‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರುವಾಗಿ ಎರಡು ವಾರಗಳು ಉರುಳಿವೆ. ಮೂರನೇ ವಾರ ಚಾಲ್ತಿಯಲ್ಲಿದೆ. ಅಷ್ಟು ಬೇಗ ಹೊಡೆದಾಟದಿಂದಾಗಿ ಒಬ್ಬರು ಸ್ಪರ್ಧಿ ‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಗಾಸಿಪ್ ಕಾಡ್ಗಿಚ್ಚಿನಂತೆ ಹಬ್ಬಿದೆ.! ‘ಬಿಗ್ ಬಾಸ್’ ಮನೆಯಿಂದ ಜಗದೀಶ್, ನಟ ರಂಜಿತ್ ಹೊರಬಿದ್ದಿದ್ದಾರಂತೆ. ‘ಬಿಗ್ ಬಾಸ್’ ಮನೆಯಲ್ಲಿ ಹೊಡೆದಾಟ ನಡೆದಿದ್ದು, ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ಯಂತೆ. ಇದರ ಪರಿಣಾಮವಾಗಿ, ಲಾಯರ್ ಜಗದೀಶ್ ಮತ್ತು ಸೀರಿಯಲ್ ನಟ ರಂಜಿತ್ ಮನೆಯಲ್ಲಿ ಮಾತಿನ ಚಕಮಕಿ ನಡೆಸಿ ಹೊಡೆದಾಡಿಕೊಂಡಿದ್ದಾರೆ. ಬಿಗ್ ಬಾಸ್ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆ ಇಬ್ಬರನ್ನು ಮನೆಯಿಂದ ಹೊರ ಕಳುಹಿಸಲಾಗಿದೆ. ಎಂದು ವರದಿ ಹರಿದಾಡಿದೆ. ಈ ಫೈಟ್ನಿಂದ ದೊಡ್ಮನೆ ಪ್ರಕ್ಷುಬ್ದವಾಗಿದೆ ಎಂದು ಹೇಳಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
‘ಬಿಗ್ ಬಾಸ್’ನಲ್ಲಿ ವಾತಾವರಣ ಹದಗೆಟ್ಟಿದೆ. ಅಕ್ಟೋಬರ್ 17ರ ಎಪಿಸೋಡ್ನಲ್ಲಿ ಎಲ್ಲರೂ ಜಗದೀಶ್ ವಿರುದ್ಧ ಒಂದಾಗಿದ್ದರು. ಇದರಿಂದ ಸಿಡುಕುತ್ತಿದ್ದ ಜಗದೀಶ್ ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡುತ್ತಿದ್ದರು. ಇನ್ನು, ರಂಜಿತ್ ಅವರು ‘ಹೀಗೆ ಮುಂದುವರಿದರೆ ಜಗದೀಶ್ ಅವರ ಎದಮೇಲೆ ಕಾಲಿಟ್ಟು ಹೋಗೋದು’ ಎಂದು ಎಚ್ಚರಿಕೆ ನೀಡಿದ್ದರು. ಈಗ ಹಾಗೆಯೇ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ.
ಬಿಗ್ ಬಾಸ್ ನಿಯಮದ ಪ್ರಕಾರ ಮನೆಯೊಳಕ್ಕೆ ಸ್ಪರ್ಧಿಗಳು ದೈಹಿಕವಾಗಿ ನಲ್ಲೆ ನಡೆಸುವಂತಿಲ್ಲ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಕೆಲವು ಸ್ಪರ್ಧಿಗಳು ದೈಹಿಕ ಹಲ್ಲೆ ನಡೆಸಿದ ಉದಾಹರಣೆಗಳಿವೆ. ಈ ಹಿಂದೆ ಹುಚ್ಚಾ ವೆಂಕಟ್ ಸೀಸನ್ 8ರಲ್ಲಿ ರವಿ ಮುರೂರು ಎಂಬ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ್ದರು. ಹುಚ್ಚಾ ವೆಂಕಟ್ ವರ್ತನೆ ಕಂಡು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿದ್ದರು. ಕಿರಿಕ್ ಪಾರ್ಟಿ, ಸಂಯುಕ್ತಾ ಹೆಗಡೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಕ್ಕೆ ಹೋಗಿ ನಟಿ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಹೊರಬಂದಿದ್ದರು. ಆದರೀಗ ಜಗದೀಶ್ ಮತ್ತು ರಂಜಿತ್ ಹೊಡೆದಾಡಿಕೊಂಡಿದ್ದು, ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಬಿಗ್ ಬಾಸ್ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.