ನಟ ಅಕ್ಷಯ್ ಕುಮಾರ್, ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಸ್ಟಾರ್ ನಟ. ಆದರೆ ಇತ್ತೀಚೆಗೆ ಅಕ್ಷಯ್ ಕುಮಾರ್ ಬಗ್ಗೆ ಸುಳ್ಳು ಸುದ್ದಿಯೊಂದು ಹಬ್ಬಿತ್ತು. ಆ ಬಗ್ಗೆ ಸ್ವತಃ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬೇಸರದಿಂದಲೇ ಈ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಭೂಲ್ ಭುಲಯ್ಯ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಹೀರೋ ಆಗಿ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕಂಡಿತ್ತು. ಈ ಚಿತ್ರದ ಸೀಕ್ವೆಲ್ಗೆ ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ಅವರನ್ನು ಹಾಕಿಕೊಳ್ಳಲಾಯಿತು. ಹೀಗಾದಾಗ ಯಾರಿಗಾದರೂ ಬೇಸರ ಆಗಿಯೇ ಆಗುತ್ತದೆ. ಅಕ್ಷಯ್ ಕುಮಾರ್ ಅವರಿಗೂ ಈ ವಿಚಾರದಲ್ಲಿ ಬೇಸರ ಆಗಿದೆ ಎಂದು ಹೇಳಲಾಗುತ್ತಿದೆ. ಈಗ ಅಕ್ಷಯ್ ಕುಮಾರ್ ಬಗ್ಗೆ ಒಂದು ಫೇಕ್ ನ್ಯೂಸ್ ಹರಿದಾಡಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದ್ದಾರೆ.
ಭೂಲ್ ಭುಲಯ್ಯ 3’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿಸಿದ್ದ ವಿದ್ಯಾ ಬಾಲನ್ ಅವರು ಮರಳುತ್ತಿದ್ದಾರೆ. ಅದೇ ರೀತಿ ಅಕ್ಷಯ್ ಕುಮಾರ್ ಅವರ ಆಗಮನವೂ ಆಗಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಆ ರೀತಿ ಆಗಿಲ್ಲ. ಈ ವದಂತಿಗೆ ಅಕ್ಷಯ್ ಕುಮಾರ್ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಸಂದರ್ಶನ ಒಂದರಲ್ಲಿ ಅಕ್ಷಯ್ ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದಾರೆ ಎಂದು ವರದಿ ಆಗಿದೆಯಂತೆ. ‘ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅದು ಫೇಕ್ ನ್ಯೂಸ್’ ಎಂದು ಹೇಳಿದ್ದಾರೆ. ಒಮ್ಮೆ ಸರಣಿಯಿಂದ ತೆಗೆದು ಹಾಕಿದ ಬಳಿಕ ಮತ್ತೆ ಅದರಲ್ಲಿ ನಟಿಸೋದು ಸರಿ ಅಲ್ಲ ಅನ್ನೋದು ಅಕ್ಷಯ್ ಕುಮಾರ್ ಅವರ ಅಭಿಪ್ರಾಯ ಎನ್ನಲಾಗಿದೆ.
ಈ ಮೊದಲು ನಿರ್ದೇಶನ ಅನೀಸ್ ಬಾಜ್ಮೀ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸೋದಿಲ್ಲ. ಅವರ ಜೊತೆ ಕೆಲಸ ಮಾಡಬೇಕು ಎಂಬುದು ನನ್ನ ಆಸೆ’ ಎಂದಿದ್ದರು ಅವರು. ಈಗಾಗಲೇ ಅಕ್ಷಯ್ ಕುಮಾರ್ ಬಳಿ ಸಾಕಷ್ಟು ಸಿನಿಮಾಗಳು ಇವೆ. 10 ಸಿನಿಮಾಗಳ ಶೂಟ್ನಲ್ಲಿ ಅವರು ಬ್ಯುಸಿ ಇದ್ದಾರೆ. ಇದರ ಮಧ್ಯೆ ಹೊಸ ಸಿನಿಮಾ ಒಪ್ಪಿಕೊಳ್ಳಬೇಕು ಎಂದರೆ ಅದು ಕಷ್ಟ. ಹೀಗಾಗಿ ಅವರು ಈ ಸಿನಿಮಾ ಒಪ್ಪಿಕೊಳ್ಳಲು ನಟಿಸಿಲ್ಲ ಎಂದು ಹೇಳಲಾಗುತ್ತಿದೆ. ಅವರ ನಟನೆಯ ‘ಖೇಲ್ ಖೇಲ್ ಮೇ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.