ಶುಕ್ರವಾರ ಲಂಡನ್ನ ದಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತ್ಯವಾಗಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 114 ರನ್ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದ ಮೂಲಕ ಜೇಮ್ಸ್ ಆಂಡರ್ಸನ್ ಅವರು 21 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಯಿತು. ಈ ಪಂದ್ಯದ ಗೆಲುವಿನ ಮೂಲಕ ಎರಡೂ ತಂಡಗಳ ನಾಯಕರುವ ಇಂಗ್ಲೆಂಡ್ ದಿಗ್ಗಜನಿಗೆ ವಿಶೇಷ ಗೌರವವನ್ನು ಅರ್ಪಿಸಿದರು.
ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಜೇಮ್ಸ್ ಆಂಡರ್ಸನ್ ಅವರು ನಾಲ್ಕು ವಿಕೆಟ್ಗಳನ್ನು ಪಡೆದಿದ್ದರು. ಐದು ವಿಕೆಟ್ ಪಡೆಯುವ ಸಲುವಾಗಿ ಕೊನೆಯ ಎಸೆತದಲ್ಲಿ ಆಂಡರ್ಸನ್ ಅವರು ಪ್ರಯತ್ನ ನಡೆಸಿದ್ದರು. ಆದರೆ, ಇದು ಸಾಧ್ಯವಾಗಲಿಲ್ಲ. 44ನೇ ಓವರ್ನಲ್ಲಿ ಕಾಟ್ ಅಫ್ ಬೌಲ್ಡ್ ಅವಕಾಶವನ್ನು ಜೇಮ್ಸ್ ಆಂಡರ್ಸನ್ ಕಳೆದುಕೊಂಡರು.
ಜೇಮ್ಸ್ ಆಂಡರ್ಸನ್ ಅವರು 188 ಟೆಸ್ಟ್ ಪಂದ್ಯಗಳಿಂದ 26.45ರ ಸರಾಸರಿ ಮತ್ತು 56.8ರ ಸ್ಟ್ರೈಕ್ ರೇಟ್ ಹಾಗೂ 2.79ರ ಎಕಾನಮಿ ರೇಟ್ನಲ್ಲಿ 704 ವಿಕೆಟ್ಗಳನ್ನು ಕಬಳಿಸಿದ್ದಾರೆ. 42ಕ್ಕೆ 7 ಇವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿದೆ.
188 ಟೆಸ್ಟ್ ಪಂದ್ಯಗಳನ್ನು ಆಡಿರುವ ಜೇಮ್ಸ್ ಆಂಡರ್ಸನ್ ಅವರು 704 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 32 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಸಾಧನೆ ಮಾಡಿದ ಆರನೇ ಬೌಲರ್ ಆಗಿ ಆಂಡರ್ಸನ್ ಗುರುತಿಸಿಕೊಂಡಿದ್ದಾರೆ. ಜೇಮ್ಸ್ ಆಂಡರ್ಸನ್ ಅವರು 188 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆ ಮೂಲಕ ಸಚಿನ್ ತೆಂಡೂಲ್ಕರ್ ಬಳಿಕ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಎರಡನೇ ಆಟಗಾರರಾಗಿದ್ದಾರೆ.
ವಿಕೆಟ್ ಕೀಪರ್ ಪಡೆದ ಕ್ಯಾಚ್ಗಳ ಮೂಲಕ ಜೇಮ್ಸ್ ಆಂಡರ್ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಹೊಂದಿದ್ದಾರೆ. ಸಕ್ರಿಯ ಆಟಗಾರರ ಯಾವುದೇ ಬೌಲರ್ 200ಕ್ಕಿಂತ ಹೆಚ್ಚು ವಿಕೆಟ್ ಕೀಪರ್ ಕ್ಯಾಚ್ಗಳನ್ನು ಹೊಂದಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಇವರು ಒಟ್ಟಾರೆಯಾಗಿ 467 ವಿಕೆಟ್ ಕೀಪರ್ ಕ್ಯಾಚ್ಗಳಿಂದ ವಿಕೆಟ್ಗಳನ್ನು ಆಂಡರ್ಸನ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಬೌಲ್ಡ್ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.