ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದು ವರ್ಷಗಳು ಕಳೆದು, ಸೀಸನ್ 11 ಆರಂಭವಾಗಿ ಮುಗಿಯುವ ಹಂತಕ್ಕೆ ಬಂದರೂ ಸಹ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳ ಹವಾ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಈ ಸೀಸನ್ನ ಸ್ಪರ್ಧಿಗಳು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಹೀಗಾಗಿ ಮರೆತವರೂ ಕೂಡ ಈ ಸೀಜನ್ ಬಿಗ್ ಬಾಸ್ ಅನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ.
ಇದೀಗ ಬಿಗ್ ಬಾಸ್ ಸೀಸನ್ 10ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಪವಿ ಪೂವಪ್ಪ ಸುದ್ದಿಯಲ್ಲಿದ್ದಾರೆ. ಫ್ಯಾಷನ್ ಇನ್ಫ್ಲೂಯನ್ಸರ್ ಹಾಗೂ ಮಾಡೆಲ್ ಆಗಿ ಸಖತ್ ಫೇಮಸ್ ಆಗಿರುವ ಪವಿ ಪೂವಪ್ಪ ಬಿಗ್ ಬಾಸ್ ಸೀಸನ್ 10ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟು ಧೂಳೆಬ್ಬಿಸಿದ್ದರು.ಇದರಿಂದ ಮತ್ತಷ್ಟು ಜನರಿಗೆ ಹತ್ತಿರವಾಗಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು.
ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವ ಪವಿ ಪೂವಪ್ಪ ವೈಯಕ್ತಿಕ ಜೀವನದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿ ಬಹಿರಂಗಗೊಂಡಿದೆ. ಈ ಬಗ್ಗೆ ಸ್ವತಃ ಪವಿ ಪೂವಪ್ಪ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಬಿಗ್ ಬಾಸ್ ಸೀಸನ್ 10ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮಿಂಚಿದ ಮಾಡಲ್ ಹಾಗೂ ಫ್ಯಾಷನ್ ಇನ್ಫ್ಲೂಯನ್ಸರ್ ಪವಿ ಪೂವಪ್ಪ ಇದೀಗ ಬಾಯ್ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನೆಂದರು ರಿವೀಲ್ ಮಾಡಿದ್ದಾರೆ. ಈ ಹಿಂದೆ ತಮ್ಮ ಬಾಯ್ಫ್ರೆಂಡ್ ಜನಪ್ರಿಯ ಡಿಜೆ ಮ್ಯಾಡಿ ಎಂದು ಐರ್ಲ್ಯಾಂಡ್ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ನಲ್ಲಿದ್ದರು. ನಾವಿಬ್ಬರು ಮದುವೆಯಾಗುತ್ತೀವಿ ಎಂದು ಪವಿ ಹೇಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನು ಎಂದು ರಿವೀಲ್ ಮಾಡಿದ್ದಾರೆ.
ಸುಮಾರು 5 ವರ್ಷಗಳಿಂದ ನನ್ನ ಜೊತೆಯಲ್ಲಿದ್ದರು ಪ್ರತಿಯೊಂದು ಚೆನ್ನಾಗಿತ್ತು ನಮ್ಮಿಬ್ಬರು ನಡುವೆ ಒಳ್ಳೆ ಹೊಂದಾಣಿಕೆ ಇತ್ತು…ಹೋಗ್ತಾ ಹೋಗ್ತಾ ಅವರಿಗೆ ನನ್ನ ನಾಯಿ ಬಗ್ಗೆ ಸಮಸ್ಯೆ ಶುರುವಾಯ್ತು. ಮದುವೆಯಾದ ಮೇಲೆ ನಾಯಿಯನ್ನು ಬಿಡುವುದಿಲ್ಲ ಮನೆಯಲ್ಲಿ ಅಂದ್ರು…ಸಣ್ಣ ಪುಟ್ಟ ವಿಚಾರಗಳಿಗೆ ಕಾರಣ ಕೊಡಲು ಶುರು ಮಾಡಿದ್ದರು ಹೀಗಾಗಿ ನಾನೇ ಹಿಂದೆ ಸರಿದರೆ ಒಳ್ಳೆಯದಾಗುತ್ತದೆ ಎಂದು ಹೊರ ಬಂದೆ ಎಂದು ಪವಿ ಪೂವಪ್ಪ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಇನ್ನು ಈ ಹಿಂದೆ ಬಿಗ್ ಬಾಸ್ ಸಮಯದಲ್ಲಿ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದ ಪವಿ ಪೂವಪ್ಪ, ನನ್ನ ಬಾಯ್ಫ್ರೆಂಡ್ ಐರ್ಲ್ಯಾಂಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ನಾವಿಬ್ಬರು ಮದುವೆಯಾಗುತ್ತಿದ್ದೇವೆ ಎಂದು ಹೇಳಿದ್ದರು. ಇದೀಗ ಈ ಜೋಡಿಯ ನಡುವೆ ಬ್ರೇಕಪ್ ಆಗಿರುವ ವಿಚಾರ ಬಹಿರಂಗಗೊಂಡಿದೆ.