ಐಪಿಎಲ್ ಹತ್ತಿರವಾದ್ರೆ ಸಾಕು.. ಇದೇನಾ ಧೋನಿ ಆಡೋ ಕೊನೆ ಸೀಸನ್..? ಅನ್ನೋ ಪ್ರಶ್ನೆ ಸಖತ್ ಸೌಂಡ್ ಮಾಡುತ್ತೆ. ಈ ಬಾರಿಯ ಐಪಿಎಲ್ಗೂ ಮುನ್ನವೇ ಧೋನಿಯ ರಿಟೈರ್ಮೆಂಟ್ ಸುದ್ದಿ ಸದ್ದು ಮಾಡ್ತಿದೆ. ಬಿಗ್ಬಾಸ್ಗಳ ಆ ಒಂದು ನಿರ್ಣಯದ ಜೊತೆ ಫ್ರಾಂಚೈಸಿಯೇ ಬೋಲ್ಡ್ ಡಿಸಿಷನ್ ತೆಗೆದುಕೊಳ್ಳುತ್ತಾ ಎಂಬ ಚಿಂತೆ ಕಾಡ್ತಿದೆ.
ಸೀಸನ್-18ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ ಶುರುವಾಗಿದೆ. ಇದಕ್ಕೂ ಮುನ್ನ ಫ್ರಾಂಚೈಸಿಗಳು, ಮೆಗಾ ಆಕ್ಷನ್ನಲ್ಲಿ ಬಲಿಷ್ಠ ತಂಡಗಳನ್ನ ಕಟ್ಟುವ ಲೆಕ್ಕಚಾರದಲ್ಲೇ ಬ್ಯುಸಿಯಾಗಿದೆ. ಯಾವ ತಂಡ ಯಾರನ್ನ ರಿಲೀಸ್ ಮಾಡುತ್ತೆ. ರಿಟೈನ್ ಮಾಡುತ್ತೆ ಅನ್ನೋ ಕ್ಯೂರಿಯಾಸಿಟಿಯೂ ಫ್ಯಾನ್ಸ್ ಮನದಲ್ಲಿ ಮನೆ ಮಾಡಿದೆ. ಇದೆಲ್ಲಕ್ಕಿಂತ ಮೋಸ್ಟ್ ಡಿಬೇಟಬಲ್ ಆ್ಯಂಡ್ ಹಾಟ್ ಟಾಪಿಕ್ ವಿಚಾರ ಎಮ್.ಎಸ್.ಧೋನಿಯ ರಿಟೈನ್ ವಿಚಾರ.
ಪ್ರತಿ ಸೀಸನ್ ಶುರುವಾದಾಗಲೂ ಧೋನಿ, ಆಡ್ತಾರಾ? ಇಲ್ವಾ? ಎಂಬ ಸುದ್ದಿ ಸದ್ದು ಮಾಡುತ್ತೆ. ಈ ಸಲ ಐಪಿಎಲ್ ಅರಂಭಕ್ಕೂ ಮುನ್ನವೇ ಧೋನಿ ತಂಡದಲ್ಲಿ ಉಳೀತಾರಾ? ಇಲ್ಲವಾ ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಇದಕ್ಕೆಲ್ಲಾ ಕಾರಣ ಮುಂಬರೋ ಮೆಗಾ ಹರಾಜಿನ ನ್ಯೂ ರೂಲ್ಸ್ ಪಾಲಿಸಿ.
ಎಮ್.ಎಸ್.ಧೋನಿ ಫ್ಯಾನ್ಸ್ಗೆ ಶುರುವಾಯ್ತು ಢವ ಢವ
ಅಕ್ಟೋಬರ್ನಲ್ಲೇ ಬಿಸಿಸಿಐ, ಐಪಿಎಲ್ನ ರಿಟೈನ್ ಪಾಲಿಸಿ ಜಾರಿ ಮಾಡಬೇಕಿತ್ತು. ಫ್ರಾಂಚೈಸಿಗಳ ಮನವಿಯನ್ನ ಗಂಭೀರವಾಗಿ ಪರಿಗಣಿಸುವ ಬಿಗ್ಬಾಸ್ಗಳು ಇದೇ ತಿಂಗಳಾಂತ್ಯಕ್ಕೆ ಮುಂದೂಡಿದೆ. ಇದರೊಂದಿಗೆ ಧೋನಿ, ರಿಟೈನ್ ಭವಿಷ್ಯ ಏನಾಗುತ್ತೆ ಅನ್ನೋ ಟೆನ್ಶನ್. ಫ್ಯಾನ್ಸ್ಗೆ ಇನ್ನಿಲ್ಲದೇ ಕಾಡ್ತಿದೆ. ಇದಕ್ಕೆ ಕಾರಣ ಚೆನ್ನೈ ನಿರ್ಧಾರ ಏನಾಗಿರುತ್ತೆ ಅನ್ನೋದೇ ಆಗಿದೆ. ಡಿಸೆಂಬರ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಇದಕ್ಕಾಗಿ ಭವಿಷ್ಯದ ತಂಡವನ್ನು ಕಟ್ಟುವ ಲೆಕ್ಕಚಾರವೂ ಚೆನ್ನೈ ಮುಂದಿದೆ. ಇದೇ ಕಾರಣಕ್ಕೆ ಋತುರಾಜ್, ಜಡೇಜಾ ಫಸ್ಟ್ ಚಾಯ್ಸ್ ರಿಟೈನ್ ಆಗಿದ್ದಾರೆ. ಚಾಂಪಿಯನ್ ಕ್ಯಾಪ್ಟನ್ ಧೋನಿ ವಿಚಾರದಲ್ಲಿ ಮಾತ್ರ, ಇನ್ನು ಕಾದುನೋಡುವ ತಂತ್ರಕ್ಕೆ ಅನುಸರಿಸುತ್ತಿದೆ ಅನ್ನೋದು ಮೂಲಗಳ ಮಾಹಿತಿ. ಹೀಗಾಗಿ ಚೆನ್ನೈ ಬೋಲ್ಡ್ ಡಿಸಿಷನ್ ತೆಗೆದುಕೊಳ್ಳುತ್ತಾ ಎಂಬ ಅನುಮಾನ ಇದ್ದೇ ಇದೆ.
