- ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ -1ರ ಮೇಲ್ಛಾವಣಿ ಕುಸಿತ
- ಈ ಅಪಘಾತದಲ್ಲಿ 6 ಮಂದಿಗೆ ಗಂಭೀರ ಗಾಯ
ದೆಹಲಿಯ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಮಳೆಯ ಅಬ್ಬರಕ್ಕೆ ದೆಹಲಿ – ನೋಯ್ಡಾ ಸೇರಿದಂತೆ ಹಲವು ಪ್ರದೇಶಗಳು ಸಂಪೂರ್ಣವಾಗಿ ಮುಳುಗಿ ಹೋಗಿವೆ. ಈ ವೇಳೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -1ರ ಮೇಲ್ಛಾವಣಿ ಕೂಡ ಕುಸಿದಿದೆ. ಹಲವು ವಾಹನಗಳು ಇದರಿಂದ ಜಲಾವೃತಗೊಂಡಿವೆ. ಇದರಿಂದ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ. ಇದುವರೆಗೆ ಒಟ್ಟು 28 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ನ ಛಾವಣಿಯು ಏಕಾಏಕಿ ವಾಹನಗಳ ಮೇಲೆ ಬಿದ್ದಿದೆ. ಕಾರಿನಲ್ಲಿ ಕುಳಿತಿದ್ದವರಿಗೂ ಗಾಯಳಾಗಿದ್ದು, ಕಷ್ಟಪಟ್ಟು ಅವರನ್ನು ರಕ್ಷಿಸಲಾಗಿದೆ. ಈ ಅಪಘಾತದಲ್ಲಿ 6 ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಿಂದಾಗಿ, ಟರ್ಮಿನಲ್ 1 ರಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಭದ್ರತಾ ಕಾರಣಗಳಿಗಾಗಿ ಚೆಕ್-ಇನ್ ಕೌಂಟರ್ಗಳನ್ನು ಮುಚ್ಚಲಾಗಿದೆ.