ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ ಮೂರು ವರ್ಷ. ಕಂಠೀರವ ಸ್ಟುಡಿಯೋನಲ್ಲಿ ಪುನೀತ್ ಸಮಾಧಿಗೆ ಇಂದು ವಿಶೇಷ ಪೂಜೆ ಮಾಡಲಾಯ್ತು. ರಾಘವೇಂದ್ರ ರಾಜ್ಕುಮಾರ್ ಕುಟುಂಬ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರುಗಳು ಆಗಮಿಸಿ ಪೂಜೆ ನೆರವೇರಿಸಿದರು.
ಇದನ್ನು ಓದಿ: ಹಾಸನಾಂಬೆಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಪುನೀತ್ ರಾಜ್ಕುಮಾರ್ ನಿಧನ ಹೊಂದಿ ಇಂದಿಗೆ ಮೂರು ವರ್ಷಗಳಾಯ್ತು. ಅಪ್ಪು ಪುಣ್ಯಸ್ಮರಣೆಯನ್ನು ಭಕ್ತಿ-ಭಾವಗಳಿಂದ ಕಂಠೀರವ ಸ್ಟುಡಿಯೋನಲ್ಲಿ ಮಾಡಲಾಗುತ್ತಿದೆ. ಅಪ್ಪು ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿದೆ. ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ದೊಡ್ಮನೆ ಕುಟುಂಬ ಸದಸ್ಯರು ಆಗಮಿಸಿ ಇಂದು ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಕುಟುಂಬ, ಪುನೀತ್ರ ಪತ್ನಿ ಅಶ್ವಿನಿ ಮತ್ತು ಕಿರಿ ಮಗಳೊಟ್ಟಿಗೆ ಆಗಮಿಸಿ ಪೂಜೆ ನೆರವೇರಿಸಿದ್ದಾರೆ. ಯಾವುದೇ ಆಡಂಭರ ಇಲ್ಲದೆ ಸರಳವಾಗಿ ಪೂಜೆ ಮಾಡಿ ಕೈಮುಗಿದಿದೆ ಕುಟುಂಬ.