ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಸೌಂಡ್ಗೆ ಎಲ್ಲ ಸ್ಪರ್ಧಿಗಳು ನಡಗಿದ್ದೂ ಇದೆ. ಈ ಬಗ್ಗೆ ಸುದೀಪ್ ಅವರು ಚರ್ಚೆ ಕೂಡ ಮಾಡಿದ್ದರು. ಇದೀಗ ಮನೆಮಂದಿ ಈ ಬಗ್ಗೆ ಮಾತನಾಡಿಕೊಂಡು ತಮಾಷೆ ಕೂಡ ಮಾಡಿದ್ದಾರೆ. ಚೈತ್ರಾ ತಾನು ಪಾಪದವಳು ಅಂದಿದ್ದಕ್ಕೆ ರಜತ್ ಹಾಗೂ ತ್ರಿವಿಕ್ರಮ್ ಸಖತ್ ಆಗಿ ಕಾಲೆಳಿದಿದ್ದಾರೆ.
ಚೈತ್ರಾ ಸಹ ರಜತ್ ಅವರ ಹಾಸ್ಯವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳುತ್ತಾರೆ. ಆದರೆ ಒಮ್ಮೊಮ್ಮೆ ರಜತ್ ಹದ್ದು ಮೀರಿ ಹಾಸ್ಯ ಮಾಡಿದಾಗ ಚೈತ್ರಾ ಸುಮ್ಮನೆ ಕೂತಿಲ್ಲ. ಈಗ ಹಾಗೆಯೇ ಆಗಿದೆ. ಚೈತ್ರಾ ಮಾಟ-ಮಂತ್ರ ಮಾಡುತ್ತಾರೆ ಎಂದು ರಜತ್ ಹಾಸ್ಯ ಮಾಡಿದ್ದಕ್ಕೆ ಬಾಟಲಿ ತೆಗೆದುಕೊಂಡು ರಜತ್ಗೆ ಹೊಡೆದಿದ್ದಾರೆ ಚೈತ್ರಾ ಕುಂದಾಪುರ.
ಹಕ್ಕಿಗೆ ಹಾರೋಕ್ಕೆ ಬರುತ್ತೆ ಅಂತ ರಜತ್ ಹೇಳಿದಾಗ, ತಲೆ ಬುರುಡೆ ಒಡೆಯೋಕ್ಕು ಬರುತ್ತೆ ಎಂದಿದ್ದಾರೆ ಚೈತ್ರಾ. ಬಳಿಕ ರಜತ್ ಅವರು ಚೈತ್ರಾಗೆ ಮಂತ್ರ ಹಾಕೊಕ್ಕೆ ಬರುತ್ತೆ ಎಂದಿದ್ದಾರೆ. ಚೈತ್ರಾ ಅದಕ್ಕೆ ನಗುತ್ತಲೇ ಹೊರಗಡೆ ಹೋಗೋ ಅಷ್ಟರಲ್ಲಿ ನನ್ನನ್ನ ಮಂತ್ರವಾದಿ ಮಾಡ್ತಾರೆ ಅನಿಸುತ್ತೆ ಎಂದಿದ್ದಾರೆ. ಪಾಪದವಳು ನಾನು ಅಂತ ಚೈತ್ರಾ ಅದೇ ವೇಳೆ ಹೇಳಿದ್ದಾರೆ. ಆಗ ರಜತ್ ಎಲ್ಲ ಗಾಬರಿ ಬಿದ್ದು. ಯಾರು ಪಾಪದವರು? ಎಂದು ಪುಲ್ ಸರ್ಪ್ರೈಸ್ ಆಗಿದ್ದಾರೆ.