ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,200ಕ್ಕೂ ಅಧಿಕ ಪಾರ್ಕ್ಗಳು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿರುವ ವೃತ್ತಗಳು ಹಾಗೂ ರಸ್ತೆ ಮೀಡಿಯನ್ಗಳನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ದತ್ತು ಪಡೆಯಲು ಮುಕ್ತ ಅವಕಾಶ ನೀಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ, ಪಾಲಿಕೆ ವ್ಯಾಪ್ತಿಯಲ್ಲಿ 1,280 ಉದ್ಯಾನವನಗಳನ್ನು ಮತ್ತು ವೃತ್ತ/ ಮೀಡಿಯನ್ಸ್ ಗಳನ್ನು ಸಹ ಪಾಲಿಕೆ ವತಿಯಿಂದ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಮ್ಮ ಬೆಂಗಳೂರು ನನ್ನ ಕೊಡುಗೆ ಮತ್ತು ಸಿ.ಎಸ್.ಆರ್ ಪಾಲಿಸಿ ಯೋಜನೆಯಡಿಯಲ್ಲಿ ಉದ್ಯಾನವನಗಳು, ರಸ್ತೆ ವಿಭಜಕಗಳು ಮತ್ತು ವೃತ್ತಗಳನ್ನು ಆಸಕ್ತ ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳಿಗೆ ದತ್ತು ಪಡೆದುಕೊಳ್ಳಲು ನೋಂದಾಯಿಸುವ ಅವಕಾಶ ಕಲ್ಪಿಸಲಾಗಿದೆ.
ಪಾಲಿಸಿಗಳ ವಿವರವನ್ನು https://www.bbmp.gov.in ವೆಬ್ ಸೈಟ್ ಮೂಲಕ ಪಡೆಯ ಬಹುದಾಗಿರುತ್ತದೆ. ಮುಂದುವರೆದು, ಇತ್ತೀಚೆಗೆ ಹಲವಾರು ನಾಗರೀಕ ಗುಂಪುಗಳು (Citizens Group) ಮತ್ತು ಸರ್ಕಾರೇತರ ಸಂಸ್ಥೆಗಳು ಪಾಲಿಕೆಯನ್ನು ಸಂರ್ಪಕಿಸಿ ಉದ್ಯಾನವನಗಳ/ ವೃತ್ತಗಳ/ಮೀಡಿಯನ್ಸ್ ಗಳ ನಿರ್ವಹಣೆ/ಅಭಿವೃದ್ಧಿಯನ್ನು ಮಾಡಲು ಆಸಕ್ತರಾಗಿ ಮುಂದೆ ಬಂದಿರುತ್ತಾರೆ. ಆದ್ದರಿಂದ ಆಸಕ್ತ Community involvement for Park Conservation Policy CIPC-2024 CSR ಅಡಿಯಲ್ಲಿ ಹಾಗೂ ನಮ್ಮ ಬೆಂಗಳೂರು – ನನ್ನ ಕೊಡುಗೆ ಅಡಿಯಲ್ಲಿ ಆಸಕ್ತ ಸಂಸ್ಥೆಗಳಿಗೆ ದತ್ತು ನೀಡುವ ಅವಕಾಶ ಕಲ್ಪಿಸಿಕೊಡಲಾಗಿದೆ.
ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 6 ವಿವಿಧ ಸಂಸ್ಥೆಗಳಿಗೆ ಈಗಾಗಲೇ ಉದ್ಯಾನವನಗಳು ಮತ್ತು ಮೀಡಿಯನ್ಸ್ ಗಳಿಗೆ ಸಂಬಧಿಸಿದಂತೆ ದತ್ತು ನೀಡಲಾಗಿರುತ್ತದೆ. ಅದರಂತೆ ಮತ್ತೊಮ್ಮೆ ಆಸಕ್ತ ಸಂಸ್ಥೆಗಳಿಂದ ದತ್ತು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ನವೆಂಬರ್ 15ರೊಳಗೆ ಉಪ ನಿರ್ದೇಶಕರು ತೋಟಗಾರಿಕೆ ರವರ ಕಛೇರಿ. ಅನೆಕ್ಸ್-03 ಕಟ್ಟಡ ನೆಲಮಹಡಿ, ಕೊಠಡಿ ಸಂಖ್ಯೆ 09, ಬಿಬಿಎಂಪಿ ಕೇಂದ್ರ ಕಚೇರಿಗೆ ಮನವಿಯನ್ನು ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್ ರವರ ದೂರವಾಣಿ ಸಂಖ್ಯೆಯಾದ 9535015189 ಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದೆಂದು ಅ.ಪ.ಹ.ವೈ ವಿಭಾಗದ ವಿಶೇಷ ಆಯುಕ್ತ ಪ್ರೀತಿ ಗೆಹೋಟ್ ತಿಳಿಸಿರುತ್ತಾರೆ.