ಸಿಎಸ್ಕೆಗೆ ಧೋನಿ ಮುಖ್ಯನಾ? ತಂಡ ಮುಖ್ಯನಾ?
ಚೆನ್ನೈ ಸೂಪರ್ ಕಿಂಗ್ಸ್ಗೆ ಧೋನಿಯೇ ಪ್ರಮುಖ ಆದ್ಯತೆಯಾಗಿದ್ದಾರೆ. ಧೋನಿ ಅಂದ್ರೆನೇ ಚೆನ್ನೈ.. ಚೆನ್ನೈ ಅಂದ್ರೆನೇ ಧೋನಿ.. ಹೀಗಾಗಿ ಚೆನ್ನೈನ ಫಸ್ಟ್ ಪ್ರಿಪರೆನ್ಸ್ ಧೋನಿಯನ್ನ ಉಳಿಸಿಕೊಳ್ಳುವುದಾಗಿದೆ. ಹೀಗಾಗಿ ಅನ್ಕ್ಯಾಪ್ಡ್ ರೂಲ್ ಮರು ಜಾರಿಗೆ ಪಟ್ಟು ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್, ಶತಾಯ ಗತಾಯ ಧೋನಿಯನ್ನ ಉಳಿಸಿಕೊಳ್ಳಲು ಮುಂದಾಗಿದೆ. ಚೆನ್ನೈ ಫ್ರಾಂಚೈಸಿಯ ಮನವಿಯನ್ನ ಬಿಸಿಸಿಐ ಕೂಡ ಗಂಭೀರವಾಗೇ ಪರಿಗಣಿಸುತ್ತಿದೆ ಎನ್ನಲಾಗ್ತಿದೆ. ಧೋನಿ ಆಟಗಾರನಾಗಿ ಮತ್ತೊಂದು ವರ್ಷ ಆಡೋದ್ರಿಂದ ಫ್ರಾಂಚೈಸಿಗೆ ಮಾತ್ರವಲ್ಲ ಒಟ್ಟಾರೆ ಐಪಿಎಲ್ಗೂ ಲಾಭವಾಗುತ್ತೆ.
ಕೋರ್ಟ್ನಲ್ಲಿದೆ ಧೋನಿ ಐಪಿಎಲ್ ಭವಿಷ್ಯ
ಧೋನಿ ಮುಂದಿನ ಐಪಿಎಲ್ನಲ್ಲಿ ಆಡ್ತಾರೋ, ಇಲ್ವೋ ಅನ್ನೋದು ಬಿಸಿಸಿಐ ಅಂಗಳದಲ್ಲಿದೆ. ಅತಿ ಶೀಘ್ರದಲ್ಲೇ ಬಿಸಿಸಿಐ ರಿಟೈನ್, ರಿಲೀಸ್ ನಿಯಮವಳಿ ಜಾರಿಗೆ ತರಲಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಘೋಷಿಸುವ ಲೆಕ್ಕಚಾರದಲ್ಲಿದೆ. ಇದೇ ರೂಲ್ಸ್ಗಾಗಿಯೇ ಸಿಎಸ್ಕೆ ಫ್ರಾಂಚೈಸಿ ಕಾಯ್ತಿದೆ. ಹೀಗಾಗಿ ರಿಟೇನ್ ಹೆಚ್ಚಳ ಹಾಗೂ ಅನ್ಕ್ಯಾಪ್ಡ್ ಪ್ಲೇಯರ್ ರೂಲ್ಸ್ ಅನುಗುಣವಾಗಿಯೇ ಧೋನಿ ಭವಿಷ್ಯ ಸುಗಮವಾಗಿದೆ. ಇಲ್ಲ ಧೋನಿ ಅಂತತ್ರಕ್ಕೆ ಸಿಲುಕೋದು ಗ್ಯಾರಂಟಿ. ಆದ್ರೆ, ಧೋನಿ ಬಗ್ಗೆ ಒಲವು ಹೊಂದಿರುವ ಬಿಸಿಸಿಐ, ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಕಾದುನೋಡಬೇಕಿದೆ.