ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗಿದ್ದು ಇಂದಿನಿಂದ ಸಾರ್ವಜನಿಕರು ದೇವಿಯ ದರ್ಶನ ಪಡೆಯಬಹುದಾಗಿದೆ. ಮೈಸೂರು ಸಂಸ್ಥಾನದ ಪ್ರಮೋದಾ ದೇವಿ ಒಡೆಯರ್ ಅವರು ಕೂಡ ಹಾಸನಾಂಬೆಯ ದರ್ಶನ ಪಡೆದುಕೊಂಡಿದ್ದಾರೆ. ಇಂದು ಬೆಳಗ್ಗೆ 4 ಗಂಟೆಯೇ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನ ಪ್ರಾರಂಭವಾಗಿದೆ. ಇಂದಿನಿಂದ 10 ದಿನಗಳವರೆಗೆ ಅಂದರೆ ನವೆಂಬರ್ 3ರ ವರೆಗೆ ಭಕ್ತರು ದೇವಿಯ ದರ್ಶನ ಪಡೆದುಕೊಳ್ಳಬಹುದಾಗಿದೆ. ಇನ್ನು ಇಂದು ದೇವಿಯ ದರ್ಶನ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಭಕ್ತರು ರಾತ್ರಿಯಿಂದಲೇ ಭಾರೀ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಬೆಳಗ್ಗೆ 4 ಗಂಟೆಯಿಂದ ದರ್ಶನ ಆರಂಭವಾದ ಹಿನ್ನೆಲೆಯಲ್ಲಿ ಹಲವು ಭಕ್ತರು ದೇವಿಯನ್ನು ಕಂಡು ಪುನೀತರಾದರು. ರಾತ್ರಿ 11 ಗಂಟೆವರೆಗೆ ದೇವಿಯ ದರ್ಶನ ಇರುತ್ತದೆ.
ಇದನ್ನು ಓದಿ: ಅಮರನ್ ಸಿನಿಮಾ ಟ್ರೈಲರ್ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀವ್ಸ್ !
ಹಾಸನಾಂಬೆ ದೇವಸ್ಥಾನದ ಗರ್ಭಗುಡಿ ಬಾಗಿಲು ವರ್ಷದಲ್ಲಿ 1 ಸಲ ಮಾತ್ರ ತೆರೆಯುವುದು ಮೊದಲಿನಿಂದ ಬಂದ ವಿಶಿಷ್ಟ ಸಂಪ್ರದಾಯ. ಪ್ರತಿ ವರ್ಷ ಅಶ್ವಯುಜ ಮಾಸದ ಅಷ್ಟಮಿ ದಿನ ಬಾಗಿಲನ್ನ ಸ್ವಾಮೀಜಿಗಳು ಹಾಗೂ ಕೆಲವು ಹಿರಿಯರು ಸೇರಿ ಓಪನ್ ಮಾಡುತ್ತಾರೆ. ಯಾವಾಗಲೂ ಸಾಮಾನ್ಯವಾಗಿ ಇದು ದೀಪಾವಳಿ ಹಬ್ಬದ ಸಮಯದಲ್ಲಿ ಬರುತ್ತದೆ. ಪ್ರತಿ ವರ್ಷದಂತೆ ಈ ವರ್ಷನೂ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ಅಕ್ಟೋಬರ್ 24 ರಿಂದ ನವೆಂಬರ್ 3 ರವರೆಗೆ ದೇವಾಲಯದ ಬಾಗಿಲು ಭಕ್ತರಿಗಾಗಿ ತೆರೆದಿಡಲಾಗುತ್ತದೆ. ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್ ಅವರು ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಬಳಿಕ ದೇವಿಗೆ ನಮಸ್ಕಾರ ಮಾಡಿದರು. ಪ್ರಮೋದಾ ದೇವಿ ಅವರು ಕಾಣಿಸಿಕೊಳ್ಳುತ್ತಿದ್ದಂತೆ ಜನರು ಫೋಟೋ ಕ್ಲಿಕ್ ಮಾಡಿಕೊಂಡರು.