ಬಿಗ್ಬಾಸ್ ಸೀಸನ್ 11 ರ 3ನೇ ವಾರ ದೊಡ್ಮನೆ ರಣರಂಗವಾಗಿ ಮಾರ್ಪಟ್ಟಿತ್ತು. ಸ್ಪರ್ಧಿಗಳ ನಡುವೆ ಮಾರಾಮಾರಿಯೇ ನಡೆದಿತ್ತು. ಮಾತಿಗೆ ಮಾತು ಬೆಳೆದು ಬಿಗ್ಬಾಸ್ ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಕೈ ಕೈ ಮಿಲಾಯಿಸಿದ್ರು. ರಂಜಿತ್,ಜಗದೀಶ್ ಅವರನ್ನು ತಳ್ಳಿದ್ರು. ಬಳಿಕ ಇಬ್ಬರನ್ನು ದೊಡ್ಮನೆಯಿಂದ ಹೊರಹಾಕಲಾಯ್ತು. ಬಿಗ್ ಬಾಸ್ ಮನೆಯಲ್ಲಾದ ಹಲವು ತಪ್ಪು ಹಾಗೂ ಜಗಳಗಳಿಗೆ ಕಿಚ್ಚ ಸುದೀಪ್ ಅವರು ಇಂದು ಪಂಚಾಯ್ತಿ ಮಾಡಿದ್ದಾರೆ. ಕಿಚ್ಚನ ಕಟಕಟೆಯಲ್ಲಿ ನಿಂತ ಮನೆಯ ಎಲ್ಲಾ ಸದಸ್ಯರು ಸುದೀಪ್ ಅವರ ಖಡಕ್ ಮಾತಿಗೆ ಬೆಚ್ಚಿ ಬಿದ್ದಿದ್ದಾರೆ. ಪ್ರತಿಯೊಬ್ಬರ ತಪ್ಪುಗಳನ್ನು ಉಲ್ಲೇಖ ಮಾಡಿರುವ ಕಿಚ್ಚನ ಮಾತು ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರಿಗೂ ಬೆವರು ಇಳಿಯುವಂತೆ ಮಾಡಿದೆ.
ಪಂಚಾಯ್ತಿ ಕಟ್ಟೆಯಲ್ಲಿ ಸರಿ, ತಪ್ಪುಗಳ ಬಗ್ಗೆ ಚರ್ಚೆ ಮಾಡಿದ ಕಿಚ್ಚ ಸುದೀಪ್ ಅವರು ಪ್ರಮುಖವಾಗಿ ಮೂವರಿಗೆ ಸಖತ್ ಪಂಚ್ ಕೊಟ್ಟಿದ್ದಾರೆ. ಮೊದಲಿಗೆ ತಪ್ಪು ಮಾಡಿದವರು ಹೊರಗೆ ಹೋದ್ರು. ನೀವುಗಳಲ್ಲಿ ಎಷ್ಟು ಜನ ಸರಿ ಇದ್ದೀರಾ. ಒಬ್ಬ ಚಪ್ಪಲ್ ಎತ್ತಿ ಬಿಸಾಡುತ್ತಾ ಇದ್ದಾರೆ ಅಂದ್ರೆ ಅದು ಓಕೆ ನಾ ಎಂದು ಉಗ್ರಂ ಮಂಜುಗೆ ಮಾತಲ್ಲೇ ಚಾಟಿ ಬೀಸಿದ್ದಾರೆ.
