ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿ 3 ತಿಂಗಳುಗಳೇ ಕಳೆದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾವಾಗ ರಿಲೀಸ್ ಆಗ್ತಾರೆ. ದಾಸನಿಗೆ ಬಿಡುಗಡೆಯ ಬಾಗಿಲು ಯಾವಾಗ ತೆರೆಯುತ್ತೆ ಅನ್ನೋದು ಕಾಯುತ್ತಿದ್ದಾರೆ. ಫ್ಯಾನ್ಸ್ಗಳ ಒದ್ದಾಟ ಒಂದು ಕಡೆಯಾದ್ರೆ ಸ್ಯಾಂಡಲ್ವುಡ್ಗೂ ದರ್ಶನ್ ಅರೆಸ್ಟ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರು ನಟ ದರ್ಶನ್ ಅರೆಸ್ಟ್ ಆದ ಬಳಿಕ ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಮೌನ ಮುರಿದಿರುವ ಉಪೇಂದ್ರ ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ ಸ್ಟಾರ್ ಆಗಿ ನಟ ದರ್ಶನ್ ಅರೆಸ್ಟ್ ಬಗ್ಗೆ ನಟ ಉಪೇಂದ್ರ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಖಂಡಿತವಾಗಿ ಈ ಪ್ರಕರಣದಿಂದ ಎಲ್ಲರಿಗೂ ನೋವಾಗಿದೆ. ಸದ್ಯದಲ್ಲೇ ತೀರ್ಪು ಬರುತ್ತೆ ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.
ಏನಂದ್ರೆ ಎಲ್ಲರಿಗೂ ನೋವಾಗಿದೆ. ಒಂದು ಅಂತು ಸತ್ಯ. ಇಂಡಸ್ಟ್ರಿಯಲ್ಲಿ ಇರುವವರಿಗೂ ನೋವಾಗಿದೆ. ಯಾಕಂದ್ರೆ ನಾವೆಲ್ಲಾ ಒಂದೇ ಫ್ಯಾಮಿಲಿ. ಯಾರದೇ ತಪ್ಪಾಗಲಿ, ಸರಿಯಾಗಲಿ ನೋವಂತೂ ಎಲ್ಲರಿಗೂ ಆಗುತ್ತೆ. ಜನಗಳಿಗೂ ಅದೇ ಭಾವನೆ ಇದೆ.