ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಕಡಿಮೆಗೊಳಿಸಿ, ತ್ವರಿತ ಓಡಾಟಕ್ಕೆ ಸಹಕಾರಿಯಾಗಿರುವ ನಮ್ಮ ಮೆಟ್ರೋ, ಇನ್ನು ಮುಂದೆ ತುಮಕೂರುವರೆಗೂ ಓಡಲಿದೆ. ಇದಕ್ಕಾಗಿ ಡಿಪಿಆರ್ ಸಿದ್ಧವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಬುಧವಾರ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ತುಮಕೂರಿನ ಅಭಿವೃದ್ಧಿಗಾಗಿ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದ ಅವರು, ಅಭಿವೃದ್ಧಿಗೆ ಹಿಂಜರಿಯುವುದಿಲ್ಲ ಎಂದಿದ್ದಾರೆ.
ದೇಶದಲ್ಲೆ ಕರ್ನಾಟಕ ಪೊಲೀಸ್ಗೆ ನಂ 1 ಎಂಬ ಹೆಗ್ಗಳಿಕೆ ಇದೆ. ತುಮಕೂರಿನ ಅಭಿವೃದ್ಧಿಗೆ ಎಂದೂ ಹಿಂಜರಿಯುವುದಿಲ್ಲ. ರಾಜಧಾನಿ ಬೆಂಗಳೂರು ಸಮೀಪದಲ್ಲಿರುವ ತುಮಕೂರಿಗೆ ಬೆಂಗಳೂರು ಮೆಟ್ರೋ ತರಲು ಚಿಂತನೆ ನಡೆಸಿದ್ದು, ಈಗಾಗಲೇ ಡಿಪಿಆರ್ ಕಾರ್ಯ ಮುಗಿದಿದೆ ಎಂದು ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿಗೆ ಬೆಂಗಳೂರು ಮೆಟ್ರೋ ತರಲು ಚಿಂತನೆ ನಡೆಸಿದ್ದು, ಈಗಾಗಲೇ ಡಿಪಿಆರ್ ಕಾರ್ಯ ಮುಗಿದಿದೆ . 1944ರಲ್ಲಿ ಸ್ಥಾಪಿತವಾದ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಕಟ್ಟಡ ದುಸ್ಥಿತಿಯ ಬಗ್ಗೆ ಕೆ.ಎನ್. ರಾಜಣ್ಣ ಚರ್ಚಿಸಿದ್ದ ಪರಿಣಾಮ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ತುಮಕೂರಿನ ಅಭಿವೃದ್ಧಿಗೆ ಎಂದೂ ಹಿಂಜರಿಯುವುದಿಲ್ಲ. ಬಹುದಿನಗಳ ಬೇಡಿಕೆಯ ಪೊಲೀಸ್ ಕಟ್ಟಡವನ್ನು ಇಲಾಖೆಯ ಉಳಿತದ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುತ್ತಿಗೆದಾರರಿಗೆ ಸೂಚಿಸಿದರು.