‘ಬಿಗ್ ಬಾಸ್’ ಕನ್ನಡ ಶೋಅನ್ನು ಬಹಳ ಅಚ್ಚುಕಟ್ಟಾಗಿ ಸತತ 11 ಸೀಸನ್ಗಳಿಂದ ನಡೆಸಿಕೊಂಡು ಬರುತ್ತಿರುವವರು ನಟ ಕಿಚ್ಚ ಸುದೀಪ್. ಕನ್ನಡ ಕಿರುತೆರೆಯಲ್ಲಿ ‘ಬಿಗ್ ಬಾಸ್’ ಶೋಗೆ ಮೆರುಗು ಸಿಕ್ಕಿದ್ದ ನಟ ‘ಕಿಚ್ಚ’ ಸುದೀಪ್ ಅವರಿಂದ ಎಂದರೆ, ತಪ್ಪಾಗಲಾರದು. ಬಿಗ್ ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಎಂಬಷ್ಟರ ಮಟ್ಟಿಗೆ ಈ ಶೋಗೆ ಅವರು ಹೊಂದಿಕೊಂಡಿದ್ದರು ಮತ್ತು ವೀಕ್ಷಕರು ಕೂಡ ಹಾಗೇ ಭಾವಿಸಿದ್ದರು.
ಆದರೆ ಇದೀಗ ಈ ಶೋಗೆ ಸುದೀಪ್ ಗುಡ್ ಬೈ ಹೇಳಿದ್ದಾರೆ. ಮುಂದಿನ 12ನೇ ಸೀಸನ್ನಿಂದ ಸುದೀಪ್ ನಿರೂಪಕರಾಗಿ ಕೆಲಸ ಮಾಡೋದಿಲ್ಲ ಅನ್ನೋದು ಖಚಿತವಾಗಿದೆ. ಸ್ವತಃ ಈ ವಿಚಾರವನ್ನು ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ವೀಕ್ಷಕರಿಗಂತೂ ಬೇಸರದ ಸಂಗತಿ. ಇದರ ಬೆನ್ನಲ್ಲೆ ಕಿಚ್ಚ ಸುದೀಪ್ ಅವರೇ ಈಗ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು ತಮ್ಮ ಕುರಿತು ಹಾಗೂ ಕಲರ್ಸ್ ಕುರಿತು ಬರುತ್ತಿರುವ ಆರೋಪಗಳಿಗೆ ತೆರೆ ಎಳೆದಿದ್ದಾರೆ.
ನನ್ನ ಒಂದು ಟ್ವೀಟ್ಗೆ ನೀವು ಸ್ಪಂದಿಸಿರುವ ರೀತಿಗೆ ಹಾಗೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ನಾನು ಮೆಚ್ಚುತ್ತೇನೆ. ಇದು ನನಗೆ ತುಂಬಾ ಸಂತಸವನ್ನುಂಟು ಮಾಡಿದೆ. ಆದರೆ ನನ್ನ ಹಾಗೂ ಚಾನೆಲ್ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೆ. ನಾವು ಒಂದು ದೀರ್ಘವಾದ ಹಾಗೂ ಧನಾತ್ಮಕ ಪ್ರಯಾಣವೊಂದನ್ನು ಮಾಡಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದರ ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ ಮತ್ತು ಮಾಹಿತಿ ಕೊರತೆಯಿಂದ ಕೂಡಿವೆ . ನನ್ನ ಒಂದು ಟ್ವೀಟ್ ಅತ್ಯಂತ ಪ್ರಾಮಾಣಿಕವಾಗಿದ್ದು. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿಂದ್ದಾರೆ. ಡೈರೆಕ್ಟರ್ ಪ್ರಕಾಶ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ವ್ಯಕ್ತಿ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಹೊಸ ವಿಷಯ ಏನಪ್ಪಾ ಅಂದ್ರೆ, ಸುದೀಪ್ ಮನವೊಲಿಸಲು ಕಲರ್ಸ್ ಕನ್ನಡ ಟೀಂ ಕಸರತ್ತನ್ನ ಮಾಡ್ತಿದೆಯಂತೆ, BBK12 ಸಾರಥ್ಯ ವಹಿಸ್ತಾರಾ ಕಿಚ್ಚ ಸುದೀಪ್ ಅನ್ನುವಂತ ಅನುಮಾನ ಕಾಡ್ತಿದೆ. ಸುದೀಪ್ ಈ ನಿರ್ಧಾರದಿಂದ ಟೀಂ ಟೆನ್ಷನ್ಗೆ ಒಳಗಾಗಿದೆ. ಬಿಗ್ಬಾಸ್ ಶೋ ಡೈರೆಕ್ಟರ್ ಪ್ರಕಾಶ್ ಅವರ ಮಾತಿಗೆ ಸುದೀಪ್ ಏನು ಪ್ರತಿಕ್ರಿಯೆ ನೀಡುತ್ತಾರೆ ಕಾದುನೋಡಬೇಕಿದೆ. ಈ ಎಲ್ಲ ಗೊಂದಲಗಳನ್ನ ಗಮನಿಸ್ತಾ ಇದ್ದರೆ ಮತ್ತೆ ಸುದೀಪ್ ಅವರು BBK12 ಸಾರಥ್ಯ ವಹಿಸ್ತಾರೆ ಎನ್ನುವಂತ ಭರವಸೆ ಮೂಡ್ತಾಯಿದೆ. ಇದರಿಂದ ಬಿಗ್ಬಾಸ್ ಅಭಿಮಾನಿಗಳು ಸುದೀಪ್ ಸರ್ ಅವರೇ ಇರಬೇಕು, ಅವರು ಇದ್ದರೇನೆ ಶೋ ಗೆ ಒಂದು ಕಳೆ ಅಂತ ಕಾಮೆಂಟ್ಸ್ ಮಾಡ್ತಿದ್ದಾರೆ. ಈ ಎಲ್ಲ ಪ್ರಶ್ನೆಗೆ ಬಾದ್ ಷಾ ಏನ್ ಉತ್ತರ ನೀಡ್ತಾರೆ ಕಾದುನೋಡಬೇಕಿದೆ.