ಎರಡನೇಯದಾಗಿ ಪ್ರಾಮಾಣಿಕತೆ ಅನ್ನೋ ವರ್ಲ್ಡ್ ಈ ಮನೆಗೆ ಸೂಟ್ ಆಗಲ್ಲ. ಮಾತುಗಳಿಂದಲೇ ಒಬ್ಬ ವ್ಯಕ್ತಿ ಈ ಮನೆಯಿಂದ ಹೊರಗೆ ಹೋಗಿದ್ದಾರೆ ಅಂದ್ರೆ ನೀವು ಆಡಿರೋ ತಪ್ಪು ಮಾತುಗಳನ್ನ ಇಟ್ಕೊಂಡು ನಿಮ್ಮನ್ನ ಇನ್ನೂ ಯಾಕೆ ಒಳಗೆ ಇಟ್ಟುಕೊಂಡಿರಬೇಕು ಎಂದು ಮಾನಸ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮೂರನೇಯದಾಗಿ ಚೈತ್ರಾ ಕುಂದಾಪುರ ವಿಚಾರಕ್ಕೆ ಬಂದ ಕಿಚ್ಚ ಸುದೀಪ್ ಅವರು ರೋಷಾವೇಶದಲ್ಲಿ ಮಾತನಾಡಿದ್ದಾರೆ. ಚೈತ್ರಾ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಡಿ ಅಂತೀರಾ. ಒಬ್ಬ ಅಪ್ಪನಿಗೆ ಹುಟ್ಟಿದ್ಯಾ ಅಂದ್ರೆ ಯಾವ ನನ್ಮಗನು ಅಪ್ಪನಿಗೆ ಬೈಯುತ್ತಿಲ್ಲ ಮೇಡಂ ತಾಯಿಗೆ ಬೈಯುತ್ತಾ ಇರೋದು ಎಂದು ಸುದೀಪ್ ಚೈತ್ರಾ ಮೇಲೆ ಕೋಪಗೊಂಡ್ರು. ಸುದೀಪ್ ಮಾತು ಕೇಳಿ ಚೈತ್ರಾ ಕುಂದಾಪುರ ತಲೆ ತಗ್ಗಿಸಿದ್ದಾರೆ.
ಅನುಷಾ ಅವರನನ್ಉ ತರಾಟೆಗೆ ತೆಗೆದುಕಂಡ ಕಿಚ್ಚ ಸುದೀಪ್ ಜಗದೀಶ್ ಅನೇಕ ಬಾರಿ ನಿಮ್ಮ ಬೆಂಬಲಕ್ಕೆ ನಿಂತಿದ್ರು. ಆದ್ರೆ ನೀವು ಮಾಡಿದ್ದು ಎನು ಎಂದು ಪ್ರಶ್ನೆ ಮಾಡಿದ್ರು, ಹೌದು ನಾನು ಸಿಟ್ಟಾದಾಗ ಜಗದೀಶ್ ಅವರೇ ಕೋಪ ಮಾಡಿಕೊಳ್ಳಬೇಡ ಕೂಲ್ ಅಂದ್ರು. ಆದ್ರೆ ಜಗಳದ ಮಧ್ಯೆ ನಾನು ಹೋಗಲಿಲ್ಲ. ಅವರನ್ನು ಕೂಲ್ ಮಾಡಲು ಯತ್ನಿಸಿಲ್ಲ ಸಾರಿ ಅಂತ ಅನುಷಾ ಹೇಳಿದ್ರು. ಸಾರಿ ನಮಗೆ ಬೇಡ ನಾವು ಕೇಳೋದಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ರು. ಅಷ್ಟೇ ಅಲ್ಲದೇ ನಾವು ಮಅಡೋ ತಪ್ಪುಗಳನ್ನ ಬೆಂಬಲಿಸಿ ಎನ್ನುವುದಿಲ್ಲ. ಇನ್ನೋಬರನ್ನ ಟೀಕೆ ಮಾಡುವಾಗ ನಿಂತು ತಮಾಷೆ ನೋಡಿದ್ರೆ, ಅವರು ನನ್ನ ಪಾಲಿಗೆ ಸತ್ರು. ಅವರ ಮೇಲೆ ಒಂದು ಕ್ಷಣ ಖರ್ಚು ಮಅಡೋದು ನನಗೆ ವೇಸ್ಟ್ ಅನಿಸುತ್ತೆ. ಎಂದು ಕಿಚ್ಚ್ ಸುದೀಪ್ ಕಿಡಿಕಾರಿದ್ರು.