ಕೆಲವು ದಿನಗಳಿಂದ ಬಚ್ಚನ್ ಕುಟುಂಬದಲ್ಲಿ ವಿಚ್ಛೇದನದ ವದಂತಿಗಳು ತುಂಬಾ ಜೋರಾಗಿಯೇ ಹರಿದಾಡುತಾ ಇದ್ದವು. ಆದರೆ ಕುಟುಂಬದ ಸದಸ್ಯರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸಧ್ಯ ಈ ವಿಚಾರದ ಬಗ್ಗೆ ಅಭಿಷೇಕ್ ಬಚ್ಚನ್ ಮೌನ ಮುರಿದಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ವಿಚ್ಛೇದನ ವದಂತಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗಾಗಲೇ ಇವರು ಬೇರೆ ಬೇರೆ ಆಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ನಾನಿನ್ನೂ ವಿವಾಹಿತ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದರಿಂದ ಅಭಿಷೇಕ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಇತ್ತೀಚೆಗೆ ಒಟ್ಟಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅನಂತ್ ಅಂಬಾನಿ ಮದುವೆಗೂ ಇವರು ಪ್ರತ್ಯೇಕವಾಗಿ ಬಂದಿದ್ದು ಚರ್ಚೆ ಹುಟ್ಟುಹಾಕಿತು. ಆ ಬಳಿಕ ಡಿವೋರ್ಸ್ಗೆ ಸಂಬಂಧಿಸಿದ ಪೋಸ್ಟ್ ಲೈಕ್ ಮಾಡಿ ಅವರು ಸುದ್ದಿ ಆದರು. ಅಭಿಷೇಕ್ ಬಚ್ಚನ್ ಅವರು ಮಾಧ್ಯಮಗಳ ಕೈಗೆ ಸಿಗುತ್ತಿಲ್ಲ. ಪ್ರೆಸ್ಮೀಟ್ಗಳಲ್ಲಿ ಭಾಗಿ ಆಗುತ್ತಿಲ್ಲ. ಹೀಗಿರುವಾಗಲೇ ಅವರು ವಿದೇಶಿ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
‘ವದಂತಿಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ನೀವೆಲ್ಲರೂ ಬೇರೆ ರೀತಿಯಲ್ಲೇ ಸುದ್ದಿ ಪ್ರಕಟಿಸಿದ್ದೀರಿ. ನೀವು ಏನ್ನಾದರೂ ಒಂದು ಸುದ್ದಿ ಪ್ರಕಟಿಸಬೇಕು. ಅದು ನನಗೆ ಅರ್ಥವಾಗುತ್ತದೆ. ನಾವು ಸೆಲೆಬ್ರಿಟಿಗಳು ಅದನ್ನು ತೆಗೆದುಕೊಳ್ಳಬೇಕು’ ‘ನಾನಿನ್ನೂ ವಿವಾಹಿತ’ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.