ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಮಾತು ದಿನೇ ದಿನೇ ಜೋರಾಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ವಾರ್ನಿಂಗ್ ಕೂಡ ಕೊಟ್ಟಿದ್ದರು. ಆದರೂ ಈ ಬಾರಿ ಗೌತಮಿ ಜತೆಗೆ ಬೇಕಾಬಿಟ್ಟಿ ಮಾತನಾಡಿದ್ದಾರೆ. ಮಾತಿನ ಭರದಲ್ಲಿ ಅಪ್ಪ-ಅಮ್ಮನ ವಿಚಾರವನ್ನೆಲ್ಲ ಪ್ರಸ್ತಾಪಿಸಲು ಶುರು ಮಾಡಿದ್ದಾರೆ. ಇದರಿಂದಾಗಿ ಗೌತಮಿ ಅವರಿಗೆ ಸಖತ್ ಕೋಪ ಬಂದಿದೆ.ಪಾಸಿಟಿವಿ ಮಾಯವಾಗುವ ರೀತಿಯಲ್ಲಿ ಜಗಳ ಆಡಿದ್ದಾರೆ. ಗೌತಮಿಗೆ ತಿರುಗೇಟು ನೀಡಲೇಬೇಕು ಎಂದು ರಜತ್ ಹಠ ಹಿಡಿದು ಕುಳಿತಿದ್ದಾರೆ.
ಬಿಗ್ ಬಾಸ್ ಮನೆಗೆ ಒಂದು ಟಾಸ್ಕ್ ನೀಡಿದ್ದರು. ಮನೆಯನ್ನು ಸ್ವಚ್ಛಗೊಳಿಸುವ ಟಾಸ್ಕ್. ಈ ಟಾಸ್ಕ್ನಲ್ಲಿ ಎಲ್ಲರೂ ಸಖತ್ ಆಗಿ ನಿಭಾಯಿಸಿದರು. ಆದರೆ ರಜತ್ ಮಾತ್ರ ಅಷ್ಟಾಗಿ ಕೆಲಸ ಮಾಡಿರಲಿಲ್ಲ. ಕೆಲಸದ ವಿಚಾರ ಬಂದಾಗ ರಜತ್ ಯಾವಾಗಲೂ ಸೋಮಾರಿತನ ಪ್ರದರ್ಶಿಸುತ್ತಾರೆ. ಕೆಲಸ ಮಾಡಲು ಹಿಂದೇಟು ಹಾಕಿದ ಅವರಿಗೆ ‘ಸುಮ್ಮನೆ ಕುಳಿತುಕೊಂಡು ಹಣ್ಣು ತಿನ್ನಿ’ ಎಂದು ಗೌತಮಿ ಜಾದವ್ ತಿರುಗೇಟು ನೀಡಿದರು. ಅಲ್ಲಿಂದ ಮಾತಿನ ಚಕಮಕಿ ಆರಂಭ ಆಯಿತು.
ತಾವು ಹಣ್ಣು ತಿನ್ನುವುದನ್ನು ಗೌತಮಿ ಜಾದವ್ ಟೀಕಿಸಿದ್ದಕ್ಕೆ ರಜತ್ ಅವರಿಗೆ ವಿಪರೀತ ಕೋಪ ಬಂತು. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಇಷ್ಟು ದಿನ ಪಾಸಿಟಿವ್ ಮಂತ್ರ ಜಪಿಸುತ್ತಿದ್ದ ಗೌತಮಿ ಜಾದವ್ ಅವರು ರಜತ್ಗೆ ಏಕವಚನದಲ್ಲಿ ಬೈಯ್ಯುವ ಮಟ್ಟಕ್ಕೆ ಬದಲಾದರು. ‘ಇವರ ಅಪ್ಪನ ಮನೆಯಿಂದ ತಂದವಳ ರೀತಿ ಹೇಳುತ್ತಾಳೆ’ ಎಂದು ರಜತ್ ಅವರು ಬಾಯಿಗೆ ಬಂದಂತೆ ಮಾತನಾಡಿ ಗದ್ದಲ ಎಬ್ಬಿಸಿದರು.
ಅಲ್ಲಿಂದ ರಜತ್ಗೆ ಕೋಪ ನೆತ್ತಿಗೇರಿದೆ. ಇವರ ಅಪ್ಪನ ಮನೆಯಿಂದ ತಂದವಳ ರೀತಿ ಹೇಳುತ್ತಾಳೆ. ಇದು ಬಿಗ್ ಬಾಸ್ ಕಳಿಸಿದ್ದು ತಾನೆ? ಯಾರಾದರೂ ಅಪ್ಪನ ಮನೆಯಿಂದ ತಂದಿದ್ದೀರಾ? ಎಂದು ಏಕವಚನದಲ್ಲೇ ಕೂಗಾಡಿದ್ದರಾರೆ. ಇನ್ನು ಗೌತಮಿಗೆ ಈ ಮಾತುಗಳು ತುಂಬ ಸಿಟ್ಟು ಭರಿಸಿದೆ, ಅಮ್ಮನ ವಿಷಯಕ್ಕೆ ಬಂದರೆ ಸರಿ ಇರುವುದಿಲ್ಲ ಎಂದು ವಾರ್ನಿಂಗ್ ಕೊಟ್ಟರು.
ಇನ್ನು ರಜತ್ ಕೂಡ ಗೌತಮಿ ಬಳಿ ಪಿಲ್ಲೋ ಎಸೆದು, ಡ್ರಾಮಾ ಮಾಡ್ಕೊಂಡೇ ಬಂದ್ಬುಟ್ಟೆ 12 ವಾರಗಳಿಂದ, ಒಂದ್ ಬಕೆಟ್ ಇನ್ನೊಂದ್ ಬಕೆಟ್ ಇಡ್ಕೊಂಡಿರೋದನ್ನು ಫಸ್ಟ್ ಟೈಮ್ ನೋಡಿದ್ದು, ನೀನ್ ದಬಾಕಿರೋದನ್ನು 12 ವಾರಗಳಿಂದ ನೋಡಿದ್ದೀನಿ, ಸಪೋರ್ಟ್ ಬೇಕು ಅಂತಾ ಯಾರದ್ದೋ ಕಾಲ್ ಹಿಡಿದುಕೊಂಡು ಹೋಗೋದಲ್ಲ, ತಾಕತ್ತಿದ್ರೆ ಇಂಡ್ಯುವಿಶುವಲ್ ಆಗಿ ಅಡು ಎಂದು ಅಬ್ಬರಿಸಿದ್ದಾರೆ.