ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ ಕುಂದಾಪುರ ಸಖತ್ ರಗಡ್ ಎಂದು ಅವರ ಫ್ಯಾನ್ಸ್ ಹೇಳುತ್ತಲೇ ಇರುತ್ತಾರೆ. ನೇರ ಮಾತುಗಳಿಂದ ವೀಕ್ಷಕರನ್ನು ಗಮನ ಸೆಳೆಯುತ್ತಿದ್ದಾರೆ. ಮಾತ್ರವಲ್ಲ ಇದೀಗ ತನಗೆ ಮದುವೆ ಫಿಕ್ಸ್ ಆಗಿದೆ. ಸಂಬಂಧ ಏನಾದರೂ ಯಾರಾದ್ರೂ ಕಟ್ಟಿದ್ದರೆ ಮೆಟ್ಟು ತೆಗೊಂಡು ಹೊಡೆಯುತ್ತೇನೆ ಎಂದು ಹಂಸ ಮುಂದೆ ಅಬ್ಬರಿಸಿದ್ದಾರೆ ಲೇಡಿ ಡಾನ್. ಇದೀಗ ಚೈತ್ರಾ ಅವರ ಮದುವೆ ಕೂಡ ಫಿಕ್ಸ್ ಆಗಿರುವುದರ ಬಗ್ಗೆ ಅವರ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚೈತ್ರಾ ಕುಂದಾಪುರ ಅವರಿಗೆ ಮದುವೆ ಫಿಕ್ಸ್ ಆಗಿದೆ. ಸ್ವತಃ ಅವರೇ ನಿನ್ನೆಯ ಸಂಚಿಕೆಯಲ್ಲಿ ಬಾಯ್ಬಿಟ್ಟಿದ್ದಾರೆ. ಬಿಗ್ ಬಾಸ್ ಮನೆ ಅಂತ ಬಂದರೆ ಲವ್ ಕಾಮನ್. ಅದೇ ರೀತಿ ಈ ಬಗ್ಗೆ ಹಂಸ, ಮಾನಸ, ಚೈತ್ರಾ ಚರ್ಚೆ ಮಾಡ್ತಾ ಇದ್ದರು. ಈ ವೇಳೆ ಹಂಸ ಅವರು `ಪಂಚಾಯಿತಿಯಲ್ಲಿ ಸುರೇಶ್ ಅವರು ನಂದು, ರಂಜಿತ್ ಹಾಗೂ ತ್ರಿವಿಕ್ರಂದು ಲವ್ಸ್ಟೋರಿ ಇದೆ ಅಂತ ಹೇಳಿಕೆ ಕೊಟ್ಟರು. ಅಲ್ಲ ನನ್ನ ಫ್ಯಾಮಿಲಿ ಕೂಡ ಇದೆಲ್ಲ ನೋಡ್ತಾ ಇರತ್ತೆ. ಹೀಗೆಲ್ಲ ಹೇಳಿದ್ರೆ ಕಷ್ಟ ಆಗುತ್ತದೆ. ಅವರ ಜೊತೆ ಯಾಕೆ ಕ್ಲೋಸ್ ಆದೆ ಎಂದರೆ ಅವರು ಯಾರ ಬಗ್ಗೆಯೂ ಮಾತನಾಡಲ್ಲ. ಆದರೆ ಸುರೇಶ್ ಜೊತೆ ಕುಳಿತರೆ ನೆಗೆಟಿವ್ ವೈಬ್ಸ್ ಜಾಸ್ತಿ. ಈ ಕಾರಣಕ್ಕೆ ರಂಜಿತ್ ಹಾಗೂ ತ್ರಿವಿಕ್ರಂ ಜೊತೆ ಕ್ಲೋಸ್ ಆಗಿದ್ದೇನೆ. ಆದರೆ ಈ ರೀತಿ ವೀಕೆಂಡ್ನಲ್ಲಿ ಹೇಳಿದ್ದು ನನಗೆ ಸ್ವಲ್ಪವೂ ಸರಿ ಎನಿಸಿಲ್ಲ’ ಎಂದು ಹಂಸಾ ಹೇಳಿಕೆ ನೀಡಿದರು.
ಚೈತ್ರಾ ಕುಂದಾಪುರ ಹೇಳಿದ್ದೇನು?
`ಇದಾದ ಬಳಿಕ ಚೈತ್ರಾ ಅವರು ಕೂಡ ಸ್ವಲ್ಪ ಗರಂ ಆದರು. ನಾನು ವಿಕ್ಕಿ ಜತೆ ಕ್ಲೋಸ್ ಆಗಿದ್ದೇನೆ ಎಂದು ಸುರೇಶ್ ಅಣ್ಣ ಹೆಳುತ್ತಲೇ ಇದ್ದಾರೆ. ಅದು ಅಲ್ಲದೇ ಸುರೇಶ್ ಅವರಿಗೆ ಎಲ್ಲಿ ಯಾರ ಜತೆ ಏನು ಮಾತನಾಡಬೇಕು ಏನು ಗೊತ್ತಾಗಲ್ಲ. ಒಂದು ವೇಳೆ ನನಗೂ ಈ ರೀತಿ ಲವ್ ಸ್ಟೋರಿ ಕಟ್ಟಿದರೆ ನಾನು ಸುಮ್ಮನೆ ಇರಲ್ಲ. ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ. ಹೊರಗೆ ಹೋದರೂ ನನಗೆ ಚಿಂತೆ ಇಲ್ಲ. ನನ್ನ ಕ್ಯಾರೆಕ್ಟರ್ಗೆ ಯಾರಾದರೂ ಕೈ ಹಾಕಿದರೆ ಸುಮ್ಮನೇ ಬಿಡಲ್ಲ ನಾನು. ಅದು ಅಲ್ಲದೇ ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ’ ಎಂದರು. ಈ ಮೂಲಕ ಮದುವೆ ಫಿಕ್ಸ್ ಆಗಿರೋ ಬಗ್ಗೆ ಮಾತನಾಡಿದ್ದಾರೆ.
ಇನ್ನು ಮನೆಯಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ಕೊಟ್ಟಿದ್ದಾರೆ. ಸ್ಪರ್ಧಿಗಳ ಮಧ್ಯೆ ಮಾರಾಮಾರಿ ಕೂಡ ಆಗ್ತಿದೆ. ಶಿಶಿರ್ ಮತ್ತು ಉಗ್ರಂ ಮಂಜು ಕಿತ್ತಾಡಿ ಆಗಿದೆ. ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಕಿತ್ತಾಡಿದಂತೆ ಕಾಣಿಸುತ್ತಿದೆ. ಕ್ಯಾಪ್ಟನ್ ಆಗಲು ಟಾಸ್ಕ್ ಕೊಟ್ಟಿದ್ದಾರೆ. ಒಬ್ಬರಲ್ಲ, ಇಬ್ಬರು ಈ ಸಲ ಕ್ಯಾಪ್ಟನ್ ಆಗುತ್ತಿದ್ದಾರೆ. ಹಾಗಾಗಿಯೇ 17 ನಿಮಿಷದ ವಾಕ್ ಟಾಸ್ಕ್ ಅಲ್ಲಿ ಇಬ್ಬರು ಸ್ಪರ್ಧಿಗಳಿದ್ದಾರೆ. ಗೆದ್ದವರು ಈ ಟಾಸ್ಕ್ ಅಲ್ಲಿ ಕ್ಯಾಪ್ಟನ್ ಆಗುತ್ತಾರೆ