್ಮ ರೀಟನ್ಸ್ ಆಗುತ್ತೆ ನೋಡ್ತಾಯಿರಿ ಅಂತಾ ಅಂದ್ರು.
ಇದನ್ನು ಓದಿ:ಟಾಸ್ಕ್ ವೇಳೆ ಕಾಲು ಮುರಿದು ಆಸ್ಪತ್ರೆ ಪಾಲಾದ ಗೋಲ್ಡ್ ಸುರೇಶ್!
ಗೋಲ್ಡ್ ಸುರೇಶ್ ಆಟ ಆಡುವಾಗ ಊಹಿಸದ ರೀತಿಯಲ್ಲಿ ಆ ಡ್ರಮ್ ಅವರ ಕಾಲ ಮೇಲೆ ಬಿದ್ದಿದೆ. ತಕ್ಷಣವೇ ಅವರು ನೆಲದಮೇಲೆ ಬಿದ್ದು ಹೊರಳಾಡಿದ್ದಾರೆ. ಅಷ್ಟೇ ಅಲ್ಲ ‘ನನ್ನ ಕಾಲು ಮುರಿದೇ ಹೋಯ್ತು’ ಎಂದು ಅವರು ಗೋಳಾಡಿದ್ದಾರೆ. ಇದನ್ನು ನೋಡಿ ಮನೆ ಮಂದಿಗೆ ಶಾಕ್ ಆಗಿದೆ. ಕಾಲೇ ಮುರಿದು ಹೋದರೆ ಅವರು ಬಿಗ್ ಬಾಸ್ನಿಂದ ಹೊರ ಹೋಗಬೇಕಾಗುತ್ತದೆಯಲ್ಲ ಎನ್ನುವ ಆತಂಕ ಅನೇಕರಿಗೆ ಉಂಟಾಯಿತು. ಇದನ್ನು ನೊಡಿದ ಅನುಷಾ ನನ್ನ ಕರ್ಮನೇ ಅವರಿಗೆ ನಾನು ಅಂದಹಾಗೆ ಆಯಿತು. ನನಗೆ ಒದ್ದಿದದ್ರೂ ಅಲ್ವಾ ಅವರಿಗೇ ಆಯಿತು ಕರ್ಮ ರಿಟನ್ಸ್ ಎಂದು ಹೇಳಿದರು.
ಇದನ್ನು ಓದಿ:ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ?
ನಂತರ ಗೋಲ್ಡ್ ಸುರೇಶ್ ಅವರನ್ನ ಕನ್ಫೆಷನ್ ರೂಂಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಸುರೇಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿತ್ತು. ಸುರೇಶ್ ಕಾಲು ಮುರಿದಿದೆ ಎನ್ನುವ ಭಯದಲ್ಲಿ ಇದ್ದ ಇತರ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ‘ಸುರೇಶ್ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಬಿಗ್ ಬಾಸ್ ಕಡೆಯಿಂದ ಮಾಹಿತಿ ಸಿಕ್ಕಿದೆ. ಈ ವಿಚಾರ ಕೇಳಿ ಮನೆ ಮಂದಿ ಖುಷಿಪಟ್ಟಿದ್ದಾರೆ. ಹಾಗೆಯೇ ಬಿಗ್ ಬಾಸ್ನಲ್ಲಿ ಟಾಸ್ಕ್ಗಳನ್ನು ಆಡುವಾಗ ಹೆಚ್ಚು ಎಚ್ಚರಿಕೆ ಬೇಕು. ಸ್ವಲ್ಪ ಯಾಮಾರಿದರೂ ತೊಂದರೆ ಕಟ್ಟಿಟ್ಟ ಬುತ್ತಿ.