ವಾರದ ಕಥೆ ಕಿಚ್ಚನ ಜೊತೆ ನಿನ್ನೆ ನಡೆದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ ಅವರನ್ನು ಚೆನ್ನಾಗಿ ಕ್ಲಾಸ್ ತೆಗದುಕೊಂಡಿದ್ದಾರೆ. ಜೊತೆಗೆ ಚೈತ್ರಾರನ್ನ ಹೊಗಳಿದ್ದಾರೆ. ಚೈತ್ರಾ ಅವರನ್ನು ಹೊಗಳಿದ್ದಲ್ಲದೇ ತಮಾಷೆಯಾಗಿ ಒಂದು ರಿಕ್ವೆಸ್ಟ್ ಮಾಡಿದ್ದಾರೆ.
ಚೈತ್ರಾ ಈ ವಾರ ಚೆನ್ನಾಗಿ ಟಾಸ್ಕ್ ನಿಭಾಯಿಸಿದ್ದರು. ಅದು ಅಲ್ಲದೇ ಚೈತ್ರಾ ಅವರು ಈ ವಾರ ಕಿರುಚಾಟ ಕೂಡ ತುಂಬಾ ಜೋರಾಗಿಯೇ ಇತ್ತು. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿ, ಚೈತ್ರಾ ಅವರ ನಿಮ್ಮ ಅಭಿಪ್ರಾಯಗಳು, ನಿಮ್ಮ ನಿರ್ಧಾರವೂ ಸೂಪರ್ ಆಗಿತ್ತು. ಆದರೆ ದಯವಿಟ್ಟು ನಿಮ್ಮ ವಾಲ್ಯೂಮ್ ಕಡಿಮೆ ಮಾಡಿಕೊಳ್ಳಿ. ಇದು ನನ್ನ ರಿಕ್ವೆಸ್ಟ್ ಅಲ್ಲ. ಹೊರಗಡೆ ಅವರದ್ದು ಎಂದು ಹೇಳಿದ್ದಾರೆ.
ಚೈತ್ರಾ ಕೂಡ ಮುಗುಳ್ ನಕ್ಕಿದ್ದಾರೆ. ಇನ್ನು ಈ ಬಗ್ಗೆ ರಜತ್ ಅವರನ್ನೂ ಅಭಿಪ್ರಾಯ ಕೇಳಿದ್ದರು ಸುದೀಪ್. ಆಗ ರಜತ್ ಅವರು ಅವರ ನಿರ್ಧಾರ ಎಲ್ಲವೂ ಸರಿ ಆಗಿರತ್ತೆ. ಆದರೆ ಕಿರುಚಾಡುತ್ತಾರೆ. ಮತ್ತೆ ಅವರ ಹೇಳುವುದೆಲ್ಲ ಸರಿಯಾಗೇ ಇರುತ್ತೆ ಎಂದಿದ್ದಾರೆ.