ಕೆ.ಎಲ್.ರಾಹುಲ್.. ಟೀಮ್ ಇಂಡಿಯಾದ ಕ್ಲಾಸ್ ಬ್ಯಾಟ್ಸ್ಮನ್. ತನ್ನ ಸಾಲಿಡ್ ಆಟದಿಂದ ಮೋಡಿ ಮಾಡಿದ್ದ ಈ ಕ್ಲಾಸ್ ಹೀರೋ. ಈಗ ಫ್ಲಾಪ್ ಹೀರೋ. ಟೀಕೆಗಳ ನಡುವೆ ಸ್ಥಾನಗಿಟ್ಟಿಸಿಕೊಂಡ ರಾಹುಲ್, ಮತ್ತೆ ಫ್ಲಾಪ್ ಶೋ ನೀಡಿದ್ದಾರೆ. ಒಂದು ಕಳಪೆಯಾಟದಿಂದ ತನ್ನ ಸ್ಥಾನಕ್ಕೆ ತಾವೇ ಕಂಟಕ ತಂದುಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಕೆ.ಎಲ್.ರಾಹುಲ್ ಫೇಲ್
ಬಾಂಗ್ಲಾ ಎದುರಿನ ಮೊದಲ ಟೆಸ್ಟ್, ಕರ್ನಾಟಕದ ಬ್ಯಾಟರ್ ಕೆ.ಎಲ್.ರಾಹುಲ್ ಮೋಸ್ಟ್ ಇಂಪಾರ್ಟೆಂಟ್ ಪಂದ್ಯವಾಗಿತ್ತು. ಈ ಟೆಸ್ಟ್ನ ಪ್ಲೇಯಿಂಗ್ ಇವೆಲೆನ್ ರಾಹುಲ್ಗೆ ಸ್ಥಾನ ಸಿಕ್ಕಿದ್ದೇ ಅದೃಷ್ಟದಲ್ಲಿ. ಈ ಹಿಂದಿನ ಟೆಸ್ಟ್ ಸರಣಿಯಲ್ಲಿ ಇಂಪ್ರೆಸ್ಸಿವ್ ಪ್ರದರ್ಶನ ನೀಡಿದ್ದ ಸರ್ಫರಾಜ್ನ ಡ್ರಾಪ್ ಮಾಡಿ, ರಾಹುಲ್ನ ಆಡಿಸಲಾಗಿತ್ತು. ರಾಹುಲ್ ಆ ಅವಕಾಶವನ್ನೂ ಕೈ ಚೆಲ್ಲಿದ್ರು.
ಟೀಮ್ ಇಂಡಿಯಾ 96 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್ಗೆ ಆಗಮಿಸಿದ ಕೆ.ಎಲ್.ರಾಹುಲ್ ಮುಂದೆ ಬಿಗ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಇತ್ತು. ಎದುರಾಳಿಗಳ ಗೇಮ್ ಪ್ಲಾನ್ಸ್ಗೆ ಕೌಂಟರ್ ಸಹ ನೀಡದ ರಾಹುಲ್, 52 ಎಸೆತಗಳನ್ನ ಎದುರಿಸಿ ಗಳಿಸಿದ್ದು ಕೇವಲ 16 ರನ್. ಈ ವೈಫಲ್ಯ ಕೆ.ಎಲ್.ರಾಹುಲ್, ಬ್ಯಾಟಿಂಗ್ ಶೈಲಿಯನ್ನ ಮಾತ್ರವೇ ಪ್ರಶ್ನೆ ಮಾಡ್ತಿಲ್ಲ. ಮಿಡಲ್ ಆರ್ಡರ್ಗೆ ರಾಹುಲ್ನಂಥ ಆಟಗಾರ ಬೇಕಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ರಾಹುಲ್ ವೈಫಲ್ಯ ಒಂದು ಇನ್ನಿಂಗ್ಸ್ನ ಕಥೆಯಲ್ಲ. ಕಳೆದ 3 ವರ್ಷದ ವ್ಯಥೆ.
