ನವೆಂಬರ್ 1 ರಂದು ನಟ ಡಾಲಿ ಧನಂಜಯ್, ತಾವು ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದರು. ಯಾವುದೇ ಸುಳಿವು ನೀಡದೆ ಮದುವೆ ಸುದ್ದಿ ಕೊಟ್ಟಿದ್ದೂ ಅಲ್ಲದೆ, ತಾವು ಮದುವೆ ಆಗುತ್ತಿರುವ ಹುಡುಗಿಯನ್ನು ಪರಿಚಯಿಸಿದ್ದರು. ಇಂದು ಧನಂಜಯ್ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ.
ಇದನ್ನು ಓದಿ: ಡಿಕೆಶಿ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ, ಸರ್ಕಾರಕ್ಕೆ “ಸುಪ್ರೀಂ” ನೋಟಿಸ್!
ಶುಕ್ರವಾರವೇ ಮಂತ್ರಾಲಯಕ್ಕೆ ತೆರಳಿದ್ದ ಡಾಲಿ ಧನಂಜಯ್ ಶನಿವಾರ ಬೆಳಗಿನ ಜಾವ ರಾಯರ ಮಠಕ್ಕೆ ತೆರಳಿ ಗುರು ರಾಘವೇಂದ್ರರ ದರ್ಶನ ಪಡೆದರು. ಬಿಳಿ ಬಣ್ಣದ ಪಂಚೆ, ಷರ್ಟ್, ಶಲ್ಯ ಧರಿಸಿ ಧನಂಜಯ್ ದೇವಸ್ಥಾನಕ್ಕೆ ತೆರಳಿದ್ದರು. ಧನಂಜಯ್ ಅವರನ್ನು ನೋಡಿ ತೆಲುಗು, ಕನ್ನಡ ಅಭಿಮಾನಿಗಳು ಅವರ ಜೊತೆ ಮಾತನಾಡಲು, ಫೋಟೋ ತೆಗೆಸಿಕೊಳ್ಳಲು ಮುಗಿ ಬಿದ್ದರು. ವಿಶೇಷ ಪೂಜೆ ಬಳಿಕ ಧನಂಜಯ್, ತಮ್ಮ ಬಳಿ ಫೋಟೋ ಕೇಳಿದವರಿಗೆ ತಾಳ್ಮೆಯಿಂದಲೇ , ನಗುತ್ತಾ ನಿಂತು ಫೋಟೋಗೆ ಪೋಸ್ ಕೊಟ್ಟರು. ಡಾಲಿ ಅವರನ್ನು ಆವರಿಸಿದ್ದ ಜನರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರು. ನಂತರ ಅವರನ್ನು ಸುರಕ್ಷಿತವಾಗಿ ಅವರ ಕಾರಿನವರೆಗೂ ಬಿಟ್ಟು ಬಂದರು.ಮುಂದಿನ ವಾರ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ ರಿಲೀಸ್ ಆಗುತ್ತಿದ್ದು ಬಹುಶಃ ಇದೇ ಕಾರಣಕ್ಕೆ ಧನಂಜಯ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ.