ಬಿಗ್ಬಾಸ್ ಕನ್ನಡ 11ರ ಕ್ಯಾಪ್ಟನ್ ಆಯ್ಕೆ ಮಾಡಲಾಗಿದೆ. 40 ನೇ ದಿನ ತ್ರಿವಿಕ್ರಮ್ ಅವರನ್ನು ಮನೆಯ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ. ಮನೆಯ ಕ್ಯಾಪ್ಟನ್ ಆಗಲು ಬಿಗ್ಬಾಸ್ ಇಬ್ಬರ ಫೋಟೋಗಳನ್ನು ಇಟ್ಟು ಮಸಿ ಬಳಿಯುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಮಂಜು, ಗೌತಮಿ ಹೆಚ್ಚು ಬಾರಿ ಕಪ್ಪು ಬಣ್ಣದ ಬಾಟಲ್ ಪಡೆದು ಭವ್ಯಾ ಅವರನ್ನೇ ಟಾರ್ಗೆಟ್ ಮಾಡಿ ಬಣ್ಣ ಬಳಿದರು. ಮನೆಯ ಯಾವೊಬ್ಬ ಸದಸ್ಯನೂ ತ್ರಿವಿಕ್ರಮ್ ಫೋಟೋದ ಮೇಲೆ ಕಪ್ಪು ಬಣ್ಣ ಬಳಿಯದೇ ಭವ್ಯಾ ಅವರನ್ನೆ ಟಾರ್ಗೆಟ್ ಮಾಡಿದರು.
ಮನೆಯ ಉತ್ತಮ ಮತ್ತು ಕಳಪೆ ಆಯ್ಕೆಯಲ್ಲಿ ಈ ವಾರದ ಭವ್ಯಾ ಅವರಿಗೆ 6 ಓಟುಗಳು ಲಭಿಸಿತು. ಜೊತೆಗೆ ಭವ್ಯಾ ಅವರು ಮನೆಯ ಉತ್ತಮ ಎನಿಸಿಕೊಂಡರು. ಮಿಕ್ಕಂತೆ ಮಂಜು, ಗೌತಮಿ, ಧರ್ಮ ಉತ್ತಮ ಓಟು ಪಡೆದರು. ಇನ್ನು ಮನೆಯಲ್ಲಿನ ಈ ವಾರದ ಕಳಪೆ ಸುರೇಶ್ ಮತ್ತು ಧನರಾಜ್ ಅವರಿಗೆ ಲಭಿಸಿ ಜೈಲು ಸೇರಿದರು. ಕಳಪೆಗೆ ರೀಸನ್ ಕೊಡುವಾಗ ಸುರೇಶ್ ಮತ್ತು ಧನ್ರಾಜ್ ಅವರಿಗೆ ಮನೆ ಮಂದಿ ನೀಡಿದ ಕಾರಣ ವೀಕ್ಷಕರಿಗೂ ಹಿಡಿಸಲಿಲ್ಲ. ಯಾಕೆಂದರೆ ಮನೆಯಲ್ಲಿ ಅತ್ಯಂತ ಕಳಪೆ ಅವರಿಬ್ಬರೇ ಅಲ್ಲ. ಸ್ಪರ್ಧಿಗಳಿಗೆ ಕಾರಣ ಕೊಡಲು ಗೊತ್ತಿಲ್ಲ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: ‘ನಾನು ಉತ್ತಮ’ ಜೈಲಿನ ಗೋಡೆ ಮೇಲೆ ಕೆತ್ತಿದ ಧನ್ರಾಜ್!
ಕಳಪೆಗೆ ಕಾರಣ ಕೊಟ್ಟಾಗ ಧನರಾಜ್ಈ ಬಾರಿ ಕೂಡ ಮನೆಯವರ ಬಾಯಿಗೆ ಆಹಾರವಾದರು. ಕಳಪೆಗೆ ಕೊಟ್ಟ ಕಾರಣಕ್ಕೆ ಸರಿಯಾಗಿ ತಿರುಗೇಟು ಕೊಡಲು ವಿಫಲವಾಗಿ ಬೇಸರ ಮಾಡಿಕೊಂಡರು. ಹೌದು ನಾನು ವಾದ ಮಾಡಿ ನನ್ನನ್ನು ಡಿಫೆಂಡ್ ಮಾಡಿಕೊಂಡಿಲ್ಲ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ ಧನು, ನಾನು ಜಾಯಿಂಟ್ ಫ್ಯಾಮಿಲಿಯಲ್ಲಿ ಬೆಳೆದವನು. ಹಾಗಾಗಿ ನನಗೆ ಈ ರೀತಿ ಮಾತನಾಡಲು ಮನಸ್ಸು ಬರಲ್ಲ. ಹೆಣ್ಣು ಮಕ್ಕಳ ವಿರದ್ಧ ಮಾತನಾಡಿ ನನಗೆ ಗೊತ್ತಿಲ್ಲ ಎಂದರು.
ಇನ್ನು ಕಳಪೆ ಪಡೆದು ಜೈಲಿಗೆ ಹೋದ ಸುರೇಶ್ ಮತ್ತು ಧನ್ರಾಜ್ ಇಬ್ಬರೂ ಬೇಸರ ಮಾಡಿಕೊಂಡರು. ಜೊತೆಯಲ್ಲಿದ್ದವರು ಮಿತ್ರ ದ್ರೋಹಿಗಳು ಆದಾಗ ಏನೇನೋ ಆಗುತ್ತೆ ಎಂದು ಸುರೇಶ್ ಜೈಲಿಗೆ ಹೋಗುವಾಗ ಮಾತನಾಡಿದರು. ನಾವು ಅಂತಹ ತಪ್ಪು ಏನು ಮಾಡಿದೆವು ಎಂದು ಚರ್ಚಿಸಿದರು. ಕೊನೆಗೆ ರಾತ್ರಿ ನಿದ್ದೆ ಬರದ ಧನು ಸುರೇಶ್ ಮಲಗಿದ ಬಳಿಕ ಎಚ್ಚರವೇ ಇದ್ದು, ಗೋಡೆಯಲ್ಲಿ ನಾನು ಉತ್ತಮ ಎಂದು ಗೋಡೆಯ ಮೇಲೆ ಕೆತ್ತಿದರು.