ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 4 ತಿಂಗಳಿಂದ ಜೈಲುಪಾಲಾಗಿದ್ದ ನಟ ದರ್ಶನ್ ಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ದರ್ಶನ್. ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ದರ್ಶನ್ ಅವರ ಆರೋಗ್ಯದ ವಿಚಾರ ಮುಂದಿಟ್ಟುಕೊಂಡು ಪ್ರಬಲ ವಾದ ಮಂಡಿಸಿದ್ದರು. ವಾದ ವಿವಾದಗಳನ್ನ ಆಲಿಸಿದ ಹೈಕೋರ್ಟ್ ಮಧ್ಯಂತರ ಆದೇಶವನ್ನ ಇಂದಿಗೆ ಕಾಯ್ದಿರಿಸಿತ್ತು. ಇದೀಗ ದರ್ಶನ್ ಗೆ ಬೇಲ್ ಮಂಜೂರು ಮಾಡಿದೆ ಕರ್ನಾಟಕ ಹೈಕೋರ್ಟ್.
ಇದನ್ನು ಓದಿ: ದರ್ಶನ್ ಗೆ ಬೇಲ್; ಕೊನೆಗೂ ಸಿಕ್ತು ಬಿಡುಗಡೆಯ ಭಾಗ್ಯ..!
ಕೊಲೆ ಆರೋಪಿ ದರ್ಶನ್ ಗೆ ಅವರ ಆರೋಗ್ಯ ಸಮಸ್ಯೆಯೇ ವರದಾನ ಆಗಿದೆ , ಅವರ ಅನಾರೋಗ್ಯದ ಆಧಾರದ ಮೇಲೆಯೇ ದರ್ಶನ್ ಗೆ ಜಾಮೀನು ಸಿಕ್ಕಿದೆ. ದರ್ಶನ್ ಬಗ್ಗೆ ಮೆಡಿಕಲ್ ರಿಪೋರ್ಟ್ ನೀಡಿದ್ದ ವೈದ್ಯರು ಆ ರಿಪೋರ್ಟ್ನಲ್ಲಿ ಆರೋಪಿ ದರ್ಶನ್ ಗೆ ತೀವ್ರ ಬೆನ್ನು ನೋವು ಹಾಗೂ ಕಿಡ್ನಿ ಸಮಸ್ಯೆ, ನಂಬ್ನೆಸ್ ಸಮಸ್ಯೆ ಇದ್ದದ್ದರಿಂದ ಹೀಗೆ ಬಿಟ್ಟರೆ ಸ್ಟ್ರೋಕ್ ಆಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಆ ವೈದ್ಯರ ರಿಪೋರ್ಟ್ಅನ್ನು ಜೈಲಾಧಿಕಾರಿಗಳು ಹೈಕೋರ್ಟ್ ಗೆ ಸಲ್ಲಿಸಿದ್ದರು. ಈ ಕಾರಣದಿಂದ ನಿನ್ನೆ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ಹೈ ಕೋರ್ಟ್ ಕೊನೆಗೂ ದರ್ಶನ್ ಗೆ ಜಾಮೀನು ಮಂಜೂರು ಮಾಡಿದೆ.