ನಟ ಕಿಚ್ಚ ಸುದೀಪ್ ಅವರ ತಾಯಿ ನಿಧನರಾಗಿದ್ದಾರೆ. ನಟನಿಗೆ ಮಾತೃ ವಿಯೋಗದ ನೋವು ಬಂದಿದೆ. ನಟನ ತಾಯಿ ಸರೋಜಾ ಅವರು 86ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಕಿಚ್ಚ ಹಾಗೂ ಅವರ ತಾಯಿಯ ನಡುವೆ ಇದ್ದ ಪ್ರೀತಿ ಅಪಾರವಾದ್ದು, ಈ ಇಬ್ಬರ ಬಂದ ಎಂತಹದ್ದು ಎಂಬುದನ್ನು ವರ್ಣಿಸುವುದಕ್ಕೂ ಸಾಧ್ಯವಾಗುವುದಿಲ್ಲ.
ಅಮ್ಮನೆಂದರೆ ಕಿಚ್ಚನಿಗೆ ಬಾಲ್ಯದಿಂದಲೂ ಪ್ರಾಣ. ಈ ಹಿಂದೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದಾಗ ಅಲ್ಲೊಂದು ಚಂದದ ಘಟನೆ ನಡೆದಿತ್ತು. ವೀಕೆಂಡ್ ವಿತ್ ರಮೇಶ್ನ ಶೋನಲ್ಲಿ ಅತಿಥಿಯಾಗಿ ಕಿಚ್ಚ ಹೋಗಿದ್ದಾಗ ಅವರ ತಾಯಿ ಅವರಿಗಾಗಿ ಒಂದು ಉಡುಗೊರೆ ಕಳಿಸಿದ್ದರು. ಆ ಉಡುಗೊರೆ ಏನು ಗೊತ್ತಾ?
ಕಿಚ್ಚ ಅವರಿಗೆ ರಮೇಶ್ ತಾಯಿ ಕಡೆಯಿಂದ ಒಂದು ಗಿಫ್ಟ್ ಕೊಟ್ಟರು. ಅದನ್ನು ನೋಡುತ್ತಲೇ ಅದು ಯಾವಾಗಿನ ವಸ್ತು, ಎಲ್ಲಿಂದ ಖರೀದಿಸಿದ್ದು, ಹೇಗೆ ಖರೀದಿಸಿದ್ದು ಇತ್ಯಾದಿ ಎಲ್ಲ ವಿಚಾರವನ್ನು ಕಿಚ್ಚ ಹೇಳಿದ್ದರು. ಅದೊಂದು ಸೀರೆಯಾಗಿತ್ತು. ನಟ ಕಿಚ್ಚ ಅವರು 7ನೇ ತರಗತಿಯಲ್ಲಿದ್ದಾಗ ಅಮ್ಮನಿಗಾಗಿ ತೆಗೆದ ಮೊದಲ ಉಡುಗೊರೆ. ಇದನ್ನು ನೋಡುತ್ತಲೇ ಕಿಚ್ಚ ತಾನು ಅಮ್ಮನಿಗೆ ಕೊಟ್ಟ ಮೊದಲ ಗಿಫ್ಟ್ ನೆನಪಿಸಿಕೊಂಡಿದ್ದರು. ಹಳೆಯ ನೆನಪುಗಳನ್ನು ನೆನೆಯುತ್ತಾ, ಆಗಿನ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು ಸುದೀಪ್ ಅವರು ತಂದುಕೊಟ್ಟಿದ್ದ ಈ ವಿಶೇಷ ಉಡುಗೊರೆಯನ್ನು ಅವರ ತಾಯಿ ಇಂದಿಗೂ ಭದ್ರ ಪಡಿಸಿ ಇಟ್ಟುಕೊಂಡಿದ್ದರಂತೆ.