ಚಾಂಪಿಯನ್ ಕೋಚ್ ರಾಹುಲ್ ದ್ರಾವಿಡ್ಗೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಒಂದರ ಹಿಂದೆ ಮತ್ತೊಂದು ಆಫರ್, ದಿ ವಾಲ್ರನ್ನ ಹುಡುಕಿ ಬರ್ತಿವೆ. ಇದ್ರಲ್ಲಿ ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಅಂತ ಭಾರತ ತಂಡದ ಮಾಜಿ ಕೋಚ್ಗೆ ಗೊಂದಲ ಶುರುವಾಗಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದೇ ಬಂತು. ದಿ ವಾಲ್ ಅದೃಷ್ಟವೇ ಬದಲಾಗಿದೆ. ಒಂದರ ಹಿಂದೆ ಒಂದು ಆಫರ್ ಅವರನ್ನ ಹುಡುಕಿಕೊಂಡು ಬರ್ತಿವೆ. ಮುಂದಿನ ಐಪಿಎಲ್ ಸೀಸನ್ನಲ್ಲಿ ಪ್ರಮುಖ ತಂಡವೊಂದರ ಹೆಡ್ಕೋಚ್ ಆಗ್ತಾರೆ ಅನ್ನು ಸುದ್ದಿ ಹರಿದಾಡ್ತಿರೋವಾಗಲೇ ಚಾಂಪಿಯನ್ ಕೋಚ್ಗೆ ಇದೀಗ ಮತ್ತೊಂದು ದೊಡ್ಡ ಆಫರ್ ಬಂದಿದೆ.
ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ತಾನು ಇನ್ಮುಂದೆ ನಿರುದ್ಯೋಗಿ ಅಂದಿದ್ದ ಲೆಜೆಂಡ್ರಿ ರಾಹುಲ್ಗೆ ಇಂಗ್ಲೆಂಡ್ ತಂಡದ ಹೆಡ್ಕೋಚ್ ಆಫರ್ ಅರಸಿ ಬಂದಿದೆ. ಟಿ20 ವಿಶ್ವಕಪ್ ಹಾಗೂ ಒನ್ ಡೇ ವಿಶ್ವಕಪ್ ಫೇಲ್ಯೂರ್ ಬೆನ್ನಲ್ಲೆ ECB ವೈಟ್ ಬಾಲ್ ಹೆಡ್ಕೋಚ್ ಮ್ಯಾಥ್ಯೂವ್ ಮೋಟ್ರನ್ನ ಕೆಳಗಿಳಿಸಿದೆ. ಇವರ ಬದಲಿಗೆ ಚಾಂಪಿಯನ್ ಕೋಚ್ ದ್ರಾವಿಡ್ರನ್ನ ನೇಮಿಸಿಕೊಳ್ಳಲು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಪ್ಲಾನ್ ಮಾಡಿದೆ.
ಈ ನಡುವಲ್ಲೆ ಮಾಜಿ ಚಾಂಪಿಯನ್ ಕ್ಯಾಪ್ಟನ್ ಇಯಾನ್ ಮಾರ್ಗನ್, ಕೂಡ ರಾಹುಲ್ ದ್ರಾವಿಡ್ ಇಂಗ್ಲೆಂಡ್ ತಂಡದ ವೈಲ್ಬಾಲ್ ಕೋಚ್ ಆದ್ರೆ, ಬೆಸ್ಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದ್ರಾವಿಡ್ ತಂಡಕ್ಕೆ ಸೂಕ್ತ ಎಂದು ಮಾರ್ಗನ್ ಹೇಳಿದ್ದಾರೆ. ಸದ್ಯ ಇಯಾನ್ ಮಾರ್ಗನ್ ಏನೋ ಇಂಗ್ಲೆಂಡ್ ತಂಡದ ಕೋಚ್ ಆಗಲು ರಾಹುಲ್ ದ್ರಾವಿಡ್ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಇಂಗ್ಲೆಂಡ್ ತಂಡದ ಹೆಡ್ಕೋಚ್ ಹುದ್ದೆಗೇರುವುದು ಸುಲಭವಿಲ್ಲ. ಯಾಕಂದ್ರೆ ಈ ಸಿಂಹಾಸನದ ಪಟ್ಟಕ್ಕೆ ದಿಗ್ಗಜರ ನಡುವೆ ಪೈಪೋಟಿ ಏರ್ಪಟ್ಟಿದೆ. ದ್ರಾವಿಡ್ ಸೇರಿದಂತೆ ಸ್ಟೀಫನ್ ಪ್ಲೇಮಿಂಗ್, ರಿಕಿ ಪಾಂಟಿಂಗ್ ಹಾಗೂ ಕುಮಾರ್ ಸಂಗಕ್ಕಾರ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ದ್ರಾವಿಡ್ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡ್ತಿದ್ದಂತೆ ರಾಜಸ್ಥಾನ ರಾಯಲ್ಸ್ ಗಾಳ ಹಾಕಿದೆ. 18ನೇ ಐಪಿಎಲ್ ಸೀಸನ್ನಲ್ಲಿ ರಾಜಸ್ಥಾನ ತಂಡದ ಹೆಡ್ಕೋಚ್ ಆಗುವಂತೆ ಆಫರ್ ಕೊಟ್ಟಿದೆ. ಈ ಬಗ್ಗೆ ದ್ರಾವಿಡ್ ಜೊತೆ ಮಾತುಕತೆ ನಡೆದಿದೆ. ಆದ್ರೆ, ನಿರ್ಧಾರ ಮಾತ್ರ ಸಸ್ಪೆನ್ಸ್ ಆಗುಳಿದಿದೆ.