3 ವರ್ಷದಿಂದ ರಾಹುಲ್ ಬ್ಯಾಟಿಂಗ್ ಅಧೋಗತಿ
2021ರ ಡಿಸೆಂಬರ್ನಲ್ಲಿ ಸೆಂಚೂರಿಯನ್ನಲ್ಲಿ ರಾಹುಲ್ ಸೆಂಚೂರಿ ಸಿಡಿಸಿದ್ರು. ಈ ಶತಕದ ಇನ್ನಿಂಗ್ಸ್ ಬಳಿಕ, ರಾಹುಲ್ ಸಾಲಿಡ್ ಕಮ್ಬ್ಯಾಕ್ ಮಾಡಿದ್ರು ಅಂತಾನೇ ಎಲ್ಲರೂ ಊಹಿಸಿದ್ರು. ಕೆ.ಎಲ್.ರಾಹುಲ್ರ ಕಳಪೆಯಾಟ ಶುರುವಾಗಿದ್ದೆ ಇಲ್ಲಿಂದ. 2022ಕ್ಕೆ ಅದ್ಯಾವ ಗಳಿಗೆಯಲ್ಲಿ ರಾಹುಲ್ ಕಾಲಿಟ್ರೋ ಏನೋ.. ಅವತ್ತಿನಿಂದ ರಾಹುಲ್ ಬ್ಯಾಟಿಂಗ್ ನಿಜಕ್ಕೂ ಅಧೋಗತಿಗೆ ತಲುಪಿದೆ. ಅದು ಯಾವ ಮಟ್ಟಕ್ಕೆ ಅಂದ್ರೆ, 2021ರ ಡಿಸೆಂಬರ್ನಲ್ಲಿ ಸೆಂಚೂರಿಯನ್ನಲ್ಲಿ ಶತಕ ಸಿಡಿಸಿದ್ದ ರಾಹುಲ್, ಮತ್ತೊಂದು ಸೆಂಚುರಿ ಸಿಡಿಸಿದ್ದು, 2023ರ ಡಿಸೆಂಬರ್ನಲ್ಲಿ ಅದೇ ಸ್ಟೇಡಿಯಂನಲ್ಲಿ. ಈ 3 ವರ್ಷದ ಅವಧಿಯಲ್ಲಿ ಕೆ.ಎಲ್.ರಾಹುಲ್, ಬ್ಯಾಟ್ನಿಂದ ಬಂದಿರೋದು ಅದೊಂದೇ 1 ಶತಕ.
3 ವರ್ಷಗಳಿಂದ ಕೆ.ಎಲ್.ರಾಹುಲ್
ಕಳೆದ 3 ವರ್ಷಗಳಿಂದ 10 ಟೆಸ್ಟ್ ಪಂದ್ಯಗಳ 17 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿರುವ ಕೆ.ಎಲ್.ರಾಹುಲ್, 412 ರನ್ ಗಳಿಸಿದ್ದಾರೆ. ಕೇವಲ 24.23ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಿ, 1 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ಹೈ-ಫ್ರೆಷರ್ ಮ್ಯಾಚ್ಗಳಲ್ಲಿ ಕೆ.ಎಲ್.ರಾಹುಲ್, ಟೀಮ್ ಇಂಡಿಯಾ ಪಾಲಿನ ಸಂಕಷ್ಟಹರ ಅನ್ನೋ ಮಾತಿದೆ. ಆಮಾತು ನಿಜ ಕೂಡ. ವರ್ಷಕ್ಕೊಮ್ಮೆ ಮಾತ್ರವೇ ಉತ್ತಮ ಪರ್ಫಾಮೆನ್ಸ್ ನೀಡಿ ಉಳಿದ ದಿನ ನೀಡ್ತಿರೋ ಅಸ್ಥಿರ ಪರ್ಫಾಮೆನ್ಸ್ ಟೀಮ್ ಇಂಡಿಯಾಗೆ ಮಾರಕವಾಗಿದೆ. ಟೀಮ್ ಇಂಡಿಯಾ ಮಾತ್ರವಲ್ಲ. ಇದ್ರಿಂದ ಕೆ.ಎಲ್.ರಾಹುಲ್ ಕರಿಯರ್ ಕೂಡ ಸಂಕಷ್ಟಕ್ಕೆ ಸಿಲುಕ್ತಾ ಇದೆ. ಈಗಾಗಲೇ ಸರ್ಫರಾಜ್, ಧೃವ್ ಜುರೇಲ್ರಂಥ ಆಟಗಾರರು, ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡೋಕೆ ನಾವ್ ರೆಡಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ ಕೆ.ಎಲ್.ರಾಹುಲ್, ಮುಂದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡದಿದ್ರೆ ಕಷ್ಟ!