ಚಿತ್ರದುರ್ಗ: ಪುಷ್ಪಕ್ ಖ್ಯಾತಿಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (RLV LEX-03) ಪ್ರಯೋಗವನ್ನು ಇಸ್ರೊ ಇಂದು ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.
ಅಲ್ಲದೇ ಇದು 3ನೇ ಮತ್ತು ಕೊನೆಯ ಪ್ರಾಯೋಗಿಕ ಉಡಾವಣೆಯೂ ಆಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದಲ್ಲಿರುವ ಇಸ್ರೋ ಸಂಸ್ಥೆಯ ಏರೋನಟಕಲ್ ಟೆಸ್ಟ್ ರೇಂಜ್ (ATR) ಇಸ್ರೋದ ‘ಪುಷ್ಪಕ’ಆರ್ಎಲ್ವಿ-ಎಲ್ಇಎಕ್ಸ್-3 ಆವರಣದ ರನ್ವೇನಲ್ಲಿ ಬೆಳಗ್ಗೆ 7:10 ಗಂಟೆ ವೇಳೆ ಪ್ರಯೋಗ ನಡೆಸಿದ್ದು, ಲ್ಯಾಂಡಿಂಗ್ ಯಶಸ್ವಿಯಾಗಿರುವುದಾಗಿ ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.