ಹಿಂದುಳಿದ ವರ್ಗಗಳ ಅಭಿವೃದ್ಧಿ ಕೆಲಸವನ್ನು ಭರತ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗುತ್ತಾರೆ. ಹಿರಿಯರು ಭರತ ಬೊಮ್ಮಾಯಿಗೆ ಮಾರ್ಗದರ್ಶನ ಮಾಡಬೇಕು. ಅಲ್ಲದೇ, ಹಿಂದುಳಿದ ವರ್ಗಗಳ ಪರ ವಿಧಾನಸೌಧದಲ್ಲಿ ಗುಡುಗಬೇಕು ಎಂದು ಭರತ್ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿವಿ ಮಾತು ಹೇಳಿದರು.
ಅವರು ಗುರುವಾರ ಶಿಗ್ಗಾವಿಯಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಂದು ಚುನಾವಣೆ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ಹೊಸ ಹೊಸ ವಿಚಾರಗಳನ್ನು ಹೊರ ಹಾಕುತ್ತದೆ. ರಾಜ್ಯದ ಪ್ರಗತಿ ಯಾವ ರೀತಿ ನಡೆಯುತ್ತಿದೆ. ಅಭಿವೃದ್ಧಿ ಹೇಗೆ ನಿಂತು ಹೋಗಿದೆ ಎಂದು ಕೇವಲ ವಿರೋಧ ಪಕ್ಷದ ಶಾಸಕರಷ್ಟೇ ಅಲ್ಲ, ಆಡಳಿತ ಪಕ್ಷದ ಶಾಸಕರೂ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಸಾರ್ವಜನಿಕರೂ ಮಾತನಾಡುತ್ತಿದ್ದಾರೆ ಎಂದರು.
ಇದನ್ನು ಓದಿ: ಸಿಲ್ಕ್ ಬೋರ್ಡ್ ಬ್ರಿಡ್ಜ್ ಮೇಲಿನ ಟ್ರಾಫಿಕ್ ಗೆ ತತ್ತರಿಸಿದ ಬೆಂಗಳೂರಿಗರು!
ಕಳೆದ ವರ್ಷ ಬರಗಾಲದಲ್ಲಿ ರೈತರಿಗೆ ಪರಿಹಾರ ನೀಡಲಿಲ್ಲ. ಕೇಂದ್ರ ನೀಡಿದ್ದ ಹಣ ಕೊಟ್ಟು ಕೈ ಚೆಲ್ಲಿದರು. ಈ ವರ್ಷ ಮುಂಗಾರು ಹಾನಿಯಾಗಿತ್ತು. ಈಗ ಹಿಂಗಾರು ಕೂಡ ಹಾನಿಯಾಗಿದೆ. ಗದ್ದೆಗಳು ಕೆರೆಯಾಗಿವೆ. ಕೆರೆಗಳು ಹಳ್ಳಗಳಾಗಿವೆ. ಹಳ್ಳಗಳು ನದಿಗಳಾಗಿವೆ, ನದಿಗಳು ಸಮುದ್ಧ ಆಗಿವೆ. ಇಷ್ಟು ಭೀಕರವಾಗಿದ್ದರೂ ರೈತರಿಗೆ ಜನ ಸಾಮಾನ್ಯರಿಗೆ ಮನೆ ಕಳೆದುಕೊಂಡವರಿಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲ. ಪ್ರಜಾಪಭುತ್ವದಲ್ಲಿ ಜನರು ನಮ್ಮ ಮಾಲಿಕರು ಅವರ ಆಗು ಹೋಗುಗಳ ಬಗ್ಗೆ ನಾವು ತಿಳಿದುಕೊಂಡು ಅದಕ್ಕೆ ಪರಿಹಾರ ಕೊಡುವ ಕೆಲಸ ನಾವು ಮಾಡಬೇಕು. ನಮ್ಮ ಕಾಲದಲ್ಲಿ ಭೀಕರ ಪ್ರವಾಹ ಬಂದು ಸಾವಿರಾರು ಮನೆಗಳು ಬಿದಿದ್ದವು. ಆಗ ನಮ್ಮ ನಾಯಕರಾಗಿದ್ದ ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದ ಮನೆ ಬಿದ್ದರೆ ಐದು ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವು. ಇವರ ಸರ್ಕಾರದಲ್ಲಿ ನಮ್ಮ ತಾಲೂಕಿನಲ್ಲಿ ಕೇವಲ ಪೂರ್ಣ ಬಿದ್ದ ಮನೆಗೆ ಮೊದಲ ಕಂತಿನಲ್ಲಿ ಕೇವಲ ಆರೂವರೆ ಸಾವಿರ ರೂ. ಕೊಟ್ಟಿದ್ದಾರೆ. ಕೇವಲ ತೊಂಬತ್ತು ಸಾವಿರ ಕೊಡುತ್ತಾರಂತೆ. ಬಡವರ ಪರವಾಗಿರುವ ವ್ಯಕ್ತಿಯ ಕೈಯಲ್ಲಿ ಅಧಿಕಾರ ಇದ್ದರೆ ಏನು ಮಾಡುತ್ತಾರೆ. ಕೇವಲ ಘೋಷಣೆ ಮಾಡಿ, ರಾಜಕಾರಣ ಮಾಡುವ ವ್ಯಕ್ತಿಗೆ ಅಧಿಕಾರ ಬಂದರೆ ಏನು ಮಾಡುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ನಾವು ಅಧಿಕಾರದಲ್ಲಿದ್ದಾಗ ಪ್ರವಾಹ ಬಂದಾಗ ಕೇಂದ್ರ ಸರ್ಕಾರ ನೀಡುವ ಹಣದ ದುಪ್ಪಟ್ಟು ಹಣ ನಾವು ನೀಡಿದ್ದೇವೆ. ಹೀಗಾಗಿ ನಮಗೆ ಈ ಸರ್ಕಾರವನ್ನು ಒತ್ತಾಯಿಸುವ ನೈತಿಕ ಹಕ್ಕಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿರುವ ಅನುದಾನವನ್ನು ಹಿಂದುಳಿದ ವರ್ಗಗಳಿಗೆ ಬಿಡುಗಡೆ ಮಾಡಿಲ್ಲ. ಗ್ಯಾರೆಂಟಿ ಹೆಸರಿನಲ್ಲಿ ಸುಮಾರು 24 ಸಾವಿರ ಕೋಟಿ ರೂ. ಎಸ್ಸಿ ಎಸ್ಪಿ ಹಣವನ್ನು ನುಂಗಿ ಹಾಕಿದರು. ಆ ಸಮುದಾಯಗಳಿಗೆ ರಸ್ತೆ ಅಭಿವೃದ್ಧಿ, ಬೋರ್ ವೆಲ್ ಕೊರೆಯಲು, ಹೊಲ ಹಿಡಿಯಲು ಇಟ್ಟಿದ್ದ ಹಣವನ್ನು ಲೂಟಿ ಮಾಡಿದರು. ಎಸ್ಪಿ ನಿಗಮದ ಹಣವನ್ನು ಚುನಾವಣೆಗೆ ಬಳಸಿಕೊಂಡರು. ಆದರೂ ನಾವು ಏನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಇದನ್ನು ಓದಿ: ಅಮರನ್ ಸಿನಿಮಾ ಟ್ರೈಲರ್ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀವ್ಸ್ !
ನಾನು ಬಹಳ ಪುಣ್ಯ ಮಾಡಿದ್ದೇನೆ. ಇದು ಶರಣರ ನಾಡು, ಕನಕದಾಸರು, ಶರೀಫರು ಹುಟ್ಟಿದ ನಾಡು, ಈ ನಾಡಲ್ಲಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ನಮ್ಮ ತಂದೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಕನಕದಾಸರ ಅರಮನೆ ಉತ್ಥಾನ ಮಾಡಲಾಯಿತು. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ಕನಕದಾಸರ ಅರಮನೆ, ಶಿಶುನಾಳ ಶರೀಫರ ಊರು, ಆಲೂರು ವೆಂಕಟರಾಯರ ಊರು ಅಭಿವೃದ್ಧಿ ಪಡಿಸಲಾಯಿತು. ಕನಕದಾಸರನ್ನು ಇಡೀ ದೇಶಕ್ಕೆ ಪರಿಚಯ ಮಾಡಿಸುವ ಕೆಲಸ ಮಾಡಿರುವುದು ನನ್ನ ಸೌಭಾಗ್ಯ ಎಂದರು.
ಕುಲ ಕುಲ ಕಲವೆಂದು ಹೊಡೆದಾಡ ಬೇಡಿ, ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಕನಕದಾಸರು ಪ್ರಶ್ನಿಸುತ್ತಾರೆ. ಕನಕದಾಸರ ದಾಯಾದಿಗಳೇ ಅವರನ್ನು ಸೋಲಿಸುತ್ತಾರೆ. ಅದರಿಂದ ಹೊರ ಬಂದು ದಾಸರಾಗುತ್ತಾರೆ. ಅಲ್ಲಿಂದ ಕಾಗಿನೆಲೆಗೆ ಬಂದು ಆ ಒಂದು ಸೋಲಿನಲ್ಲಿ ಹಲವಾರು ಗೆಲುವನ್ನು ಕಂಡೆ. ನನ್ನನ್ನು ನಾನೇ ಗೆದ್ದುಕೊಂಡೆ ಎಂದು ಹೇಳುತ್ತಾರೆ. ಅಂತ ದಾರ್ಶನಿಕರ ಸೇವೆ ಮಾಡುವ ಭಾಗ್ಯ ನನ್ನದು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಅವಧಿಯಲ್ಲಿ ಮಾಡಿದ್ದೇವೆ. ಶಿಶುನಾಳ ಶರೀಫರ ಊರು ಅಭಿವೃದ್ಧಿ ಮಾಡಿದ್ದೇವೆ. ಇವತ್ತಿನ ಪ್ರಸ್ತುತ ಪರಿಸ್ಥಿತಿಗೆ ತಕ್ಕ ಹಾಗೆ ಶಿಶುನಾಳ ಶರೀಫರು ಕೋಡಗನ್ನ ಕೋಳಿ ನುಂಗಿತ್ತ, ಸುಣ್ಣವು ಗೋಡೆ ನುಂಗಿತ್ತ ಎಂದು ಈ ಸರ್ಕಾರ ಅದನ್ನೇ ಮಾಡುತ್ತಿದೆ. ವಾಲ್ಮೀಕಿ ನಿಗಮದ ಹಣ ನುಂಗಿದ್ದು ನೋಡಿದಾಗ ಅದೇ ಅನಿಸುತ್ತದೆ. ಎಲ್ಲ ವರ್ಗದವರು ಅಭಿವೃದ್ಧಿ ಹೊಂದಿದಾಗ ಮಾತ್ರ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.
ರೈತರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಯಾವುದೇ ಜಾತಿಗೆ ಸೇರಿಲ್ಲ. ಲಿಂಗಾಯತರು, ಮುಸ್ಲಿಮರು, ಬ್ರಾಹ್ಮಣರಲ್ಲಿಯೂ ರೈತರಿದ್ದಾರೆ. ಯಾರೂ ಅರ್ಜಿ ಹಾಕಿ ಹುಟ್ಟಿಲ್ಲ. ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ. ಬದುಕು ನಮ್ಮ ಕೈಯಲ್ಲಿದೆ. ಬದುಕಿದ್ದಾಗ ನಾವು ಯಾವ ಕೆಲಸ ಮಾಡುತ್ತೇವೆ ಅನ್ನುವುದು ಮುಖ್ಯ. ನಾವು ಯಾವುದೇ ಭೇಧ ಭಾವ ಮಾಡಿಲ್ಲ. ಅದನ್ನು ನಮಗೆ ಕಲಿಸಿಲ್ಲ. ಸವಣೂರು ನವಾಬರು ಆರುನೂರು ವರ್ಷ ಆಳಿದರು. ಅವರ ಅರಮನೆ ಕೊಂಪೆಯಾಗಿತ್ತು. ಎಷ್ಟು ಜನ ಕಾಂಗ್ರೆಸ್ನವರು ಬಂದು ಹೋಗಿದ್ದರು. ತಿರುಗಿ ನೋಡಿರಲಿಲ್ಲ. ನಾವು ಎಲ್ಲರನ್ನು ಸರಿಸಮಾನವಾಗಿ ನೋಡಿಕೊಂಡಿದ್ದೇವೆ. ಪ್ರವಾಹ ಬಂದಾಗ 15 ಸಾವಿರ ಮನೆಗಳನ್ನು ನಮ್ಮ ಕ್ಷೇತ್ರದಲ್ಲಿ ಕಟ್ಟಿದ್ದೇವೆ. ಧಾರವಾಡ, ಬೆಳಗಾವಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಮನೆಗಳನ್ನು ಕಟ್ಟಿದ್ದೇವೆ ಎಂದರು.
ಇದನ್ನು ಓದಿ: ಕಿವೀಸ್ಗೆ ಆರಂಭದಲ್ಲಿ ಟಕ್ಕರ್ ಕೊಟ್ಟ ಆರ್ ಅಶ್ವಿನ್!
ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಸೇರಿದಂತೆ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಿಂದ ಬಹಳಷ್ಟು ಜನರಿಗೆ ಲಾಭ ದೊರೆತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಕೆಲಸವನ್ನು ಭರತ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗುತ್ತಾರೆ. ಹಿರಿಯರು ಭರತ ಬೊಮ್ಮಾಯಿಗೆ ಮಾರ್ಗದರ್ಶನ ಮಾಡಬೇಕು. ಯಾವ ಸಮುದಾಯ ಎಲ್ಲಿ ಹಿಂದುಳಿದಿದೆ. ಯಾವ ಕೆಲಸ ಮಾಡಬೇಕು ಎಂದು ಸಲಹೆ ನೀಡಬೇಕು. ಪಧಾನ ಮಂತ್ರಿ 18 ಸಮುದಾಗಳಿಗೆ ವಿಶ್ವ ಕರ್ಮ ಯೋಜನೆ ಜಾರಿ ಮಾಡಿದೆ. ನಾನು ಸಿಎಂ ಇದ್ದಾಗ ಕಂಬಾರ, ಕುಂಬಾರರು, ಹೂಗರರು, ಮಾಳಿ ಸಮುದಾಯ, ಉಪ್ಪಾರ ಸಮುದಾಯಗಳಿಗೆ ಅಭಿವೃದ್ದಿ ನಿಗಮ ಮಾಡಿದ್ದೇವು. ಭರತ ಬೊಮ್ಮಾಯಿ ಹಿಂದುಳಿದ ವರ್ಗಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಗುಡುಗಬೇಕು ಎಂದು ಸಲಹೆ ನೀಡಿದರು. ಈ ಚುನಾವಣೆಯಲ್ಲಿ ಜಯ ನಿಶ್ಚಿತ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಶ್ಚಿತ, ಹಿಂದುಳಿದ ವರ್ಗಗಳ ಕೆಲವು ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಹೇಳಿದರು.