ಸಿನಿಮಾದಲ್ಲಿ ನಟಿಸಬೇಕು. ನಟಿಯಾಗಿ ಮಿಂಚಬೇಕು, ಸಂಪಾದಿಸಬೇಕು ಎಂದು ಬಹಳಷ್ಟು ಜನರು ಆಸೆ ಪಡುತ್ತಾರೆ. ಒಮ್ಮೆಯಾದಾರೂ ಸರಿ ಒಂದು ಸಿನಿಮಾದಲ್ಲಿ ನಟಿಸಲೇ ಬೇಕು ಎಂದು ಸಾಕಷ್ಟು ಸರ್ಕಸ್ ಮಾಡುವ ಮಂದಿ ನಮ್ಮ ಮಧ್ಯೆ ಇದ್ದಾರೆ.
ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ. ಆನ್ ಲೈನ್ ಆ್ಯಡ್ ನೋಡಿ ಮೋಸ ಹೋದ ಯುವತಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೋಸ ಹೋಗಿದ್ದಾರೆ.
ಇಂಥವರನ್ನೇ ಗುರಿಯಾಗಿಸಿ ಬಹಳಷ್ಟು ವಂಚನೆ ಪ್ರಕರಣಗಳೂ ನಡೆಯುತ್ತವೆ. ಇವರ ಕನಸುಗಳನ್ನೇ ಬಂಡವಾಳ ಮಾಡಿ ಲಕ್ಷ ಲಕ್ಷ ರೂಪಾಯಿ ದೋಚಿ ಹೋಗುವವರು ಬಹಳಷ್ಟು ಜನ ಇದ್ದಾರೆ. ಇಂಥದ್ದೇ ಘಟನೆಯೊಂದು ಈಗ ನಡೆದಿದೆ.
ತಮಿಳಿನ ಹಂಟರ್ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿ ವಂಚಿಸಲಾಗಿದ್ದು ಸುರೇಶ್ ಕುಮಾರ್ ಎಂಬಾತನಿಂದ ಯುವತಿಗೆ ವಂಚಿಸಲಾಗಿದೆ. ಮಾಡೆಲ್ ನಂದಿನಿ ಶೆಟ್ಟಿ ಎಂಬಾಕೆಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ತನಗೆ ಆದ ವಂಚನೆ ಬಗ್ಗೆ ಯುವತಿ ದೂರು ನೀಡಿದ್ದಾರೆ. ಇನ್ಸ್ಟ್ರಾಗ್ರಾಂನಲ್ಲಿ ಹಂಟರ್ ಸಿನಿಮಾದ ಆ್ಯಡ್ ನೋಡಿದ್ದ ಯುವತಿ ಅದರಲ್ಲಿ ನಟಿಸುವ ಕನಸು ಕಂಡಿದ್ದಾರೆ. ನಂತರ ಅಲ್ಲಿದ್ದ ಕಾಂಟಾಕ್ಟ್ ನಂಬರ್ ಗೆ ಕರೆ ಮಾಡಿದ್ದಾರೆ.
ಚಿತ್ರದಲ್ಲಿ ಚಾನ್ಸ್ ಸಿಗುತ್ತೆ ಅದಕ್ಕೆ ಆರ್ಟಿಸ್ಟ್ ಕಾರ್ಡ್ ಮಾಡಿಸಬೇಕು ಎಂದು ಸುರೇಶ್ ಎನ್ನುವ ವ್ಯಕ್ತಿ ಹೇಳಿದ್ದರು. ಅದಕ್ಕಾಗಿ 12,500 ಹಣ ಕಳುಹಿಸಿದ್ದ ಯುವತಿ ಆ ನಂತರ ಅಗ್ರಿಮೆಂಟ್ ಸ್ಟ್ಯಾಂಪ್ ಡ್ಯೂಟಿ ಅಂತಾ 35 ಸಾವಿರ ಕಳುಹಿಸಿದ್ದಾರೆ.
ಬಳಿಕ ಶೂಟಿಂಗ್ ಗೆ ಮಲೇಷಿಯಾಗೆ ಹೋಗಬೇಕು. ನಿಮ್ಮ ತಂದೆಯ ಪಾಸ್ ಪೋರ್ಟ್ ಹಾಗು ನಿಮ್ಮ ಪಾಸ್ ಪೋರ್ಟ್ ವಿಮಾನ ಟಿಕೆಟ್ ಅಂತಾ 90 ಸಾವಿರ ಹಣ ಕಟ್ಟಿಸಿಕೊಂಡಿದ್ದ ಸುರೇಶ್ ಒಟ್ಟು ಸುಮಾರು 1.71 ಲಕ್ಷ ಹಣ ಪಡೆದು ವಂಚಿಸಿದ್ದಾರೆ.