ದಿನ ಕಳೆದಂತೆಲ್ಲ ಬಿಗ್ ಬಾಸ್ ಮನೆಯಲ್ಲಿ ಟೆನ್ಷನ್ ಹೆಚ್ಚುತ್ತಿದೆ. ಶಿಶಿರ್ ಬಳಿಕ ಅಲ್ಪಾವಧಿಗೆ ಹನುಮಂತ ಕ್ಯಾಪ್ಟನ್ ಆಗಿದ್ದರು. ಈಗ ಹೊಸ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ ನೀಡಲಾಗಿದೆ. ಈ ವೇಳೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಜಗಳ ನಡೆದಿದೆ. ಈಗ ಜಗಳ ಮಿತಿಮೀರಿದೆ. ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಕಿತ್ತಾಡಿದಂತೆ ಕಾಣಿಸುತ್ತಿದೆ.
ಇದನ್ನು ಓದಿ: BBK11: ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ; ಚೈತ್ರಾ !
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಜೋರಾಗಿದೆ. ಕ್ಯಾಪ್ಟನ್ಶಿ ಟಾಸ್ಕ್ ಪೀಕ್ನಲ್ಲಿದೆ. ಈ ಟಾಸ್ಕ್ನಲ್ಲಿ ಸ್ಪರ್ಧಿಗಳ ಮಧ್ಯೆ ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ ಹಾಳು ಮಾಡಬೇಕು ಎಂಬ ಕಾರಣಕ್ಕೆ ಕಿರಿಕ್ ನಡೆದಿದೆ. ಇದು ಮಿತಿಮೀರುವ ಸೂಚನೆ ಸಿಕ್ಕಿದೆ.
ಇದನ್ನ ನೋಡಿದ ಸಿಂಗರ್ ಹನುಮಂತ ಮಾರ್ಮಿಕವಾಗಿಯೇ “ಒಳಿತು ಮಾಡೋ ಮನುಷ್ಯ” ಅಂತ ಹಾಡ್ತಾನೇ ಇದ್ದಾರೆ. ಮನೆಯಲ್ಲಿ ಗೆಲುವಿಗಾಗಿಯೇ ನಡೆಯುತ್ತಿರೋ ಟಾರ್ಗೆಟ್ ಆಟ ಈ ಒಂದು ಫೀಲ್ ತಂದು ಕೊಟ್ಟಿದೆ. ಆದರೆ, ಸ್ಪರ್ಧಿಗಳ ಗೆಲುವಿಗಾಗಿಯೇ ನಡೆಯುತ್ತಿರೋ ಆಟದಲ್ಲಿ ಕ್ರೌರ್ಯವೇ ಎದ್ದು ಕಾಣಿಸುತ್ತಿದೆ. 17 ನಿಮಿಷ ನಡೆಯೋ ಸ್ಪರ್ಧಿಗಳ ಕಾಲಿಗೆ ದಿಂಬಿನಿಂದ ಹೊಡೆಯೋ ಸ್ಟ್ರಾಟರ್ಜಿ ಇಲ್ಲಿ ಹೆಚ್ಚಿನ ನೋವು ತರುತ್ತಿದೆ. ಇದರಿಂದ ಭವ್ಯ ಗೌಡ ರಾಂಗ್ ಆಗಿದ್ದಾರೆ. ಮನೆಯಲ್ಲಿ ಸದ್ಯ ಬೇರೆಯದ್ದೇ ವೈಬ್ ಇದೆ. ಗೆಲ್ಲೋರು ಯಾರು ಅನ್ನುವ ಕುತೂಹಲ ಪ್ರೇಕ್ಷಕರಲ್ಲೂ ಬಲವಾಗಿಯೇ ಮೂಡಿದೆ. ಇಂದಿನ ಎಪಿಸೋಡ್ನಲ್ಲಿ ಎಲ್ಲವೂ ತಿಳಿಯಲಿದೆ.